ನಾನು ಮಂತ್ರಿ ಸ್ಥಾನ ಬಿಟ್ಮೇಲೆ ಹಾಸನ ಸುತ್ತ ಬುಲ್ಡೋಜರ್ ಓಡಾಡ್ತಿದೆ: ರೇವಣ್ಣ

By Suvarna NewsFirst Published Mar 21, 2020, 3:46 PM IST
Highlights

ನಾನು ಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಹಾಸನದ ಸುತ್ತ ಬುಲ್ಡೋಜರ್‌ಗಳು ಓಡಾಡ್ತಿವೆ ಎಂದು ಮಾಜಿ ಸಚಿವ ಎಚ್‌. ಡಿ. ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು ಕೊರೋನಾ ವೈರಸ್‌ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

ಹಾಸನ(ಮಾ.21): ನಾನು ಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಹಾಸನದ ಸುತ್ತ ಬುಲ್ಡೋಜರ್‌ಗಳು ಓಡಾಡ್ತಿವೆ ಎಂದು ಮಾಜಿ ಸಚಿವ ಎಚ್‌. ಡಿ. ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು ಕೊರೋನಾ ವೈರಸ್‌ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

ಹಾಸನದಲ್ಲಿ ಮಾಜಿ ಸಚಿವ ಹೆಚ್. ಡಿ.ರೇವಣ್ಣ ಮಾತನಾಡಿ, ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಇಂತಹ ಕರೋನಾ ರೋಗ ಬಂದಿದೆ. ಕರೋನಾ ಸೋಂಕಿತ 18 ಜನರ ಪೈಕಿ ಈಗ 12 ಜನರಿಗೆ ನೆಗೆಟಿವ್ ಬಂದಿದೆ. ಕೊರೋನಾ ಕರ್ಫ್ಯೂನಿಂದಾಗಿ ಸರ್ಕಾರ ಬೀದಿಬದಿ ವ್ಯಾಪಾರಿಗಳಿಗೆ ಪರಿಹಾರ ನೀಡಬೇಕು. ಜನತಾ ಕರ್ಫ್ಯೂ ಮಾಡಿರುವ ಪ್ರಧಾನಿಯವರ ಕಾರ್ಯ ಒಳ್ಳೆಯದು ಎಂದಿದ್ದಾರೆ.

ಸರ್ಕಾರದ ಎಚ್ಚರಿಕೆಗೆ ಎಚ್‌.ಡಿ ರೇವಣ್ಣ ಡೋಂಟ್‌ ಕೇರ್..!

ಕೆಲ ಜನರಿಗೆ ಒಂದು ದಿನ ದುಡಿದರೆ ಮಾತ್ರ ಅನ್ನ ಸಿಗುತ್ತೆ ಇಲ್ಲದಿದ್ದರೆ ಇಲ್ಲ. ಅಂತಹವರಿಗೆ ಪ್ರಧಾನಿಯವರು ಪರಿಹಾರ ನೀಡಬೇಕು. ಕೂಲಿ ಕಾರ್ಮಿಕರು ಬೀದಿಬದಿ ವ್ಯಾಪಾರಿಗಳಿಗೆ ಪರಿಹಾರ ನೀಡುವಂತೆ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ. ಜನರಿಗೆ ಪರಿಹಾರಕ್ಕೆ ಪ್ರತೀ ಜಿಲ್ಲೆಗೆ ಐದು ಕೋಟಿ ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.

ಹಾಸನದ ಸುತ್ತಮುತ್ತ ಕೃಷಿ ಜಮೀನನ್ನು ಪರಿವರ್ತಿಸಿ ಖಾಸಗಿ ಬಡಾವಣೆ ಮಾಡಲಾಗುತ್ತಿದೆ. ಹಾಸನದಲ್ಲಿ ಲೇಔಟ್ ದಂಧೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಏನು ಮಾಡುತ್ತಿದ್ದಾರೆ ಎಂದು ರೇವಣ್ಣ ಪ್ರಶ್ನಿಸಿದ್ದಾರೆ.

ನಿನ್ನೆ ಥರ್ಮಲ್ ಸ್ಕ್ರೀನಿಂಗ್ ಮಾಡಿಸದ ರೇವಣ್ಣ ಇಂದು ಮತ್ತೊಂದು ಕಿರಿಕ್!

ನಾನು ಮಂತ್ರಿ ಸ್ಥಾನದಿಂದ ಇಳಿದ ತಕ್ಷಣವೇ ಈ ಲೇಔಟ್ ದಂಧೆ ಶುರುವಾಗಿದೆ. ನಾನು ಮಂತ್ರಿಯಿಂದ ಕೆಳಗೆ ಇಳಿದ ತಕ್ಷಣ ಹಾಸನದ ಸುತ್ತಮುತ್ತ ಬುಲ್ಡೇಜರ್ ಗಳು ಓಡಾಡ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಕೊರೋನಾ ವೈರಸ್‌ ತಪಾಸಣೆ ನಿರಾಕರಿಸಿ ಸುದ್ದಿಯಾಗಿದ್ದರು.

click me!