ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ಎಚ್‌ಡಿಕೆ ಮಲ್ನಾಡ್ ಬ್ರಿಗೇಡ್ ಆಗ್ರಹ

By Suvarna News  |  First Published Jul 13, 2021, 11:07 PM IST

* ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರಿಡಲು ಆಗ್ರಹ
* ರಾಷ್ಟ್ರಕವಿ ಕುವೆಂಪು ಅವರ ಹೆಸರು ನಾಮಕರಣ ಮಾಡಬೇಕೆಂದು ಎಚ್‌ಡಿಕೆ ಮಲ್ನಾಡ್ ಬ್ರಿಗೇಡ್ ಆಗ್ರಹ
* ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಚ್‌ಡಿಕೆ ಮಲ್ನಾಡ್ ಬ್ರಿಗೇಡ್


ಶಿವಮೊಗ್ಗ, (ಜು.13): ಜಿಲ್ಲೆಯ ಸೊಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ನಾಮಕರಣ ಮಾಡಬೇಕೆಂದು ಎಚ್‌ಡಿಕೆ ಮಲ್ನಾಡ್ ಬ್ರಿಗೇಡ್ ಆಗ್ರಹಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಚ್‌ಡಿಕೆ ಮಲ್ನಾಡ್ ಬ್ರಿಗೇಡ್, ಶಿವಮೊಗ್ಗ ಮಲೆನಾಡಿನ ತವರೂರು, ಕಲೆ-ಸಾಹಿತ್ಯಗಳ ನೆಲೆಬೀಡು, ಚಳುವಳಿಗಳ ನೆಲೆ, ಸಾಮಾಜಿಕ ಹೋರಾಟಗಳ ಮೂಲಕ ರಾಜ್ಯದ ಗಮನ ಸೆಳೆದ ಶಿವಮೊಗ್ಗ ನಗರದಲ್ಲಿ ವಿಮಾನ ನಿಲ್ದಾಣ ಬಹುದಿನದ ಕನಸು ಆಗಿದೆ. ಇದರ ಹಿಂದೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಶ್ರಮ ಹಾಗೂ ಪ್ರಯತ್ನಗಳು ಶ್ಲಾಘನೀಯ ಹಾಗೂ ಸ್ವಾಗತಾರ್ಹ ವಿಷಯವೂ ಆಗಿದೆ.

Tap to resize

Latest Videos

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರಿಡಲು ಮನವಿ

 ಆದರೆ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮೆರಗು ನೀಡಿ ಮರು ಯೋಜನೆ ರೂಪಿಸಿ ಕಾಮಗಾರಿಗೆ ತ್ವರಿತಗತಿಯಲ್ಲಿ ಚಾಲನೆ ನೀಡಿರುವುದರ ನಡುವೆಯೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಾಂಕಿತಗೊಳಿಸುವ ಅನೇಕ ಪ್ರಸ್ತಾಪಗಳು ಭಾರಿ ಚರ್ಚೆಯಲ್ಲಿವೆ.
 
ಇದನ್ನು ಮನಗಂಡು ಎಚ್‌ಡಿಕೆ ಮಲ್ನಾಡ್ ಬ್ರಿಗೇಡ್ ಸಾರ್ವಜನಿಕವಾಗಿ ಒತ್ತಾಯಿಸಲು ಇಚ್ಚಿಸಿ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಸರಕಾರವು ಅಂತಿಮಗೊಳಿಸಿ ಈ ಸಂಬಂಧಿಸಿದಂತೆ ಚರ್ಚಿಸಲಾಗುತ್ತಿರುವ ಉಹಾಪೋಹಗಳಿಗೆ ತೆರೆ ಎಳೆಯಬೇಕೆಂದು ವಿನಂತಿಸಿದೆ.

ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ಶಾಶ್ವತ ಕನ್ನಡ ಧ್ವಜಸ್ತಂಭದ ಸ್ಥಾಪನೆ ಮಾಡಿ ಕನ್ನಡದ ಸ್ವಾಭಿಮಾನ ಭಾವುಟವನ್ನು ಸದಾ ಹಾರಾಡುವಂತಾಗಬೇಕೆಂದು ಎಚ್ಡಿಕೆ ಮಲ್ನಾಡ್ ಬ್ರಿಗೇಡ್ ಈ ಮೂಲಕ ಆಗ್ರಹಿಹಿಸಿದೆ.

 ಯಾವುದೇ ಜಾತಿ-ಮತ-ಪಂಥಗಳ ಬೇದವಿಲ್ಲದೆ ಸೌಹಾರ್ಧಯುತವಾಗಿ ಸೇರಿಕೊಳ್ಳುವ ಕನ್ನಡ ಈ ನೆಲದ ಅಸ್ಮಿತೆಯಾಗುತ್ತದೆ ಹಾಗೂ ಮಾದರಿಯೂ ಆಗುತ್ತದೆ ಅಲ್ಲದೆ ಕನ್ನಡದ ಭಾಷೆ, ಸ್ವಾಭಿಮಾನ, ಏಕತೆ. ವಿಶ್ವಮಾನವತಾ ವಾದ ಈ ಮೂಲಕ ಪಸರಿಸಲು ಮತ್ತಷ್ಟು ಸಹಕಾರಿಯಾಗಲಿದೆ ಎಂದು ಎಚ್ಡಿಕೆ ಮಲ್ನಾಡ್ ಬ್ರಿಗೇಡ್ ಈ ಮೂಲಕ ಸರಕಾರಕ್ಕೆ ತಿಳಿಸಿದೆ.

 ಹೆಸರಿಡುವುದೇ ವಿವಾದವಾಗದಿರಲಿ ಎನ್ನುವ ಕಾರಣಕ್ಕೆ ಮಲೆನಾಡಿನ ಈ ನೆಲೆಯನ್ನು ವಿಶ್ವಮಟ್ಟಕ್ಕೆ ಕೊಂಡೋಯ್ದು ಸಾಹಿತ್ಯದ ನೆಲೆಯನ್ನಾಗಿಸಿದ ಅಗ್ರಗಣ್ಯರು ಮಾನವತಾವಾದದ ಕವಿ ಕುವೆಂಪುರವರ ಹೆಸರು ಎಲ್ಲಾ ಸಂಘಟಿತ ವೇದಿಕೆಗಳು ಸೂಚಿಸಲಿ ಎನ್ನುವುದು ಎಚ್ಡಿಕೆ ಮಲ್ನಾಡ್ ಬ್ರಿಗೇಡ್ ಹೇಳಿದೆ.

click me!