ಸಿಎಂ ಬಿಎಸ್ ವೈರಿಂದ ಭರವಸೆ ಸಿಕ್ಕಿದೆ ಎಂದ ರೇವಣ್ಣ ಎಚ್ಚರಿಕೆಯನ್ನು ನೀಡಿದ್ರು

By Suvarna NewsFirst Published Feb 27, 2020, 3:32 PM IST
Highlights

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಗೆ ನನಗೆ ಭರವಸೆ ಸಿಕ್ಕಿದೆ. ಅನುದಾನ, ಹಾಗೂ ನೆರವಿನ ವಿಚಾರವಾಗಿ ಭರವಸೆ ನೀಡಿದ್ದಾರೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದರು. ಅಲ್ಲದೇ ಇದೇ ವೇಳೆ ವಾರ್ನಿಂಗ್ ಒಂದನ್ನು ನೀಡಿದರು. 

ಹಾಸನ [ಫೆ.27]: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರಿಗೆ ಎಲ್ಲರೂ ಗೌರ ತೋರಿಸಬೇಕು. ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಅವರ ವಿರುದ್ಧ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಖಂಡನೀಯ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದರು. 

ಹಾಸನದಲ್ಲಿ ಮಾತನಾಡಿದ ಎಚ್ ಡಿ ರೇವಣ್ಣ, ದೊರೆಸ್ವಾಮಿ ಪಾಕಿಸ್ತಾನ ಏಜೆಂಟ್ ಎನ್ನುವ ಬಸನಗೌಡ ಪಾಟೀಲ್ ಹೇಳಿಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಯತ್ನಾಳ್ ಹೀಗೆ ಮಾತನಾಡಬಾರದಿತ್ತು. ಅವರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ದೊಡ್ಡವರ ಬಗ್ಗೆ ಸಣ್ಣತನದ ಹೇಳಿಕೆ ನೀಡುವುದು ಸರಿಯಲ್ಲ ಎಂದರು. 
 
ಇನ್ನು ಮೊಸಳೆ ಹೊಸಳ್ಳಿ ಇಂಜಿನಿಯರಿಂಗ್ ಕಾಲೇಜು ಮುಚ್ಚುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಹೆಚ್ಚಿನ ಮೂಲಭೂತ ಸೌಕರ್ಯ ನೀಡುವ ಬಗ್ಗೆಯೂ ಹೇಳಿದ್ದಾರೆ. ಅನುದಾನ ಕಡಿತವಾಗಿರುವ ಬಗ್ಗೆ ಸಿಎಂ ಗಮನ ಸೆಳೆದಿದ್ದೇನೆ ಎಂದು ರೇವಣ್ಣ ಹೇಳಿದರು. 

ದೊರೆಸ್ವಾಮಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ: ಸಚಿವ ಸೋಮಣ್ಣ...

ನಾನು ಸಚಿವನಾಗಿದ್ದಾಗ ನಗರದ ಸುತ್ತಮುತ್ತ ಸುಮಾರು 750 ಎಕರೆ ಸ್ವಾಧೀನ ಮಾಡಿದ್ದೆ. 50:50 ಹಂಚಿಕೆಗೆ ಒಪ್ಪಂದ ಆಗಿತ್ತು. ಸುಮಾರು 12 ಸಾವಿರ ನಿವೇಶನ ಅಭಿವೃದ್ಧಿಗೆ ಕ್ರಮ ವಹಿಸಿದ್ದೆ. ಹೀಗೆ ಮಾಡಿದರೆ ಕಡಿಮೆ‌ ದರದಲ್ಲಿ 
ಸೈಟ್ ಸಿಗುತ್ತದೆ. ಇದಕ್ಕೆ ಕೂಡಲೇ ಸರ್ಕಾರ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ಈ ಮೂಲಕ ಬಡವರು ಮನೆ ಹೊಂದುವ ಆಸೆ ಈಡೇರಿಸಬೇಕು ಎಂದು ರೇವಣ್ಣ ಹೇಳಿದರು. 

ಹಾಸನದಲ್ಲಿ ಸೈಟ್ ದಂಧೆ ನಡೆಯುತ್ತಿದೆ. ಪೊಲೀಸರೂ ಸೈಟ್ ಮಾಡಲು ಹೊರಟಿದ್ದಾರೆ. ಪೊಲೀಸ್ ಅಧಿಕಾರಿಗಳು ಸೈಟ್ ಮಾಡಿ ದುಡ್ಡು ಮಾಡಲು ಇದ್ದಾರಾ ಎಂದು  ಗೃಹ ಸಚಿವರಿಗೆ ರೇವಣ್ಣ ಪ್ರಶ್ನೆ ಮಾಡಿದ್ದು, ಇಲ್ಲಿನ ಜಿಲ್ಲಾಡಳಿತ ಸತ್ತು ಹೋಗಿದೆ ಎಂದು ಕಿಡಿಕಾರಿದರು. 

ಚಾಕು ಚೂರಿ ತೋರಿಸಿ ದಂಧೆ  ನಡೆಯುತ್ತಿದೆ.  ಖಾಸಗಿ ಲೇಔಟ್ ದಾರರಿಗೆ  ಜಿಲ್ಲಾಡಳಿತ ಎನ್ ಓ ಸಿ ಕೊಡಬಾರದು. ಬೆಂಗಳೂರಿನಿಂದ ಅನೇಕರು ಜಿಲ್ಲೆಯ ಸುತ್ತಮುತ್ತ ಲೇಔಟ್ ಮಾಡುತ್ತಿದ್ದಾರೆ ಎಂದು ದೂರಿದ್ದು, ಇದಕ್ಕೆ ಅವಕಾಶ ನೀಡುವ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ  ನೀಡಿದರು.

click me!