ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದು, ಮುಖ್ಯಮಂತ್ರಿ ಕುರ್ಚಿಯ ಮೇಲಿನ ವ್ಯಾಮೋಹ ಬಿಡದ ಕಾರಣ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಪದೇ ಪದೇ ಟೀಕೆ ಮಾಡುತ್ತಿದ್ದಾರೆ ಎಂದು ಶಾಸಕ ಡಾ.ಕೆ. ಸುಧಾಕರ್ ಲೇವಡಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ(ಜ.28): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದು, ಮುಖ್ಯಮಂತ್ರಿ ಕುರ್ಚಿಯ ಮೇಲಿನ ವ್ಯಾಮೋಹ ಬಿಡದ ಕಾರಣ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಪದೇ ಪದೇ ಟೀಕೆ ಮಾಡುತ್ತಿದ್ದಾರೆ ಎಂದು ಶಾಸಕ ಡಾ.ಕೆ. ಸುಧಾಕರ್ ಲೇವಡಿ ಮಾಡಿದ್ದಾರೆ.
ತಾಲೂಕಿನ ಪೈಲಗುರ್ಕಿ ಸಮೀಪ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಭೂಮಿಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಕೂತಿದ್ದ ಕುರ್ಚಿಯ ಮೇಲೆ ಯಡಿಯೂರಪ್ಪ ಕೂತಿದ್ದಾರೆ ಎಂಬ ಕಾರಣಕ್ಕೆ ಅಸಹನೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದಿದ್ದಾರೆ.
ಗುರುವಾರ ಕಳೆಯಲಿ
ಅನರ್ಹ ಶಾಸಕರು ಬಿಜೆಪಿ ಸೇರಿ ಅತಂತ್ರರಾಗಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಧಾಕರ್, ಗುರುವಾರ ಕಳೆಯಲಿ ಯಾರು ಅತಂತ್ರರು ಮತ್ತು ಯಾರು ರಾಜ್ಯದಲ್ಲಿ ಆಡಳಿತ ನಡೆಸುತ್ತಾರೆ ಎಂಬುದು ಅರಿವಾಗಲಿದೆ. ಬುಧವಾರ ಅಥವಾ ಗುರುವಾರ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಈ ವಿಚಾರವನ್ನು ಸುತ್ತೂರಿನಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಗೆ 96 ನಾಮಪತ್ರ, ಪಕ್ಷೇತರರೇ ಅಧಿಕ
ನೂತನ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ತ್ಯಾಗಕ್ಕೆ ಮುಂದಾಗಿರುವ ಸಚಿವರ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಬಿಜೆಪಿ ಶಿಸ್ತಿನ ಸಿದ್ಧಾಂತದ ಪಕ್ಷವಾಗಿದ್ದು, ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಹೀಗಾಗಿ ಬಿಜೆಪಿ ನಾಯಕರು ಹೈಕಮಾಂಡ್‌ಗೆ ಕೊಡುವ ಬೆಲೆ ಅವರ ಹೃದಯ ವೈಶಾಲ್ಯತೆ ತೋರಿಸುತ್ತದೆ ಎಂದು ಹೇಳಿದರು.
ಮೊದಲು ತನಿಖೆ, ನಂತರ ಭದ್ರತೆ
ಎಚ್.ಡಿ. ಕುಮಾರಸ್ವಾಮಿಗೆ ಪ್ರಾಣ ಬೆದರಿಕೆ ವಿಚಾರಕ್ಕೆ ಮಾತನಾಡಿದ ಸುಧಾಕರ್, ಕುಮಾರಸ್ವಾಮಿಯವರ ಪ್ರಾಣ ಬೆದರಿಕೆ ವಿಚಾರಕ್ಕೆ ಸಂಬಂಧಿಸಿ ತನಿಖೆಯಾಗಲಿ ಎಂದು ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹಾಗಾಗಿ ಮೊದಲು ತನಿಖೆ ನಡೆಯಲಿ, ನಂತರ ನಿಜಕ್ಕೂ ಅವರಿಗೆ ಆತಂಕವಿದ್ದರೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಕುಮಾರಸ್ವಾಮಿಯವಲರಿಗೆ ಸೂಕ್ತ ಬಂದೋಬಸ್‌್ತ ಕಲ್ಪಿಸೋಣ ಎಂದು ಹೇಳಿದರು.
ಆರ್ಥಿಕ ಶಿಸ್ತಿನ ಸರ್ಕಾರ
ರಾಜ್ಯದಲ್ಲಿ ಆರ್ಥಿಕ ದಿವಾಳಿತನ ಎಂಬ ಸಿದ್ದಾರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಧಾಕರ್, ರಾಜ್ಯದಲ್ಲಿ ಆರ್ಥಿಕ ದಿವಾಳಿತನ ಇದ್ದಿದ್ದರೆ ಅತಿವೃಷ್ಟಿಗೆ ಒಳಗಾಗಿರುವ ಕುಟುಂಬದ ಮನೆಗಳಿಗೆ 5 ಲಕ್ಷ ಅನುದಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡುತ್ತಿರಲಿಲ್ಲ. ಈ ಹಿಂದಿನ ಮುಂಖ್ಯಮಂತ್ರಿಗಳು ಕೇವಲ 80 ಸಾವಿರ ಮಾತ್ರ ನೀಡುತ್ತಿದ್ದರು, ಆದರೆ ಪ್ರಸ್ತುತ 5 ಲಕ್ಷ ನೀಡಲಾಗುತ್ತಿದೆ ಎಂದಿದ್ದಾರೆ.
ಆರ್ಥಿಕ ಶಿಸ್ತಿನಿಂದ ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ, ಜಿಲ್ಲೆಗೆ ವೈದ್ಯಕೀಯ ಕಾಲೇಜಿಗಾಗಿ 525 ಕೋಟಿ ನೀಡಿದ್ದಾರೆ. ಆರ್ಥಿಕ ದಿವಾಳಿಯಾಗಿದ್ದರೆ ನೀಡಲು ಸಾಧ್ಯವಿತ್ತೇ, ನೂತನ ಉದ್ಯೋಗ ಸೃಷ್ಟಿಆಗುತ್ತಿದೆ. ಇವರಿಗೆ ವೇತನ ನೀಡುತ್ತಿಲ್ಲವೇ, ಸಾಮಾಜಿಕ ಭದ್ರತೆಯ ಯೋಜನೆಗಳಿಗೆ, ರಸ್ತೆಗಳ ಅಭಿವೃದ್ಧಿಗೆ ಅನುದಾನ ಬರುತ್ತಿದೆ. ಇದೆಲ್ಲ ಕಂಡೂ ಆರ್ಥಿಕ ದಿವಾಳಿತನ ಎಲ್ಲಿಂದ ಎಂದು ಪ್ರಶ್ನಿಸಿದರು.
ಉತ್ತಮ ಆರ್ಥಿಕ ವ್ಯವಸ್ಥೆ
ದೇಶದಲ್ಲಿ ಆರ್ಥಿಕ ಹಿಂಜರಿತ ಇದೆ, ಇದರಿಂದ ಆರ್ಥಿಕ ವ್ಯವಸ್ಥೆಗೆ ಮತ್ತು ಬೊಕ್ಕಸಕ್ಕೆ ಯಾವುದೇ ರೀತಿಯ ಧಕ್ಕೆ ಇಲ್ಲ, ಇಡೀ ದೇಶಕ್ಕೆ ಆರ್ಥಿಕ ವಿಚಾರದಲ್ಲಿ ರಾಜ್ಯ ಸರ್ಕಾರ ಮೇಲ್ಪಂಕ್ತಿಯಲ್ಲಿದೆ. ಎಸ್.ಎಂ ಕೃಷ್ಣ ಅವರು ಆರ್ಥಿಕ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಅದರಂತೆ ಇಡೀ ದೇಶಕ್ಕೆ ಮಾದರಿಯಾಗಿ ಆರ್ಥಿಕ ವ್ಯವಸ್ಥೆ ರಾಜ್ಯದಲ್ಲಿದೆ ಎಂದು ಸಮರ್ಥಿಸಿಕೊಂಡರು.