ಮೋದಿ ದೂರಿದ ದೇವೇಗೌಡರು : ಹೀಗೆ ಮಾಡಲು ಹೊರಟಿದ್ದು ಸರಿಯಲ್ಲ ಎಂದ್ರು

By Kannadaprabha NewsFirst Published Feb 9, 2020, 9:12 AM IST
Highlights

ಪ್ರಧಾನಿ ನರೇಂದ್ರ ಮೋದಿ ಹಿಂಗೆ ಮಾಡಲು ಹೊರಟಿದ್ದು ಸರಿಯಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ದೂರಿದರು. 

ಹಾಸನ [ಫೆ.09]:  ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವವರನ್ನು ಹಾಗೂ ಅದರ ವಿರುದ್ಧ ಹೋರಾಟ ಮಾಡುತ್ತಿರುವವರ ಬಗ್ಗೆ ಉದ್ಧಟತನದಿಂದ ಮಾತನಾಡುತ್ತಿರುವವರನ್ನು ಬಗ್ಗುಬಡಿಯಲು ಎಲ್ಲ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಕರೆ ನೀಡಿದರು. 

ನಗರದ ಈದ್ಗಾ ಮೈದಾನದಲ್ಲಿ ಸಿಎಎ, ಎನ್‌ಆರ್‌ಸಿ, ಎನ್‌ಆರ್‌ಪಿ ವಿರೋಧಿಸಿ ಶನಿವಾರ ನಡೆದ ‘ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ’ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಗೃಹಮಂತ್ರಿಗಳು ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಮೋದಿ ಸರ್ಕಾರ ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂದು ದೂರಿದರು. 

ಗೋಡ್ಸೆಗೆ ಪ್ರಧಾನಿ ಹೋಲಿಕೆ, ಈಗ ಮಾತಾಡಲ್ಲ ಎಂದ್ರು ಮಾಜಿ ಪ್ರಧಾನಿ

ಮಹಾತ್ಮ ಗಾಂಧಿ ಅವರನ್ನು ಕೊಂದಂತಹ ಆರೋಪಿಗಳಿಗೆ ಭಾರತ ರತ್ನ ಕೊಡಬೇಕು ಅಂತಾರೆ ಎಂದು ವಿಷಾದಿಸಿದ ದೇವೇಗೌಡರು, ಇದೀಗ ಸಂಸತ್‌ ಒಳಗೆ ತುರ್ತು ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

click me!