‘ನಾನು ದಲಿತಳೆಂದು ರೇವಣ್ಣ ಕುಮ್ಮಕ್ಕಿಂದ ಜೆಡಿಎಸ್ ನವರು ಸಭೆ ಬರ್ತಿಲ್ಲ’

Suvarna News   | Asianet News
Published : Feb 27, 2020, 03:57 PM IST
‘ನಾನು ದಲಿತಳೆಂದು ರೇವಣ್ಣ ಕುಮ್ಮಕ್ಕಿಂದ ಜೆಡಿಎಸ್ ನವರು ಸಭೆ ಬರ್ತಿಲ್ಲ’

ಸಾರಾಂಶ

ನಾನು ದಲಿತಳೆಂದು ರೇವಣ್ಣ ಕುಮ್ಮಕ್ಕಿನಿಂದ ಜೆಡಿಎಸ್ ಸದಸ್ಯರು ನಾನು ಕರೆದ ಸಭೆಗೆ ಹಾಜರಾಗುತ್ತಿಲ್ಲ. ಹೀಗೆಂದು ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತ ಗಂಭೀರ ಆರೋಪ ಮಾಡಿದ್ದಾರೆ.

ಹಾಸನ [ಫೆ.27]: ನಾನು ದಲಿತ ವರ್ಗಕ್ಕೆ ಸೇರಿದ್ದೇನೆ ಎಂದು ನನ್ನ ಸಭೆಗೆ ಜೆಡಿಎಸ್ ಸದಸ್ಯರು ಬರುತ್ತಿಲ್ಲ ಎಂದು ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗಂಭೀರ ಆರೋಪ ಮಾಡಿದ್ದಾರೆ. 

ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ತಮ್ಮದು ದಲಿತ ವರ್ಗ ಎಂದು ಕಡೆಗಣನೆ ಮಾಡಲಾಗುತ್ತಿದೆ ಎಂದು ಜೆಡಿಎಸ್ ಸದಸ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

ರೈತರಿಗೆ ಬಂಪರ್ : 160 ಕೋಟಿ ರು ಸಾಲ ಮನ್ನಾ...

ಕಳೆದ ಸಾಮಾನ್ಯ ಸಭೆಗೆ ಸಾಮೂಹಿಕವಾಗಿ ಜೆಡಿಎಸ್ ಸದಸ್ಯರು ಗೈರುಹಾಜರಾಗಿದ್ದರು. 23 ಸದಸ್ಯರು ಒಟ್ಟಿಗೆ ಗೈರು ಹಾಜರಾದರೆ ನಾನು ಏನೆಂದು ತಿಳಿದುಕೊಳ್ಳಬೇಕು ಎಂದು ಶ್ವೇತ ಪ್ರಶ್ನೆ ಮಾಡಿದರು. 

ಸಿಎಂ ಬಿಎಸ್ ವೈರಿಂದ ಭರವಸೆ ಸಿಕ್ಕಿದೆ ಎಂದ ರೇವಣ್ಣ ಎಚ್ಚರಿಕೆಯನ್ನು ನೀಡಿದ್ರು..

ನಾನು ಹಿಂದುಳಿದ ವರ್ಗದವಳಾಗಿದ್ದು ಈ ನಿಟ್ಟಿನಲ್ಲಿ ನಾನು ಕರೆದ ಸಭೆಗೆ ಬರುತ್ತಿಲ್ಲ ಎಂದುಕೊಂಡಿದ್ದೇನೆ. ಎಲ್ಲರಿಗೂ ಮಾಜಿ ಸಚಿವ ರೇವಣ್ಣ ಸಭೆಗೆ ಹೋಗಬೇಡಿ ಎಂದು ಹೇಳಿದ್ದಾರೆ. ಇದರಿಂದ ಯಾರೂ ಸಭೆಗೆ ಆಗಮಿಸುತ್ತಿಲ್ಲ ಎಂದು ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತ ದೇವರಾಜ್ ಹೇಳಿದರು. 

PREV
click me!

Recommended Stories

ಮದುವೆ ಆಮಿಷವೊಡ್ಡಿ ಟೆಕ್ಕಿಗೆ 1.53 ಕೋಟಿ ರೂ. ವಂಚನೆ: ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದ ಕಿರಾತಕ ಸೆರೆ!
Mandya News: ಸಾಲಬಾಧೆಯಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮ*ಹತ್ಯೆ; ತಾಯಿಗೆ ಹೃದಯಾಘಾತ