65 ಕನ್ನಡ ಹಾಡುಗಳ ಹಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ಹಾವೇರಿ ಬಾಲಕಿ

Published : Nov 06, 2026, 03:47 PM IST
Haveri Girl Bags India Book of Records Honour

ಸಾರಾಂಶ

ಬರೋಬ್ಬರಿ 65 ಕನ್ನಡ ಹಾಡುಗಳನ್ನು ಹಾಡಿದ ಹಾವೇರಿಯ 9 ವರ್ಷದ ಬಾಲಕಿ ಭೂಮಿಕಾ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಬಾಲಕಿ ಸಾಧನೆಯನ್ನು ಹಲವರು ಕೊಂಡಾಡಿದ್ದಾರೆ.

ಹಾವೇರಿ (ನ.06) ಬಾಲ್ಯದಿಂದಲೇ ಹಾಡು ಗುನುಗುತ್ತಾ, ಹಾಡುತ್ತಾ ಬೆಳೆದ ಹಾವೇರಿಯ 9 ವರ್ಷದ ಭೂಮಿಕ ಮಾಲ್ತೇಶ್ ಇದೀಗ ಇಂಡಿಯಾ ಬುಕ್ ರೆಕಾರ್ಡ್ ಸಾಧನೆ ಮಾಡಿದ್ದಾರೆ. ಬರೋಬ್ಬರಿ 65 ಕನ್ನಡ ಹಾಡುಗಳನ್ನು ಹಾಡಿ ಈ ಸಾಧನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ 9 ವರ್ಷದ ಬಾಲಕಿ 65 ಕನ್ನಡ ಹಾಡುಗಳನ್ನು ಹಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಭೂಮಿಕಾ ಮಾಲ್ತೇಶ್ ಹಾಡಿದ ವಿಡಿಯೋವನ್ನು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಗರಿಷ್ಠ ಹಾಡು ಹಾಡಿದ ಬಾಲಕಿ

ಆಗಸ್ಟ್ 19ರಂದು 65 ಕನ್ನಡ ಹಾಡುಗಳನ್ನು ಹಾಡಿದ ರೆಕಾರ್ಡ್ ವಿಡಿಯೋವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗಳು ಹಲವರ ಗಮನಸೆಳೆದಿದೆ. ಇದೇ ವೇಳೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಕಮಿಟಿಯ ಗಮನಕ್ಕೂ ಬಂದಿದೆ. 9 ವರ್ಷದ ಬಾಲಕಿ ಸಾಧನೆ ಪರಿಗಣಿಸಿ ಗೌರವಿಸಲಾಗಿದೆ. ಭಾರತದಲ್ಲಿ ಬಾಲಕಿ ಹಾಡಿದ ಗರಿಷ್ಠ ಹಾಡು ಇದಾಗಿದೆ. ಈ ಕೆಟಗರಿಯಲ್ಲಿ ಭೂಮಿಕಾ ಮಾಲ್ತೇಶ್‌ಗೆ ಗೌರವ ದೊರಕಿದೆ.

2016ರ ಅಕ್ಟೋಬರ್ 8 ರಂದು ಜನಿಸಿದ ಭೂಮಿಕಾ, ತಮ್ಮ 9 ವರ್ಷ, 10 ತಿಂಗಳು ಹಾಗೂ 11 ದಿನಗಳ ಪ್ರಾಯದಲ್ಲಿ ಈ ಅಪರೂಪದ ಸಾಧನೆ ಮಾಡಿದ್ದಾರೆ. ಸಣ್ಣ ವಯಸ್ಸಿನ ಮಗುವೊಂದು ಅತಿ ಹೆಚ್ಚು ಕನ್ನಡ ಹಾಡುಗಳನ್ನು ಹಾಡಿ ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ಸಾಧನೆಯನ್ನು ಗುರುತಿಸಿ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ಈ ಆಫಿಶಿಯಲ್ ಮನ್ನಣೆ ನೀಡಿದೆ. 2026ರ ಆಗಸ್ಟ್ 19 ರಂದು ಈ ದಾಖಲೆಯನ್ನು ಅಧಿಕೃತವಾಗಿ ದೃಢಪಡಿಸಲಾಗಿದೆ.

ಡಿಜಿಟಲ್ ಮಾಧ್ಯಮ ಮೂಲಕ ಸಾಧನೆ

ಪುಟಾಣಿ ಮಕ್ಕಳು ಮನೆಯಲ್ಲಿ ಸುಶ್ರಾವ್ಯವಾಗಿ ಹಾಡುತ್ತಾರೆ, ಮನೆ ಕಾರ್ಯಕ್ರಮಗಳು ಸೇರಿದಂತೆ ಸಣ್ಣ ವೇದಿಕೆಯಲ್ಲಿ ಹಾಡುತ್ತಾರೆ. ಆದರೆ ಭೂಮಿಕಾ ಮಾಲ್ತೇಶ್ ಹಾಡುಗಳನ್ನು ರೆಕಾರ್ಡ್ ಮಾಡಿ ಯೂಟ್ಯೂಬ್ ಚಾನೆಲ್ ಮೂಲಕ ಪೋಸ್ಟ್ ಮಾಡಿದ್ದಾರೆ. ಒಂದೇ ಶೈಲಿಯ ಹಾಡಿಗೆ ಭೂಮಿಕಾ ಸೀಮಿತವಾಗಿಲ್ಲ, ಸಿನಿಮಾ ಹಾಡು, ಭಜನೆ, ಜಾನಪದ, ಭಾವಗೀತೆ ಸೇರಿದಂತೆ ಎಲ್ಲಾ ರೀತಿಯ ಹಾಡುಗಳ ಮೂಲಕ ಭೂಮಿಕಾ ಎಲ್ಲರ ಮನಗೆದ್ದಿದಾಳೆ.

ಭೂಮಿಕಾ ಡಿಜಿಟಲ್ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡು ಇದೀಗ ಇಂಡಿಯಾ ಬುಕ್ ರೆಕಾರ್ಡ್ ಗರಿ ಗಿಟ್ಟಿಸಿಕೊಂಡಿದ್ದಾರೆ. 9ನೇ ವಯಸ್ಸಿನಲ್ಲಿ ಕನ್ನಡ ಸಾಹಿತ್ಯ, ಸಂಗೀತ ಪರಂಪರೆಯನ್ನು ಜಗತ್ತಿಗೆ ಸಾರಿದ್ದಾರೆ. ಕನ್ನಡ ಹಾಡುಗಳು ಇದೀಗ ಜಗತ್ತಿಗೆ ಪಸರಿಸುವಂತೆ ಮಾಡಿದ್ದಾಳೆ. ಭೂಮಿಕಾ ಸಾಧನೆಗೆ ಹಲವರು ಅಭಿನಂದನೆ ತಿಳಿಸಿದ್ದಾರೆ. ಭೂಮಿಕಾ ಮಧುರ ಕಂಠಕ್ಕೆ ಹಲವರು ಮಾರು ಹೋಗಿದ್ದಾರೆ.

PREV
Read more Articles on
click me!

Recommended Stories

ಕಾಡು-ಮೇಡು ಬಿಟ್ಟು ಮನೆಯೊಳಗೆ ಮಲಗಲು ಬಂದ ಕಾಳಿಂಗ ಸರ್ಪ; 10 ಅಡಿ ಹಾವು ನೋಡಿ ಬೆಚ್ಚಿಬಿದ್ದ ಮನೆಮಂದಿ!
ಕರಾವಳಿ ರೈಲು ಪ್ರಯಾಣಿಕರಿಗೆ ಕಾದಿದೆ ಒಂದು ಅಚ್ಚರಿಯ ಸುದ್ದಿ, ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ಅಪ್‌ಗ್ರೇಡ್!