ಕೊನೆಗೂ ಕಂದಮ್ಮನ ಬಳಿ ಬಾರದ ತಾಯಿ ಆನೆ! ಕಣ್ಣೀರಿಡುತ್ತಲೇ ತೆರಳಿದ ಮರಿಯಾನೆ

By Suvarna NewsFirst Published Oct 4, 2020, 11:08 AM IST
Highlights

ಕೊನೆಗೂ ಕಂದಮ್ಮನ ಬಳಿಕೆ ತಾಯಿ ಆನೆ ಬಾರದ ಹಿನ್ನೆಲೆ ಕಣ್ಣಿರಿಡುತ್ತಲೇ ಪುಟ್ಟ ಮರಿಯಾನೆ ಅಲ್ಲಿಂದ ತೆರಳಿದೆ.

ಸಕಲೇಶಪುರ (ಅ.04):  ಕಳೆದ ನಾಲ್ಕು ದಿನಗಳ ಹಿಂದೆ ಮಳಲಿ ಗ್ರಾಮದಲ್ಲಿ ಹೆಣ್ಣು ಮರಿಗೆ ಜನ್ಮ ನೀಡಿದ್ದ ಕಾಡಾನೆಯೊಂದು ಎರಡು ದಿನಗಳಾದರೂ ಮರಿಯಾನೆ ಬಳಿಗೆ ಬಾರದೆ ಇದಿದ್ದರಿಂದ್ದ ಅರಣ್ಯ ಅಧಿಕಾರಿಗಳು ಹೆಚ್ಚಿನ ಚಿಕಿತ್ಸೆಗೆಂದು ಮರಿಯಾನೆಯನ್ನು  ಸ್ಥಳಾಂತರ ಮಾಡಿದ್ದಾರೆ.

ತಾಲೂಕಿನ ಅನಿಲ್‌ ಎಂಬುವವರ ಕಾಫಿ ತೋಟದಲ್ಲಿ ಕಾಡಾನೆಯೊಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು ಸರಿಯಷ್ಟೇ. ಆದರೆ ಜನ್ಮ ನೀಡಿದ ಕ್ಷಣದಿಂದಲೇ ಮರಿಯಾನೆಗೆ ನಿತ್ರಾಣಗೊಂಡು ಗಾಯದಿಂದ ನರಳಾಡುತ್ತಿತ್ತು. ಸತತ ಎರಡು ದಿನಗಳಿಂದ ಮರಿಯನ್ನು ಮೇಲೆ ಹೇಳಿಸಲು ಪ್ರಯತ್ನಪಟ್ಟತಾಯಿಯಾನೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಸಹಾಯಕತೆಯಿಂದ ನೋವಿನಿಂದ ಮರೆಯೋದು ಬಿಟ್ಟು ಹೋಗಿತ್ತು.

ಜನ್ಮ ಕೊಟ್ಟು ಬಿಟ್ಟು ಹೋದ ತಾಯಿ, ಮರಿಯಾನೆ ಪರಿಸ್ಥಿತಿ ಕಂಡು ಮರುಗುತ್ತಿರೋ ಜನ ...

ಇತ್ತ ಮರಿಯಾನೆ ತಾಯಿಯ ಆರೈಕೆ ಇಲ್ಲದೆ ಗಾಯದಿಂದ ನರಳಾಡುತ್ತಿತ್ತು. ಅರಣ್ಯ ಇಲಾಖೆಯ ವೈದ್ಯರು ಎರಡು ದಿನಗಳಿಂದ ಜನ್ಮ ನೀಡಿದ ಸ್ಥಳದಲ್ಲಿಯೇ ಚಿಕಿತ್ಸೆ ನೀಡುತ್ತಿದ್ದರು. ಆದರೆ ಮರಿಯಾನೆಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇರುವುದರಿಂದ ಹಾಗೂ ತಾಯಿ ಪ್ರೀತಿಯ ನೀಡುವ ಸಲುವಾಗಿ ಸಕ್ರೆಬೈಲು ಅರಣ್ಯಧಾಮಕ್ಕೆ ಸ್ಥಳಾಂತರಗೊಳಿಸಿದ್ದಾರೆ.

ಈ ವೇಳೆ ವನ್ಯಜೀವಿ ವೈದ್ಯರಾದ ಮುರಳಿ ಅವರು ಮಾತನಾಡಿ, ಅರಣ್ಯ ಇಲಾಖೆ ಅ​ಕಾರಿಗಳು ಎರಡು ದಿನಗಳಿಂದ ತಾಯಿಯ ಬರುವಿಕೆಗಾಗಿ ಕಾಯುತ್ತಿದ್ದರು. ಆದರೆ ತಾಯಿಯಾನೆ ಮರಿಯನ್ನು ಹುಡುಕಿಕೊಂಡು ಪುನ್ಹ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆಗಾಗಿ ಸ್ಥಳಾಂತರ ಮಾಡಿದ್ದೇವೆ.

ಮರಿಗೆ ಎರಡು ಕಾಲುಗಳು ಹಾಗೂ ಕೀಲುಗಳು ಊತಗೊಂಡಿರುವ ಸಾಧ್ಯತೆ ಇದೆ. ಹಾಗಾಗಿ ಹಾಸನದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಎಕ್ಸರೇ ಹಾಗೂ ರಕ್ತದ ಮಾದರಿಯನ್ನು ಪಡೆದು ಪರೀಕ್ಷಿಸಲಾಗಿದೆ . ಮರಿಯಾನೆಗೆ ಯಾವುದೇ ಜೀವ ಅಪಾಯವಿಲ್ಲ. ಆದರೆ ತಾಯಿಯ ಆರೈಕೆಯಲ್ಲಿ ಬೆಳೆಯ ಬೇಕಾಗಿರುವುದರಿಂದ ಸಕ್ರೆಬೈಲು ಅರಣ್ಯಧಾಮಕ್ಕೆ ಕಳುಹಿಸಿ ಕೊಡುತ್ತಿದ್ದೇವೆ ಎಂದು ಹೇಳಿದರು.

ಕಾರ್ಯಾಚರಣೆ ವೇಳೆ ಉಪ ಅರಣ್ಯ ಸಂರಕ್ಷಣಾಧಿ​ಕಾರಿ ಶಿವರಾಮ್‌ ಬಾಬು, ಸಕಲೇಶಪುರ ವಲಯ ಅರಣ್ಯ ಅ​ಧಿಕಾರಿ ರಾಘವೇಂದ್ರ ಅಗಸೆ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ವೈದ್ಯರ ತಂಡ ಹಾಜರಿದ್ದರು.

click me!