ಸೋಲಿನ ಭೀತಿ : ಸ್ವ ಕ್ಷೇತ್ರ ತೊರೆಯಲು ಮುಂದಾದ HDK ಆಪ್ತ

Published : Sep 13, 2019, 10:23 AM IST
ಸೋಲಿನ ಭೀತಿ : ಸ್ವ ಕ್ಷೇತ್ರ ತೊರೆಯಲು ಮುಂದಾದ HDK ಆಪ್ತ

ಸಾರಾಂಶ

ಸೋಲಿನ ಭೀತಿ ಹಾಗೂ ಓಳೇಟಿನ ಆತಂಕದಿಂದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಪ್ತ ನಾಯಕರ ಸ್ವ ಕ್ಷೇತ್ರ ತೊರೆಯಲು ಮುಂದಾಗಿದ್ದಾರೆನ್ನಲಾಗಿದೆ. 

ಮೈಸೂರು [ಸೆ.13]: ಕ್ಷೇತ್ರ ಬದಲಾವಣೆ ಮಾಡುವತ್ತ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಆಪ್ತ ಮನಸು ಮಾಡಿದ್ದಾರೆ.

ಮಾಜಿ ಸಚಿವ ಜೆಡಿಎಸ್ ಮುಖಂಡ ಸಾ.ರಾ ಮಹೇಶ್ ಸೋಲಿನ ಭೀತಿಯಿಂದ ತಮ್ಮ ಕ್ಷೇತ್ರ ಬದಲಾವಣೆ ಮಾಡುವತ್ತ ಚಿತ್ತ ಹರಿಸಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿ.ಟಿ.ದೇವೇಗೌಡ ಹಾಗೂ ಅನರ್ಹ ಶಾಸಕ ಎಚ್. ವಿಶ್ವನಾಥ್ ಅವರ ವಿರುದ್ಧ ನಿಲ್ಲುವುದು ಅಪಾಯಕಾರಿ ಎಂದು ಸೋಲಿನ ಭೀತಿಯಿಂದ  ಕ್ಷೇತ್ರದಿಂದ ಮತ್ತೊಂದು ಕ್ಷೇತ್ರದತ್ತ ಮುಖ ಮಾಡಲಿದ್ದಾರೆ ಎನ್ನಲಾಗಿದೆ. 

ಕೆ.ಆರ್ ನಗರ ಕ್ಷೇತ್ರದಿಂದ ಚಾಮರಾಜ ಕ್ಷೇತ್ರದತ್ತ ವಲಸೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ನೂತನ ಕ್ಷೇತ್ರದತ್ತ ತೆರಳುವ ಹಿನ್ನೆಲೆ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಹಲವು ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ.

PREV
click me!

Recommended Stories

ಮದುವೆಗೆ ಕೇವಲ 10 ದಿನ ಬಾಕಿ ಇರುವಾಗ ನೇಣಿಗೆ ಶರಣಾದ ಮನರೆಗಾ ಇಂಜಿನಿಯರ್; ಮದುವೆ ಮನೆಯಲ್ಲಿ ಸೂತಕದ ಛಾಯೆ!
ಎಆರ್‌ಎಐ ಪರೀಕ್ಷಾ ಕೇಂದ್ರಕ್ಕೆ 500 ಎಕರೆ ಬೇಕು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ