Haveriಯಲ್ಲಿ ಹಾಲು ಕೊಡೋ ಗಂಡು‌ ಮೇಕೆ!

Published : May 28, 2022, 03:03 PM IST
 Haveriಯಲ್ಲಿ ಹಾಲು ಕೊಡೋ ಗಂಡು‌ ಮೇಕೆ!

ಸಾರಾಂಶ

ಹಾವೇರಿ  ಜಿಲ್ಲೆ ಹಾನಗಲ್ತಾ ಲೂಕಿನ ನರೇಗಲ್ ಗ್ರಾಮದಲ್ಲಿ  ಗಂಡು ಮೇಕೆಯೊಂದು  ಹಾಲು ನೀಡುತ್ತಿದ್ದು, ಎಲ್ಲರೂ ಆಶ್ಚರ್ಯ ಚಕಿತರಾಗುತ್ತಿದ್ದಾರೆ.

ವರದಿ: ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ  ನ್ಯೂಸ್ 

ಹಾವೇರಿ ( ಮೇ 28):  ಇಷ್ಟು ದಿನ ಹೆಣ್ಣು ಮೇಕೆ ಹಾಲು ಕೊಡೋದು ನೋಡಿದ್ರಿ. ಗಂಡು ಮೇಕೆ (ಹೋತಾ) ಹಾಲು (Milk) ಕೊಡೋದು ಎಲ್ಲಾದ್ರೂ ನೋಡಿದೀರಾ? ಈ ಅಪರೂಪದ ಸನ್ನಿವೇಶ ಹಾವೇರಿಯಲ್ಲಿ ಕಂಡುಬಂದಿದೆ.   ಈ ಮೇಕೆ (Goat) ಹೆಸರು ಸುಲ್ತಾನ್ ಗಂಡಾದ್ರೂ ಹೆಣ್ಣು ಮೇಕೆ ತರ ಹಾಲು ಕೊಡೋ ಮೇಕೆ ಇದು. ಇದು ಆಶ್ಚರ್ಯ ಆದರೂ ಸತ್ಯ. ಹಾವೇರಿ (Haveri) ಜಿಲ್ಲೆ ಹಾನಗಲ್ (Hanagal) ತಾಲೂಕಿನ ನರೇಗಲ್ ಗ್ರಾಮದಲ್ಲಿ ಒಂದು ಗಂಡು ಮೇಕೆ ಹಾಲು ನೀಡುತ್ತಿದೆ. ನರೇಗಲ್ ಗ್ರಾಮದ ಚಮನ್ ಶಾವಲಿ ಗಲ್ಲಿಯಲ್ಲಿರುವ ಸಾದಿಕ್ ಮಕಾನದಾರ್  ಎಂಬುವವರ ಮನೆಯಲ್ಲಿರುವ ಗಂಡುಮೇಕೆ ಹಾಲು ನೀಡುತ್ತಿದೆ.

ಸುಮಾರು ಒಂದೂವರೆ ವರ್ಷದ ಗಂಡು ಮೇಕೆ ಕಳೆದ ಕೆಲ ತಿಂಗಳಿಂದ ಹಾಲು ನೀಡುತ್ತಿದೆ. ಸಾದಿಕ್‌ ಈ ಹಿಂದೆ ಒಂದು ಮೇಕೆ ಸಾಕಿದ್ದರು. ಆ ಮೇಕೆ ಗಂಡು ಮರಿ ಹಾಕಿ ಸಾವನ್ನಪ್ಪಿದೆ. ಅದರ ಮರಿಯಾಗಿರುವ ಈ ಗಂಡು ಮೇಕೆಯನ್ನ ಸಾದಿಕ್ ಮನೆಯವರು ದೇವರಿಗೆ ಅಂತಾ ಬಿಟ್ಟಿದ್ದಾರೆ.

ಸಚಿವ ASHWATH NARAYAN ವಿರುದ್ಧ FIR ದಾಖಲು

ಈ ರೀತಿ ದೇವರಿಗೆ ಬಿಟ್ಟಿರುವ ಗಂಡುಮೇಕೆ ಈಗ ಹಾಲು ನೀಡುತ್ತಿದೆ. ಆರಂಭದಲ್ಲಿ ಈ ಗಂಡು ಮೇಕೆ ಹಾಲು ನೀಡುವುದನ್ನ ಸುತ್ತಮುತ್ತಲಿನ ಜನ ನಂಬುತ್ತಿರಲಿಲ್ಲ. ಆದರೆ ಅವರ ಕಣ್ಣಮುಂದೆ ಹಾಲು ಕರೆಯುವುದನ್ನ ನೋಡಿದ ಜನ ಆಶ್ಚರ್ಯ ಚಕಿತರಾಗಿದ್ದಾರೆ.

ಇದಕ್ಕೆ ವಿವಿಧ ದವಸಧಾನ್ಯಗಳನ್ನ ತರಕಾರಿಗಳನ್ನ ತಿನ್ನಿಸಲಾಗುತ್ತೆ. ಗಂಡು ಮೇಕೆಗೆ ಎರಡು ಮೊಲೆಗಳಿದ್ದು ಎರಡೂ ಮೊಲೆಗಳಲ್ಲಿ ಹಾಲು ಬರುತ್ತದೆ. ಈ ರೀತಿ ಪ್ರಕರಣಗಳ ಸಂಖ್ಯೆ ವಿರಳ. ಆದರೆ ಕೆಲವೊಂದು ಹಾರ್ಮೋನ್‌ಗಳ ಸ್ರವಿಸುವಿಕೆ ಹೆಚ್ಚು ಕಡಿಮೆಯಾದಾಗ ಈ ರೀತಿ ಗಂಡು ಪ್ರಾಣಿಗಳು ಹಾಲು ನೀಡುತ್ತವೆ.

HIJAB BAN; ಹೈಕೋರ್ಟ್ ಆದೇಶದ ವಿರುದ್ಧದ ಮೇಲ್ಮನವಿ ಪರಿಶೀಲನೆಗೆ ಸುಪ್ರೀಂ ಒಪ್ಪಿಗೆ

ಇನ್ನು ಕೆಲ ಹೆಣ್ಣು ಪ್ರಾಣಿಗಳು ಸಹ ಗರ್ಭಧರಿಸದೇ ಹಾಲು ನೀಡಲು ಸಹ ಹಾರ್ಮೋನ್‌ಗ ಸ್ರವಿಸುವಿಕೆಯಲ್ಲಿ ಏರು ಪೇರಾಗುವುದೇ ಕಾರಣ ಅಂತಾರೆ ಪಶು ವೈದ್ಯರು. ಜನ ಮಾತ್ರ ಗಂಡು  ಮೇಕೆ ಹಾಲು ಕೊಡೋದು ಕೋಡಿ ಎಲಾ ಕಿಲಾಡಿ ಮೇಕೆ ಅದೆಂಗೆ ಹಾಲು ಕೊಡುತ್ತೆ ಅಂತ ಆಶ್ಚರ್ಯ ಚಿಕಿತರಾಗಿದ್ದಾರೆ.

PREV
Read more Articles on
click me!

Recommended Stories

ಚಿಕ್ಕಬಳ್ಳಾಪುರದಲ್ಲಿ ಮಾನವ ಹಕ್ಕುಗಳ ದಿನಾಚರಣೆ: ಸಾವಿರಾರು ಜನರಲ್ಲಿ ನಾಯಕತ್ವ ಬಿತ್ತಿದ ನವಶಕ್ತಿ ನಾಟಕ
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ