ಕಲ್ಲು ಕೋರೆ ಒಡತಿಯಾಗಲು ಪತಿ ಕೊಲ್ಲಿಸಿದ್ದ ಚಾಲಾಕಿ ಪತ್ನಿ ಅಂದರ್

Published : May 31, 2019, 06:19 PM ISTUpdated : May 31, 2019, 06:34 PM IST
ಕಲ್ಲು ಕೋರೆ ಒಡತಿಯಾಗಲು ಪತಿ ಕೊಲ್ಲಿಸಿದ್ದ ಚಾಲಾಕಿ ಪತ್ನಿ ಅಂದರ್

ಸಾರಾಂಶ

 ಗ್ರಾನೈಟ್ ಉದ್ಯಮಿ ಮರ್ಡರ್ ಪ್ರಕರಣದಲ್ಲಿ ಮೊದಲ ಪತ್ನಿ ವಿಜಯ ಸೇರಿ 7 ಜನರ ಬಂಧನ| ಆಸ್ತಿಗಾಗಿ ಗಂಡನ ಕೊಲ್ಲಲು 10 ಲಕ್ಷಕ್ಕೆ ಸುಪಾರಿ ನೀಡಿದ್ದ ವಿಜಯಾ|  ಪತಿಯನ್ನು ಮುಗಿಸಿದ್ರೆ ಗ್ರಾನೈಟ್ ಫ್ಯಾಕ್ಷರಿ, ಆಸ್ತಿ ಹಾಗೂ ಕಲ್ಲು ಕೋರೆ ಸಿಗಲಿದೆ ಎಂದು ಸ್ಕೆಚ್ ಹಾಕಿದ್ದ ಪತ್ನಿ|ಘಟನೆ ನಡೆದ 15 ದಿನಗಳಲ್ಲಿ ಪ್ರಕರಣ ಬೇಧಿಸಿದ ಹಾಸನ ಠಾಣೆ ಪೊಲೀಸರು.

ಹಾಸನ, [ಮೇ.31]: ಹಾಸನ ಜಿಲ್ಲೆಯ ಗ್ರಾನೈಟ್ ಉದ್ಯಮಿ ಅಪ್ಪಣ್ಣಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸೇರಿ 7 ಜನರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೇ 15 ರ ರಾತ್ರಿ ಗ್ರಾನೈಟ್‌ ಉದ್ಯಮಿ ಅಪ್ಪಣ್ಣಗೌಡ ಅವರನ್ನು ಅವರ ಮನೆಯಲ್ಲಿಯೇ ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು. ಇದೀಗ ಈ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ಪತಿಯನ್ನು ಮುಗಿಸಿದ್ರೆ ಗ್ರಾನೈಟ್ ಫ್ಯಾಕ್ಷರಿ, ಆಸ್ತಿ ಹಾಗೂ ಕಲ್ಲು ಕೋರೆ ಸಿಗಲಿದೆ ಎಂದು ಸ್ಕೆಚ್ ಹಾಕಿದ್ದ ಕೊಲೆಯಾದ ಅಪ್ಪಣ್ಣಗೌಡ ಪತ್ನಿ ವಿಜಯ ಸೇರಿ 7 ಜನರನ್ನು ಬಂಧಿಸಿದ್ದಾರೆ.

ಆರೋಪಿಗಳು ಅರಕಲಗೂಡು, ಹಾಸನ, ಚನ್ನರಾಯಪಟ್ಟಣ ಮೂಲದವರಾಗಿದ್ದಾರೆ. ಆಸ್ತಿಗಾಗಿ ಗಂಡನನ್ನು ಕೊಲ್ಲಲು ವಿಜಯಾ 10 ಲಕ್ಷಕ್ಕೆ ಸುಪಾರಿ ನೀಡಿದ್ದಳು. ಅದರಂತೆ ಕಿಲ್ಲರ್ಸ್ ಮೇ 15 ರ ರಾತ್ರಿ  ಅಪ್ಪಣ್ಣಗೌಡ ಮಲಗಿದ್ದ ಕೊಠಡಿಯಲ್ಲೇ ಹತ್ಯೆ ಮಾಡಿದ್ದರು.

ಬಂಧಿತ ಹಂತಕರು ಈ ಹಿಂದೆಯೂ ಕೊಲೆಗೆ ಸಂಚು ರೂಪಿಸಿ ವಿಫಲರಾಗಿದ್ದರು ಎಂದು  ಎಸ್ಪಿ ಚೇತನ್ ಸಿಂಗ್ ರಾಥೋರ್ ಮಾಹಿತಿ ನೀಡಿದರು.

PREV
click me!

Recommended Stories

ಡಾಕ್ಟರ್ ಹೆಸರಿನ ಮುಂದೆ Dr. ಇದ್ದಂತೆ ಇನ್ಮುಂದೆ ಶಿಕ್ಷಕರಿಗೆ Tr, ಸಿಎಂ ಡಿಕೆ ಶಿವಕುಮಾರ್ ಘೋಷಣೆ
ಚಂಡಿಕಾಯಾಗಕ್ಕೂ ಮುನ್ನ ಬೂದೇಶ್ವರ ದೇಗುಲಕ್ಕೆ ಭೇಟಿ ನೀಡಿದ ಸಿಎಂ ಡಿಕೆಶಿ: ಕಾರಣ ಇದೇನಾ?