ಪೈಲೆಟ್‌ ಆಗಿ ಆಯ್ಕೆಯಾದ ಹಾವೇರಿಯ ಹಳ್ಳಿ ಯುವಕ

By Kannadaprabha NewsFirst Published May 31, 2021, 7:16 AM IST
Highlights
  • ಹಳ್ಳಿಯ ಪ್ರತಿಭಾವಂತ ಯುವಕನೊಬ್ಬ ಏರ್‌ಫೋರ್ಸ್‌ ಫೈಟರ್‌ ಪೈಲೆಟ್‌ ಹುದ್ದೆಗೆ ನೇಮಕ
  • ಹಳ್ಳಿಯ ಹಿರಿಮೆ ಗರಿಮೆಯನ್ನು ಹೆಚ್ಚಿಸಿದ ಪುನೀತ್ ಬಣಕಾರ
  •  2019ರಲ್ಲಿ ಯುಪಿಎಸ್‌ಸಿ(ನ್ಯಾಶನಲ್‌ ಡಿಫೆನ್ಸ್‌ ಆಕಾಡೆಮಿ) ಪರೀಕ್ಷೆಯ 140ನೇ ಬ್ಯಾಚಿನಲ್ಲಿ ತೇರ್ಗಡೆ 

ಹಿರೇಕೆರೂರು (ಮೇ.31): ಅಪ್ಪಟ ಹಳ್ಳಿಯ ಪ್ರತಿಭಾವಂತ ಯುವಕನೊಬ್ಬ ಏರ್‌ಫೋರ್ಸ್‌ ಫೈಟರ್‌ ಪೈಲೆಟ್‌ ಹುದ್ದೆಗೆ ನೇಮಕಗೊಳ್ಳುವ ಮೂಲಕ ಹಳ್ಳಿಯ ಹಿರಿಮೆ ಗರಿಮೆಯನ್ನು ಹೆಚ್ಚಿಸಿದ್ದಾರೆ. 

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಹೊಸಳ್ಳಿ ಗ್ರಾಮದ ಪುನೀತ ಬಣಕಾರ ಈ ಸಾಧನೆ ಮಾಡಿದ್ದಾರೆ. 2019ರಲ್ಲಿ ಯುಪಿಎಸ್‌ಸಿ(ನ್ಯಾಶನಲ್‌ ಡಿಫೆನ್ಸ್‌ ಆಕಾಡೆಮಿ) ಪರೀಕ್ಷೆಯ 140ನೇ ಬ್ಯಾಚಿನಲ್ಲಿ ತೇರ್ಗಡೆ ಹೊಂದಿ ಏರ್‌ಫೋರ್ಸ್‌ ಪೈಲೆಟ್‌ ಹುದ್ದೆಗೆ ಆಯ್ಕೆಯಾಗಿದ್ದರು. 

ವಾಯುಪಡೆಯಲ್ಲಿ 1515 ಗ್ರೂಪ್‌ ಸಿ ಹುದ್ದೆಗಳಿಗೆ ನೇಮಕಾತಿ ಶುರು, ಅಪ್ಲೈ ಮಾಡಿ ..

ಮಹಾರಾಷ್ಟ್ರದ ಪುಣೆಯ ಕಡಕ ವಾಸ್ಲಾದಲ್ಲಿ ಫೋರ್ಸ್‌ ಪೈಲೆಟ್‌ 3 ವರ್ಷಗಳ ತರಬೇತಿ ಪಡೆದಿದ್ದಾರೆ. ಮೇ 29ರಂದು ನಡೆದ ಪಾಸಿಂಗ್‌ ಔಟ್‌ ಪರೇಡ್‌ನಲ್ಲಿ ಮತ್ತೊಮ್ಮೆ ತೇರ್ಗಡೆ ಹೊಂದಿದ್ದು ವಿಶೇಷ ತರಬೇತಿ ಪಡೆಯಲು ಹೈದರಾಬಾದ್‌ಗೆ ತೆರಳಿದ್ದಾರೆ.

click me!