ಬೀಳೋ ಜಾಗಕ್ಕೆ ಬಿದ್ದರೆ ಕರೆಕ್ಟ್ ಆಗ್ತಿಯಾ..., ರೌಡಿಗಳ ಮೈ ಚಳಿ ಬಿಡಿಸಿದ ಹಾವೇರಿ ಎಸ್ ಪಿ!

By Gowthami K  |  First Published Feb 18, 2023, 6:13 PM IST

ಹಾವೇರಿಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ  ಅವರು  ಸಮಾಜದ ಸ್ವಾಸ್ಥ್ಯ ಹಾಳು ಮಾಡ್ತಿರೋ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. 'ಮಚ್ಚು ಅಲ್ಲ, ಬಂದೂಕ್ ಹಿಡ್ಕೊಂಡ ಹೊಡೆದಾಡೋ ರೌಡಿಗಳನ್ನ ನೋಡಿದಿನಿ ಮಗನೇ' ಎಂದು  ತರಾಟೆಗೆ ತೆಗೆದುಕೊಂಡರು.


ಹಾವೇರಿ( ಫೆ.18): ಸಮಾಜಕ್ಕೆ ಕಂಟಕವಾಗ್ತಿರೋ ಕೆಲ ರೌಡಿಗಳಿಗೆ ಹಾವೇರಿ ಎಸ್ ಪಿ ಡಾ.ಶಿವಕುಮಾರ್ ಗುಣಾರೆ ಖಡಕ್ ಆಗಿಯೇ ಬಿಸಿ ಮುಟ್ಟಿಸಿದರು. ಹಾವೇರಿ ಎಸ್ ಪಿ ಅವಾಜ್ ಗೆ ರೌಡಿಗಳು ನಿಂತಲ್ಲೇ ಬೆವರಿ ಹೋದರು. "ಹೊಡೆಯೋ ಜಾಗದಲ್ಲಿ ಹೊಡೆದರೆ ಕರೆಕ್ಟ್ ಆಗ್ತಿಯಾ. ಮಚ್ಚು ಅಲ್ಲ, ಬಂದೂಕ್ ಹಿಡ್ಕೊಂಡ ಹೊಡೆದಾಡೋ ರೌಡಿಗಳನ್ನ ನೋಡಿದಿನಿ ಮಗನೇ....." ಇಲ್ಲಿ ಪೊಲೀಸರ ಮುಂದೆ ಕೈ ಕಟ್ಟಿಕೊಂಡ ನಿಲ್ತೀರಿ. ಹೊರಗೆ ಹೋಗಿ  ಪಬ್ಲಿಕ್ ನಲ್ಲಿ ಮತ್ತೂ ಅದ್ನೆ ಮಾಡ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

Kolara: ಅಪಹರಿಸಿ ಆಪ್ರಾಪ್ತ ಬಾಲಕಿಯ ಅತ್ಯಾಚಾರ, 4 ಆರೋಪಿಗಳಿಗೆ

Latest Videos

undefined

ಹೊಸ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ  ಅವರು ಸಮಾಜದ ಸ್ವಾಸ್ಥ್ಯ ಹಾಳು ಮಾಡ್ತಿರೋ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು. ಶಿಗ್ಗಾಂವಿ ಪೊಲೀಸ್ ಠಾಣೆ ಆವರಣದಲ್ಲಿ ಶಿಗ್ಗಾಂವಿ ವೃತ್ತದ ರೌಡಿಗಳ ಪರೇಡ್ ನಡೆಸಲಾಯ್ತು. ಈ ವೇಳೆ ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯ 29, ಹುಲಗೂರು ಪೊಲೀಸ್ ಠಾಣೆಯ 8, ಬಂಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯ 23,ಹಾಗೂ ತಡಸ ಪೊಲೀಸ್ ಠಾಣೆ ವ್ಯಾಪ್ತಿಯ 26 ಕ್ರಿಮಿನಲ್ ಹಿನ್ನೆಲೆಯ ರೌಡಿಗಳ ಪರೇಡ್ ನಡೆಸಿದರು. ಬಳಿಕ ಸಮಾಜಕ್ಕೆ ಕಂಟಕವಾಗುವ ರೌಡಿಗಳಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡರು. ಒಬ್ಬೊಬ್ಬರನ್ನು ಸಾಲಾಗಿ ನಿಲ್ಲಿಸಿ ಅವರ ಕ್ರಿಮಿನಲ್ ಹಿನ್ನೆಲೆ ಕುರಿತು ವಿಚಾರಿಸಿದರು. ರೌಡಿಗಳು ತೆಪ್ಪಗಿದ್ದರೆ ಸರಿ, ಇಲ್ಲದಿದ್ದರೆ ಗಡಿಪಾರು ಮಾಡ್ತೀವಿ ಎಂದು ಖಡಕ್ ಎಚ್ಚರಿಕೆ ಕೂಡ ನೀಡಿದರು.

ಶಿವರಾತ್ರಿ ಕ್ರಿಕೆಟ್‌ ಪಂದ್ಯಾವಳಿ ವೇಳೆ ಚಾಕು ಇರಿತ: ಇಬ್ಬರ ದಾರುಣ ಸಾವು!

ಕೆಲವರು ಕ್ರಿಮಿನಲ್ ಆಗಿ ಯಾಕ್ಟಿವ್ ಆಗಿದ್ದಾರೆ. ಅಂತಹವರ ಮೇಲೆ ಗೂಂಡಾ ಯಾಕ್ಸ್ ಜಾರಿ ಮಾಡುವ ಕುರಿತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಎಸ್ಪಿಯವರ ಗಮನಕ್ಕೆ ತಂದರು. ಈ ಬಗ್ಗೆ ಪ್ರಸ್ತಾವನೆ ಕಳಿಸುವಂತೆ ಎಸ್ಪಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಂತು ಹೊಸ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಾರ್ನಿಂಗ್ ಗೆ ರೌಡಿಗಳಿಗೆ ನಡುಕ ಹುಟ್ಟಿರುವುದು ಸುಳ್ಳಲ್ಲ.

click me!