ಹಾಸನ: ಮುಳುಗಿದ ರೋಮನ್ ಕ್ಯಾಥೋಲಿಕ್ ಚರ್ಚ್

Published : Aug 28, 2019, 01:33 PM IST
ಹಾಸನ: ಮುಳುಗಿದ ರೋಮನ್ ಕ್ಯಾಥೋಲಿಕ್ ಚರ್ಚ್

ಸಾರಾಂಶ

ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ರೋಮನ್ ಚರ್ಚ್ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದೆ. ವಾರದ ಹಿಂದೆಯೇ ಮುಕ್ಕಾಲು ಭಾಗದಷ್ಟು ಮುಳುಗಿದ್ದ ಚರ್ಚ್‌ ಈಗ ಸಂಪೂರ್ಣ ಮುಳುಗಡೆಯಾಗಿದೆ. ಬೇಸಿಗೆಯಲ್ಲಿ ಜಲಾಶಯದ ನೀರು ಕಡಿಮೆಯಾದರೆ ಚರ್ಚ್ ಬಳಿ ಹೋಗಬಹುದು.

ಹಾಸನ(ಆ.28): ಜಿಲ್ಲೆಯ ಗೊರೂರು ಸಮೀಪ ಇರುವ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಪುರಾತನ ಕಾಲದ ಶೆಟ್ಟಿಹಳ್ಳಿ ರೋಮನ್ ಚರ್ಚ್ ಸಂಪೂರ್ಣವಾಗಿ ಮಂಗಳವಾರ ಮುಳುಗಿದೆ.

ವಾರದ ಹಿಂದೆ ಮುಕ್ಕಾಲು ಭಾಗದಷ್ಟು ಮುಳುಗಿ ಹಡಗಿನಂತೆ ಕಾಣುತ್ತಿದ್ದ ಚರ್ಚ್ ಈಗ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ಹಾಸನ ತಾಲೂಕು ಕಟ್ಟಾಯದ ಹತ್ತಿರ ಗುಡ್ಡದ ಮೇಲೆ ಒಂದು ಚರ್ಚ್ ಇದೆ. ಬೇಸಿಗೆಯಲ್ಲಿ ಜಲಾಶಯದ ನೀರು ಕಡಿಮೆಯಾದರೆ ಚರ್ಚ್ ಬಳಿ ಹೋಗಬಹುದು. ಮಳೆಗಾಲದಲ್ಲಿ ನೀರು ಚರ್ಚ್ ಸುತ್ತ ತುಂಬಿಕೊಳ್ಳುತ್ತದೆ.

ಹಾಸನ, ಚಿಕ್ಕಬಳ್ಳಾಪುರಕ್ಕೆ ಹೊಸ ಜಿಲ್ಲಾಧಿಕಾರಿಗಳು

ಮುಕ್ಕಾಲು ಭಾಗ ಮುಳುಗಿದರೇ ಚರ್ಚ್ ತೇಲುತ್ತಿರುವ ಹಡಗಿನಂತೆ ಕಾಣುತ್ತದೆ. ಚರ್ಚ್ ಈ ಭಾಗದ ಪ್ರಮುಖ ಆಕರ್ಷಣೆ. ಇಲ್ಲಿ ಅನೇಕ ಚಲನಚಿತ್ರಗಳ ಹಾಡಿನ ಚಿತ್ರೀಕರಣಗಳು ನಡೆದಿವೆ. ಈ ಪುರಾತನ ಚರ್ಚ್ ನೋಡಲು ಮನೋಹರಕವಾಗಿದ್ದು, ಪ್ರವಾಸಿಗರಿಗೆ ಈ ಜಾಗ ಅತ್ಯಂತ ಸಂತೋಷ ನೀಡುತ್ತದೆ.

'ರಾಜಕೀಯ ಯಕ್ಕುಟ್ಟೋಗಿದೆ, ಆರೋಗ್ಯ ನೋಡ್ಕೋ', ದೇವೇಗೌಡರಿಗೆ ಬಾಲ್ಯದ ಗೆಳೆಯನ ಸಲಹೆ

PREV
click me!

Recommended Stories

ಅಡಿಕೆ ತೋಟದ ದುರಂತ: ಗೊನೆ ಕೊಯ್ಯುವಾಗ ಆಯತಪ್ಪಿ ಬಿದ್ದ ಕಾರ್ಮಿಕ ಸಾವು
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!