HD ಕುಮಾರಸ್ವಾಮಿ ಅದೃಷ್ಟದಿಂದ ಸಿಎಂ : ಸಚಿವ ಸೋಮಣ್ಣ

Published : Sep 13, 2019, 10:54 AM IST
HD ಕುಮಾರಸ್ವಾಮಿ ಅದೃಷ್ಟದಿಂದ ಸಿಎಂ : ಸಚಿವ ಸೋಮಣ್ಣ

ಸಾರಾಂಶ

ಎಚ್ ಡಿ ಕುಮಾರಸ್ವಾಮಿ ಅದೃಷ್ಟದಿಂದ ಸಿಎಂ ಆದವರು ಎಂದು ಸಚಿವ ವಿ.ಸೋಮಣ್ಣ ಹೇಳಿದರು. ಅದೃಷ್ಟ ಎನ್ನುವುದು ಯಾರಪ್ಪನ ಮನೆಯ ಸ್ವತ್ತೂ ಅಲ್ಲವೆಂದರು. 

ಮೈಸೂರು [ಸೆ.13]: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಅದೃಷ್ಟ ಇತ್ತು. ಮುಖ್ಯಮಂತ್ರಿ ಆದರು  ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ ನನಗೆ ಅನುಭವ ಕಮ್ಮಿ ಎನ್ನುವ ಕುಮಾರಸ್ವಾಮಿ ರಾಜಕಾರಣಕ್ಕೆ ಬಂದಿದ್ದು, 96 ರಲ್ಲಿ, ನಾನು ರಾಜಕಾರಣಕ್ಕೆ ಬಂದಿದ್ದು 83 ರಲ್ಲಿ ಎಂದು ತಿರುಗೇಟು ನೀಡಿದರು.

ಅವರು ಅದೃಷ್ಟದಿಂದ ಮುಖ್ಯಮಂತ್ರಿ ಆದವರು. ಆದರೆ ನಾನು ಮಂತ್ರಿಯಷ್ಟೇ ಆದೆ. ಅದೃಷ್ಟ ಎನ್ನುವುದು ಯಾರಪ್ಪನ ಮನೆಯ ಸ್ವತ್ತೂ ಅಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸದ್ಯ ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮವಿದ್ದು, ಕಾರ್ಯಕ್ರಮ ಸಂಪೂರ್ಣ ಮುಕ್ತಾಯವಾದ  ಬಳಿಕ ಒಂದು ಕ್ಷಣ ವ್ಯರ್ಥ ಮಾಡದೇ ವಸತಿ ಇಲಾಖೆ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.

PREV
click me!

Recommended Stories

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಕಲಾಪ ಮುಂದಕ್ಕೆ ಇದೇ ಮೊದಲು
Online Engagement: ವರನಿಗೆ ರಜೆ ಸಿಗದ ಕಾರಣ ವಿಡಿಯೋ ಮೂಲಕ ಅದ್ಧೂರಿ ನಿಶ್ಚಿತಾರ್ಥ! ಫೋಟೋ ಇಲ್ಲಿವೆ ನೋಡಿ