'ಎಚ್‌ಡಿಕೆ ಮಾಡಿದ್ದನ್ನೆಲ್ಲಾ ಬಿಜೆಪಿ ಬುಡಮೇಲು ಮಾಡ್ತಿದೆ '

Kannadaprabha News   | Asianet News
Published : Oct 04, 2020, 11:56 AM ISTUpdated : Oct 04, 2020, 12:31 PM IST
'ಎಚ್‌ಡಿಕೆ ಮಾಡಿದ್ದನ್ನೆಲ್ಲಾ ಬಿಜೆಪಿ ಬುಡಮೇಲು ಮಾಡ್ತಿದೆ '

ಸಾರಾಂಶ

ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಡಿದ್ದೆಲ್ಲವನ್ನು ಬಿಜೆಪಿ ಬುಡಮೇಲು ಮಾಡಿದೆ ಎಂದು ಆರೋಪ ಮಾಡಲಾಗಿದೆ

ಬೇಲೂರು (ಅ.04):  ಬಿಜೆಪಿ ಸರ್ಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆರೋಪಿಸಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ಶುಕ್ರವಾರ ಸಂಜೆ ಬೇಲೂರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬೇಲೂರಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಂದಂತ ಹಣವನ್ನು ಹಿಂಪಡೆಯುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.

ಶಿರಾ ಬೈ ಎಲೆಕ್ಷನ್: ಕುಮಾರಸ್ವಾಮಿ ಭಾವನಾತ್ಮಕ ಮಾತು...! ...

ಈ ಹಿಂದೆ ಸಮ್ಮಿಶ್ರ ಸರ್ಕಾರ ಇದ್ದ ಕಾಲದಲ್ಲಿ ಕೇಂದ್ರ ಸಚಿವರಾಗಿದ್ದ ನಿತಿನ್‌ ಗಡ್ಕರಿ ಅವರು 300 ಕೋಟಿ ರು. ರಸ್ತೆ ಅಭಿವೃದ್ಧಿಗೆ ಶಂಕು ಸ್ಥಾಪನೆ ಮಾಡಿ ಹೋಗಿದ್ದರು. ಈಗಿನ ಪಿಡಬ್ಲ್ಯು ಮಿನಿಸ್ಟರ್‌ಗಳ ಸ್ವಂತ ಸ್ಥಳಕ್ಕೆ ವರ್ಗಾವಣೆ ಮಾಡಿದ್ದಾರೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬೇಲೂರಿನ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ರೈತಾಪಿ ವರ್ಗಕ್ಕೆ ಅನುಕೂಲವಾಗುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರಕ್ಕೆ ಬೇಲೂರು ಚಿಕ್ಕಮಗಳೂರು, ಹಾಸನ ಮೂಲಕ ಬೆಗಳೂರಿಗೆ ರೈಲ್ವೆ ಸಂಪರ್ಕಕ್ಕೆ ಒಂದೂವರೆ ವರ್ಷದ ಹಿಂದೆ ಕೇಂದ್ರ ಸಚಿವರ ಬಳಿ ಚರ್ಚಿಸಿ ಅನುಮೋದನೆ ಮಾಡಲಾಯಿತು.

ಅದನ್ನು ಹಿಂಪಡೆದು ಕೊಂಡಿರುತ್ತಾರೆ. ಕುಮಾರಸ್ವಾಮಿ ಸರ್ಕಾರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 15 ಕೋಟಿ ಹಣ ಹಾಗೂ ಬೇಲೂರು ಪುರಸಭೆಗೆ ನಗರೋತ್ಥಾನದಿಂದ 8 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿತ್ತು.

ಅದನ್ನು ಹಿಂಪಡೆದುಕೊಂಡಿರುವ ಬಗ್ಗೆ ಕಲಾಪ ಮುಗಿದ ನಂತರ ಮುಖ್ಯಮಂತ್ರಿ ಬಳಿ ಚರ್ಚಿಸಿ ದ್ವೇಷದ ರಾಜಕಾರಣ ಮಾಡದೆ ಹಣ ಬಿಡುಗಡೆ ಮಾಡಿ ಎಂದು ಕೇಳಿದ್ದೇವೆ.ಅಲ್ಲದೆ ಕೊರೊನಗೆ ಹೆದರಿ ಗ್ರಾಮೀಣ ಭಾಗದ ಜನರು ಸರ್ಕಾರಿ ಆಸ್ಪತ್ರೆಗೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ಬಂದರೆ ನಮ್ಮ ಸಾವು ಖಚಿತ ಎಂದು ಹೆದರುವ ಸ್ಥಿತಿ ಇರುವುದರಿಂದ ಯಾರೂ ಸಹ ಬರುತ್ತಿಲ್ಲ.ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಲೂಟಿ ಹೊಡೆಯುವ ಬದಲು ಕೆಲವು ಖಾಸಗಿ ಆಸ್ಪತ್ರೆಗಳನ್ನು ಸರ್ಕಾರವೇ ವಿಷೇಶ ಸವಲತ್ತು ನೀಡಿ ಬಡವರ್ಗದ ಸೊಂಕಿತರಿಗೆ ಒಳ್ಳೆಯ ಚಿಕಿತ್ಸೆ ನೀಡುವಂತೆ ಕಲಾಪದಲ್ಲಿ ಚರ್ಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಕೆಎಸ್‌ ಲಿಂಗೇಶ್‌, ತಾಲೂಕು ಅಧ್ಯಕ್ಷ ತೊಚ ಅನಂತ ಸುಬ್ಬರಾಯ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ನಾಗೇಶ್‌ ಯಾದವ್‌, ಬಿಡಿ ಚಂದ್ರೇಗೌಡ, ಮಾರುತಿ ಚಂದ್ರು, ಎಂಕೆಆರ್‌ ಸೋಮೇಶ್‌ ಹಾಜರಿದ್ದರು.

PREV
click me!

Recommended Stories

ಅಡಿಕೆ ತೋಟದ ದುರಂತ: ಗೊನೆ ಕೊಯ್ಯುವಾಗ ಆಯತಪ್ಪಿ ಬಿದ್ದ ಕಾರ್ಮಿಕ ಸಾವು
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!