ಗ್ರೀನ್‌ಝೋನಲ್ಲಿದ್ದ ಹಾವೇರಿಗೆ ಕಂಟಕವಾದ ಮುಂಬೈ ಲಾರಿ

By Kannadaprabha NewsFirst Published May 5, 2020, 9:51 AM IST
Highlights

ಗ್ರೀನ್‌ಝೋನಲ್ಲಿದ್ದ ಹಾವೇರಿಗೆ  ಕಂಟಕವಾದ ಮುಂಬೈ ಲಾರಿ | ಜಿಲ್ಲೆಯಲ್ಲಿ ಮೊದಲ ಕೊರೋನಾ ಪಾಸಿಟಿವ್‌ ಕೇಸ್‌ ದಾಖಲು |   14 ಮಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಹಾವೇರಿ (ಮೇ. 05):  ಮುಂಬೈನಿಂದ ಬಂದ ಆ್ಯಂಬುಲೆನ್ಸ್‌ ಮಂಡ್ಯ ಜಿಲ್ಲೆಗೆ ಮಾರಕವಾದಂತೆ ಇದೀಗ ಮುಂಬೈನಿಂದ ಬಂದ ಲಾರಿ ಗ್ರೀನ್‌ಝೋನ್‌ನಲ್ಲಿದ್ದ ಹಾವೇರಿ ಜಿಲ್ಲೆಗೆ ಕಂಟಕವಾಗಿ ಪರಿಣಮಿಸಿದೆ.

ಜಿಲ್ಲೆಯ ಸವಣೂರಿನ 32 ವರ್ಷದ (ರೋಗಿ ಸಂಖ್ಯೆ 639) ವ್ಯಕ್ತಿಯಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣ ದೃಢಪಟ್ಟಿದ್ದು, ಆತ ಏ.28ರಂದು ಮುಂಬೈನಿಂದ ತನ್ನ ಅಣ್ಣ ಮತ್ತು ಅಣ್ಣನ ಮಗನೊಂದಿಗೆ ಲಾರಿಯಲ್ಲಿ ಆಗಮಿಸಿದ್ದ. ಮೂರೂ ಮಂದಿಯ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಮದ್ಯ ಈಗ ಮತ್ತಷ್ಟು ಕಹಿ: ನಷ್ಟ ಭರಿಸಲು ಮೇಲೆ ಶೇ.70ರಷ್ಟು ಹೆಚ್ಚು ತೆರಿಗೆ!

ಸೋಂಕಿತನ ಅಣ್ಣನ ಮಗನ ಸ್ವಾ್ಯಬ್‌ ರಿಪೋರ್ಟ್‌ ಕೂಡ ಪಾಸಿಟಿವ್‌ ಎಂದು ಬಂದಿದ್ದು, ಮರು ಪರೀಕ್ಷೆಗೆ ಕಳುಹಿಸಲಾಗಿದೆ. ಸೋಂಕಿತನ ಕುಟುಂಬ, ಸ್ನೇಹಿತರು, ಚಿಕಿತ್ಸೆ ನೀಡಿದ್ದ ವೈದ್ಯರ ತಂಡ ಸೇರಿ 21 ಮಂದಿಯನ್ನು ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್‌ ಇಡಲಾಗಿದೆ. ಸೋಂಕಿತನೊಂದಿಗೆ ದ್ವಿತೀಯ ಹಂತದ ಸಂಪರ್ಕ ಹೊಂದಿರುವ 14 ಮಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

click me!