ಕನ್ನಡದಿಂದಲೂ ಅನ್ನ ಹುಟ್ಟಿಸಿಕೊಳ್ಳಲು ಸಾಧ್ಯ. ಸಂಕಲ್ಪ ಮಾಡಬೇಕು ಅಷ್ಟೆ. ಕನ್ನಡ ಎಂದರೆ ಮೂಗು ಮುರಿಯಬಾರದು. ಕನ್ನಡ ಕಲಿತರೆ ಕೆಲಸ ಸಿಗಲ್ಲ ಅನ್ನುವ ಭಾವನೆ ಬಿಡಬೇಕು: ದೊಡ್ಡರಂಗೇಗೌಡ
ಹಾವೇರಿ(ಜ.05): ಹಾವೇರಿಗೆ ಪವಿತ್ರ ಯೋಗ ಇದೆ. ಇಲ್ಲಿನ ಜನ, ಸಂಸ್ಕೃತಿ ನನ್ನ ಮೇಲೆ ಪ್ರಭಾವ ಬೀರಿದೆ. ಹಿಂದೆ ಶಿಶುನಾಳ ಶರೀಫರ ಸಮಾಧಿ ದರ್ಶನ ಮಾಡಿದ್ದೆ, ಸಾಹಿತ್ಯ ಸಮ್ಮೇಳನ ಅಂದ ತಕ್ಷಣವೇ ಟೀಕೆ ಬರ್ತಾ ಇವೆ. ಸಮ್ಮೇಳನವನ್ನು ಜಾತ್ರೆ ಅಂತ ಹೇಳ್ತಾ ಇದಾರೆ. ಜಾತ್ರೆ, ಸಂತೆ ಬೇಕೇ ಬೇಕು. ಸಾಹಿತಿಗಳ ಸಮ್ಮಿಲನ ಇದು. ಸಾಹಿತಿಗಳು ಓದುಗರಿಗೆ ಬೇಕು. ಜನ ಬಹಳ ಪ್ರೀತಿ ತೋರಿಸ್ತಾರೆ. ಅವರ ಪ್ರೀತಿಗೆ ಬೆಲೆ ಕಟ್ಟಲಾಗಲ್ಲ. ಇನ್ನಷ್ಟು ಕನ್ನಡ ಕೆಲಸ ಮಾಡಬೇಕು ಅಂತ ನನಗೆ ಅನಿಸುತ್ತೆ. ದೊಡ್ಡರಂಗೇಗೌಡ ಯಾವತ್ತೂ ಒಳ್ಳೆದನ್ನು ಬರೆಯುತ್ತಾನೆ. ಆಲೋಚನೆ ಮಾಡ್ತಾರೆ ಅಂತ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಅವರು ತಿಳಿಸಿದ್ದಾರೆ.
ಇಂದು(ಗುರುವಾರ) ನಗರದ ಜಿಲ್ಲಾಧಿಕಾರಿಗಳ ನಿವಾಸಕ್ಕೆ ಆಗಮಿಸಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಅವರು, ಬೆಳಗಾವಿ ನಮ್ಮದು ಅಂತ ಮರಾಠಿ ಜನರ ಉಮೇದು ನೋಡಿ ಅವರಿಗೆ ತಿಳಿ ಹೇಳಬೇಕು ಅನಿಸುತ್ತದೆ. ಮಹಾಜನ್ ವರದಿ ಪ್ರಕಾರ ಬೆಳಗಾವಿ ನಮಗೆ ಸೇರಬೇಕು. ರಾಜ್ಯ ಸರ್ಕಾರ, ಪರಿಷತ್ತು ಯಾವ ಕಾರಣಕ್ಕೂ ಮಹಾರಾಷ್ಟ್ರ ಬಿಟ್ಟು ಕೊಡಬಾರದು. ಬಿಟ್ಟು ಕೊಟ್ಟರೆ ನಮ್ಮ ವ್ಯಕ್ತಿತ್ವ ಮಾರಿಕೊಂಡ ಹಾಗೆ. ಕೇರಳದಲ್ಲಿ ಕನ್ನಡ ಶಾಲೆಗಳಿವೆ. ಆದರೆ ಕನ್ನಡ ಬೋಧಿಸಲು ಶಿಕ್ಷಕರಿಲ್ಲ. ಕೇರಳ ಸರ್ಕಾರಕ್ಕೆ ಒತ್ತಾಯಿಸಬೇಕಿದೆ ಅಂತ ತಿಳಿಸಿದ್ದಾರೆ.
undefined
ಸಾಹಿತ್ಯ ಸಮ್ಮೇಳನದ ವಸತಿ ವ್ಯವಸ್ಥೆ ಮಾಡಿರುವ ಶಾಲಾ-ಕಾಲೇಜುಗಳಿಗೆ ಜ.4ರಿಂದಲೇ ರಜೆ ಘೋಷಣೆ
ಎದಗೆ ಅಕ್ಷರ ಬಿದ್ದರೆ ಬದುಕು ಬಂಗಾರ ಆಗಲಿದೆ. ಇನ್ನೊಂದು ದುಃಖ ತರಿಸಿದ್ದು ಪಕ್ಕದ ತಮಿಳುನಾಡಿನಲ್ಲಿ ತಮಿಳಿಗೆ ಶಾಸ್ತ್ರೀಯ ಸ್ಥಾನಮಾನಕ್ಕೆ ಅಲ್ಲಿನ ಸಂಸದರು ಕೇಂದ್ರಕ್ಕೆ ಅನುದಾನ ತಂದಿದ್ದಾರೆ. ಆದರೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕರೂ ಕೇಂದ್ರದಿಂದ ಅನುದಾನ ತರಲು ನಮ್ಮ ಸಂಸದರಿಗೆ ತರೋಕೆ ಆಗಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಅಂತ ಅಲಂಕಾರಕ್ಕೆ ಘೋಷಣೆ ಮಾಡಿದ್ದಾರೆ. ಶಾಸ್ತ್ರೀಯ ಭಾಷೆಗೆ ಪ್ರತ್ಯೇಕ ಕಚೇರಿ ಅಂತ ಈಗ ತೀರ್ಮಾನ ಮಾಡಿದ್ದಾರೆ. ಶಾಸ್ತ್ರೀಯ ಭಾಷೆ ಸ್ಥಾನ ಮಾನ ಅಂದರೆ ಘನತೆ. ಕೇಂದ್ರ ಸರ್ಕಾರರಿಂದ ಇದಕ್ಕೆ ಹಣ ತರಬೇಕಿದೆ ಅಂತ ಹೇಳಿದ್ದಾರೆ.
ಏಳನೇ ತರಗತಿವರೆಗೆ ಕನ್ನಡದಲ್ಲಿ ಶಿಕ್ಷಣ ಆಗಬೇಕು.. ತಾಯಿ ತೊಡೆ ಮೇಲೆ ಮಗು ದೇಶಿ ಭಾಷೆ ಕಲಿಯುವಾಗ ಇರುವ ಸಂಭ್ರಮ ಎಲ್ಲೂ ಇರಲು ಸಾಧ್ಯವಿಲ್ಲ. ಕನ್ನಡ ಶಿಕ್ಷಣ ಕಡ್ಡಾಯ ಮಾಡಬೇಕು. ಭೌತಶಾಸ್ತ್ರ, ಯೋಮ ವಿಜ್ಞಾನ, ಎಲ್ಲವೂ ಕನ್ನಡದಲ್ಲಿ ಹೇಳಲು ಸಾಧ್ಯವಿದೆ. ಎಲ್ಲವನ್ನೂ ನಾಳೆ ಹೇಳುವೆ. ಇಂದೇ ಹೇಳಿದರೆ ಸ್ವಾರಸ್ಯ ಇರಲ್ಲ ಅಂತ ತಿಳಿಸಿದ್ದಾರೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ವಿವಾದಗಳ ಬಗ್ಗೆ ಡಾ.ಮಹೇಶ್ ಜೋಷಿ ಖಡಕ್ ಮಾತು
ಸರೋಜಿನಿ ಮಹಿಷಿ ವರದಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಿನ್ನೆವರೆಗೂ ಒಂದು ರೀತಿ, ಇಂದು ಬೇರೆ.. ಮತ್ತೆ ಮತ್ತೆ ಅದೇ ರಾಗ ಬೇಡ. ಡಿಜಿಟಲೈಜೇಶನ್ ಆಗಿದೆ. ಕನ್ನಡದಿಂದಲೂ ಅನ್ನ ಹುಟ್ಟಿಸಿಕೊಳ್ಳಲು ಸಾಧ್ಯ. ಸಂಕಲ್ಪ ಮಾಡಬೇಕು ಅಷ್ಟೆ. ಕನ್ನಡ ಎಂದರೆ ಮೂಗು ಮುರಿಯಬಾರದು. ಕನ್ನಡ ಕಲಿತರೆ ಕೆಲಸ ಸಿಗಲ್ಲ ಅನ್ನುವ ಭಾವನೆ ಬಿಡಬೇಕು. ನಾನು ಎಡಪಂಥೀಯನೂ ಅಲ್ಲ ಬಲ ಪಂಥೀಯನೂ ಅಲ್ಲ. ನಾನು ಕನ್ನಡ ಪಂಥೀಯ. ಸಾಹಿತ್ಯ ಸಮ್ಮೇಳನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾಹಿತಿಗಳ ವಿರುದ್ಧ ದೊಡ್ಡರಂಗೇಗೌಡ ಕಿಡಿ ಕಾರಿದ್ದಾರೆ.
ಪುರುಶೋತ್ತಮ ಬಿಳಿಮಲೆ ಸೇರಿದಂತೆ ಹಲವರಿಗೆ ಸಹೋದರನಾಗಿ ಹೇಳ್ತೀದಿನಿ. ದಯವಿಟ್ಟು ನಮ್ಮ ಜೊತೆ ಬನ್ನಿ. ವೇದಿಕೆ ಮೇಲೆ ಭಿನ್ನಾಭಿಪ್ರಾಯಗಳನ್ನ ಬಗೆಹರಿಸಿಕೊಳ್ಳೋಣ. ನಾವೆಲ್ಲಾ ಒಂದೇ ಕುಲ, ಜಾತಿ, ಅತೃಪ್ತ ಆತ್ಮಗಳ ಅಳಲು ಮುಗಿಲು ಮುಟ್ಟಿದೆ. ಕನ್ನಡ ಮುಖ್ಯ, ಕನ್ನಡ ಚಿಕ್ಕದು ಅನ್ನುವರಿಂದ ಹೀಗೆ ಆಗ್ತಿದೆ ಅಂತ ಹೇಳಿದ್ದಾರೆ.