ಮಾಜಿ ಸಿಎಂ ಕುಮಾರಸ್ವಾಮಿ ಹೊಗಳಿದ್ರು ಡಿಸಿಎಂ ಅಶ್ವತ್ಥ್ ನಾರಾಯಣ್

By Kannadaprabha NewsFirst Published Jan 27, 2021, 3:32 PM IST
Highlights

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅನುಭವಸ್ಥರು ಅವರಿಂದ ಯಾವುದೇ ರೀತಿಯ ವಿರೋಧ ಇಲ್ಲ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದರು.

ರಾಮ​ನ​ಗರ (ಜ.27): ಕೇಂದ್ರ ಸರ್ಕಾ​ರದ ಕೃಷಿ ಕಾಯ್ದೆ​ಗ​ಳನ್ನು ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಸೇರಿ​ದಂತೆ ಅನೇ​ಕರು ಒಪ್ಪಿ​ಕೊಂಡಿ​ದ್ದಾರೆ. ಕೆಲ​ವ​ರು ಮಾತ್ರ ರಾಜ​ಕೀಯ ಕಾರ​ಣ​ಗ​ಳಿ​ಗಾಗಿ ವಿರೋಧ ಮಾಡು​ತ್ತಿವೆ ಎಂದು ಉಪ​ಮು​ಖ್ಯ​ಮಂತ್ರಿ ಡಾ.ಸಿ.​ಎನ್‌ .ಅ​ಶ್ವತ್ಥ ನಾರಾ​ಯಣ ಪ್ರತಿ​ಕ್ರಿಯೆ ನೀಡಿ​ದರು.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರು ಅನುಭವಸ್ಥರು. ಅವರೇ ಕೃಷಿ ಕಾಯ್ದೆಯನ್ನು ಒಪ್ಪಿದ್ದಾರೆ. ರೈತರು ತಮ್ಮ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲು ಅವಕಾಶ ಇದೆ. ಆದರೆ, ಟ್ರ್ಯಾಕ್ಟರ್‌ ರಾರ‍ಯಲಿಗೆ ಅವಕಾಶ ಇಲ್ಲ ಎಂಬುದನ್ನು ಗೃಹ ಇಲಾಖೆಯೇ ಹೇಳಿದೆ.

ರೈತರಿಗೆ ಡಿಸೇಲ್ ಆಫರ್ ಕೊಡ್ತಾ ಇರೋರು ಯಾರು? HDK ಹೇಳಿದ ಹೆಸರು!

ನೂತನ ಕೃಷಿ ಕಾಯ್ದೆ ರೈತರ ಪರವಾಗಿಯೇ ಇದೆ. ಕಾಯ್ದೆಯನ್ನು ಎಲ್ಲರು ಸ್ವಾಗತಿಸಿದ್ದಾರೆ. ಹೀಗಾಗಿ ರೈತರ ವಿರುದ್ಧ ಪೊಲೀಸರನ್ನು ಎತ್ತಿಕಟ್ಟುವ ಉದ್ದೇಶ ನಮ್ಮ ಸರ್ಕಾ​ರ​ಕ್ಕಿಲ್ಲ ಎಂದು ಹೇಳಿ​ದ​ರು.

ಖಾತೆ ಬದಲಾವಣೆ ಅನಿವಾರ‍್ಯ !

ರಾಜ್ಯ ಸರ್ಕಾರ​ದಲ್ಲಿ ಖಾತೆ ಬದಲಾವಣೆ ನಡೆಯುತ್ತಿದೆ. ಕೆಲ ಒತ್ತಡಗಳಿಗೂ ಮಣಿದಿರುವುದು ಸತ್ಯ. ಮುಖ್ಯಮಂತ್ರಿಗಳು ಎಲ್ಲರಿಗು ಸ್ಪಂಧಿಸುವ ಮೂಲಕ ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗುತ್ತಿದ್ದಾರೆ. 

ಆದರೆ, ಹೊರನೋಟಕ್ಕೆ ಬದಲಾವಣೆ ಸರಿ ಇಲ್ಲ ಎಂಬುದು ಕಾಣುತ್ತಿದೆ. ಆದರೆ, ಖಾತೆ ಬದಲಾವಣೆ ಅನಿವಾರ್ಯವೂ ಆಗಿದೆ. ಖಾತೆ ಬದಲಾವಣೆ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಲಿರುವುದು ಸುಳ್ಳಲ್ಲ ಎಂದರು.

click me!