ಪಾಕಿ ಬಿಜೆಪಿಗರಿಗೆ ಗ್ರಾಮೀಣ ಸೊಗಡು ಗೊತ್ತಿಲ್ಲಣ್ಣ: ‘ಮಿಣಿ ಮಿಣಿ’ ಅರ್ಥ ಹೇಳಿದ ಕುಮಾರಣ್ಣ!

Suvarna News   | Asianet News
Published : Jan 28, 2020, 01:23 PM ISTUpdated : Jan 29, 2020, 11:20 AM IST
ಪಾಕಿ ಬಿಜೆಪಿಗರಿಗೆ ಗ್ರಾಮೀಣ ಸೊಗಡು ಗೊತ್ತಿಲ್ಲಣ್ಣ: ‘ಮಿಣಿ ಮಿಣಿ’ ಅರ್ಥ ಹೇಳಿದ ಕುಮಾರಣ್ಣ!

ಸಾರಾಂಶ

‘ಮಿಣಿ ಮಿಣಿ’ ಎಂದರೆ......ಕುಮಾರಸ್ವಾಮಿ ಸ್ಪಷ್ಟನೆ| ‘ಮಿಣಿ ಮಿಣಿ’ ಪದದ ಅರ್ಥ ಹೇಳಿದ ಮಾಜಿ ಮುಖ್ಯಮಂತ್ರಿ| ‘ಗ್ರಾಮೀಣ ಭಾಷೆಯಲ್ಲಿ ಹೊಳೆಯುವ ಪದಾರ್ಥಕ್ಕೆ ಮಿಣಿ ಮಿಣಿ ಎನ್ನುತ್ತಾರ’| ‘ಬಿಜೆಪಿ ಗ್ರಾಮೀಣ ಸೊಗಡಿನ ಭಾಷೆ ಕುರಿತು ಲಘುವಾಗಿ ಮಾತನಾಡುತ್ತಿದೆ’| ‘ಬಿಜೆಪಿಗರ ಜಿನ್ ಪಾಕಿಸ್ತಾನದಲ್ಲಿದ್ದು ಇವರಿಗೆ ಕನ್ನಡ ಭಾಷೆಯ ಪದ ಬಳಕೆ ಗೊತ್ತಿಲ್ಲ’| ಟ್ವೀಟ್ ಮೂಲಕ ಬಿಜೆಪಿ ನಾಯಕರ ವಿರುದ್ಧ  ಹರಿಹಾಯ್ದ ಕುಮಾರಸ್ವಾಮಿ|

ಬೆಂಗಳೂರು(ಜ.28): ತಮ್ಮ ‘ಮಿಣಿ ಮಿಣಿ’ ಪದ ಪ್ರಯೋಗವನ್ನು ಟ್ರೋಲ್ ಮಾಡಿರುವ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಿಣಿ ಮಿಣಿ ಪದದ ಅರ್ಥವನ್ನು ತಿಳಿಸಿದ್ದಾರೆ.

"

ಗ್ರಾಮೀಣ ಭಾಷೆಯಲ್ಲಿ ಹೊಳೆಯುವ ಪದಾರ್ಥಕ್ಕೆ ಮಿಣಿ ಮಿಣಿ ಎಂದು ಕರೆಯಲಾಗುತ್ತದೆ. ಇದು ಶುದ್ಧ ಕನ್ನಡ ಪದವಾಗಿದ್ದು, ಇದನ್ನು ಅಪಮಾನಗೊಳಿಸುವ ಕೆಲಸದಲ್ಲಿ ಬಿಜೆಪಿಗರು ನಿರತರಾಗಿದ್ದಾರೆ ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ, ಗ್ರಾಮೀಣ ಸೊಗಡಿನ ಭಾಷೆ ಕುರಿತು ಲಘುವಾಗಿ ಮಾತನಾಡುತ್ತಿರುವ ಬಿಜೆಪಿಗರು ರಾಜ್ಯವನ್ನು ಅಪಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕುಮಾರಸ್ವಾಮಿಯ ಬ್ರೈನ್‌ ಮ್ಯಾಪಿಂಗ್‌ ಅಗತ್ಯ: ಬಿಜೆಪಿ

ಎಷ್ಟೇ ಆದರೂ ಬಿಜೆಪಿಗರ ಜಿನ್ ಪಾಕಿಸ್ತಾನದಲ್ಲಿದ್ದು, ಇವರಿಗೆ ಕನ್ನಡ ಭಾಷೆಯ ಪದ ಬಳಕೆ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಟ್ವೀಟ್’ನಲ್ಲಿ ವ್ಯಂಗ್ಯವಾಡಿದ್ದಾರೆ.

ಮಂಗಳೂರು ಬಾಂಬ್ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡುವ ವೇಳೆ, ಪಟಾಕಿ ತಯಾರಿಸುವ ಮಿಣಿ ಮಿಣಿ ಪೌಡರ್ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟ್ರೋಲ್’ಗೆ ಒಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!