ಲಾಡ್ಜ್‌ಗೆ ಬಂದು ಹೋಗುತ್ತಿದ್ದವನನ್ನು ಹಿಡಿದು ಮದುವೆ ಮಾಡಿಸಿದ ಪೊಲೀಸ್ರು

Published : May 31, 2019, 04:03 PM ISTUpdated : May 31, 2019, 04:16 PM IST
ಲಾಡ್ಜ್‌ಗೆ ಬಂದು ಹೋಗುತ್ತಿದ್ದವನನ್ನು ಹಿಡಿದು ಮದುವೆ ಮಾಡಿಸಿದ ಪೊಲೀಸ್ರು

ಸಾರಾಂಶ

ಬೆಂಗಳೂರಿನ ಯುವತಿಗೆ ಲವ್ ಸೆಕ್ಸ್ ದೋಖಾ ಮಾಡಿ ಎಸ್ಕೇಪ್ ಆಗಿದ್ದ ತಮಿಳುನಾಡು ಮೂಲದ ಯುವಕನನನ್ನು ಪತ್ತೆ ಹಚ್ಚಿ ಮದುವೆ ಮಾಡಿಸಿರುವ ಪ್ರೇಮ್ ಕಹಾನಿಗೆ ಬಸವನಗುಡಿ ಪೊಲೀಸ್ ಠಾಣೆ ಸಾಕ್ಷಿಯಾಗಿದೆ.

ಬೆಂಗಳೂರು, (ಮೇ.31): ಲವ್ ಸೆಕ್ಸ್ ದೋಖಾ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಹಿಡಿದು ಮದುವೆ ಮಾಡಿಸಿರುವ ವಿಚಿತ್ರ ಪ್ರಕರಣ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪ್ರೀತಿ‌ ಹೆಸರಲ್ಲಿ ಸೆಕ್ಸ್ ಮಾಡಿ ವಂಚಿಸಿ ತಮಿಳುನಾಡಿಗೆ ಎಸ್ಕೇಪ್ ಆಗಿದ್ದ ಆರೋಪಿ ಅರುಣ್ ನನ್ನು ಪತ್ತೆ ಹಚ್ಚಿದ  ಬಸವನಗುಡಿ ಠಾಣೆ ಪೊಲೀಸರು ಮೋಸ ಹೋದ ಯುವತಿ ಜತೆ ಮದುವೆ ಮಾಡಿಸಿದ್ದಾರೆ.

ಅವಳನ್ನ ನಾನು ನಿಜವಾಗಿಯೂ ಪ್ರೀತಿಸುತ್ತೇನೆ. ಮೋಸ ಮಾಡುವ ಉದ್ದೇಶ ನನಗಿಲ್ಲ ಎಂದು ಆರೋಪಿ ಅರುಣ್ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.  ನಂತರ ತನ್ನ ಪ್ರಿಯತಮೆಯನ್ನು ಅಪ್ಪಿಕೊಂಡು ಕಣ್ಣಿರಿಟ್ಟಿದ್ದಾನೆ.

ಪ್ರಿಯಕರನ ಕಣ್ಣೀರಿಗೆ ಕರಗಿದ ಯುವತಿ, ಪೊಲೀಸರಿಗೆ ಕೊಟ್ಟಿದ್ದ ದೂರನ್ನು ವಾಪಸ್ ಪಡೆದಿದ್ದಾಳೆ. ಬಳಿಕ ಪೊಲೀಸರ ಸಮ್ಮುಖದಲ್ಲೇ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡರು.

ಪ್ರಕರಣದ ಕಹಾನಿ
ಲವ್ ಹೆಸರಿನಲ್ಲಿ ಬೆಂಗಳೂರು ಮೂಲದ ಯುವತಿಗೆ ವಂಚಿಸಿದ್ದ ಆರೋಪಿ ಅರುಣ್, ಮೂಲತ ತಮಿಳುನಾಡಿನವನು.  2014ರಲ್ಲಿ ಪ್ರವಾಸಕ್ಕೆಂದು ತಮಿಳುನಾಡಿಗೆ ತೆರಳಿದ್ದ ಬೆಂಗಳೂರು ಮೂಲದ ಯುವತಿಗೆ ಆರೋಪಿ ಅರುಣ್ ಪರಿಚಯವಾಗಿತ್ತು.

ಮೂರು ವರ್ಷಗಳ ಕಾಲ ಗೆಳೆಯನಾಗಿದ್ದ ಅರುಣ್, ಕಳೆದ ಜನವರಿಯಲ್ಲಿ ಪ್ರೇಮ ನಿವೇದನೆ ಮಾಡಿದ್ದ. ಇದಕ್ಕೆ ಯುವತಿ ಸಹ ಒಪ್ಪಿಗೆ ಸೂಚಿಸಿದ್ದಳು.

ಹೀಗೆ ಮುಂದುವರಿದಿದ್ದ ಇವರಿಬ್ಬರ ಪ್ರೇಮ, ಕಳೆದ ಮಾರ್ಚ್ ನಲ್ಲಿ ಯುವತಿಯನ್ನ ಭೇಟಿಯಾಗಲು ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ್ದು, ಬಸವನಗುಡಿಯ ಲಾಡ್ಜ್ ವೊಂದರಲ್ಲಿ ರೂಮ್ ಬುಕ್ ಮಾಡಿ ಯುವತಿಯನ್ನ ಭೇಟಿ ಮಾಡಿದ್ದ..ಹೀಗೆ ಇವರಿಬ್ಬರು ಆಗಾಗ ಭೇಟಿಯಾಗುತ್ತಿದ್ದರು. 

ಇದೇ ಸಿಕ್ಕಿದ್ದೇ ಚಾನ್ಸ್ ಎಂದ ಅರುಣ್,  ಮದುವೆ ಆಗೋದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ನಂತರ ಆದಷ್ಟು ಬೇಗ ನಿಮ್ಮ ಮನೆಗೆ ಬಂದು ಮಾತಾಡ್ತೀನಿ ಎಂದು ಭರವಸೆ  ಸಹ ನೀಡಿ ಹೋದವನು ಫೊನ್ ಸ್ವಿಚ್ ಆಫ್ ಮಾಡಿಕೊಂಡಿದ್ದನು.

ಇದ್ರಿಂದ ಕಂಗಾಲಾಗಿದ್ದ ಯುವತಿ, ಪ್ರಿಯಕರ ಅರುಣ್ ನನ್ನ ಹುಡುಕಿಕೊಂಡು ತಮಿಳುನಾಡಿನ ಆತನ ಮನೆಗೆ ಯುವತಿ ಹೋಗಿದ್ದಳು. ಈ ವೇಳೆ ಅರುಣ್ ಹಾಗೂ ಆತನ ಮನೆಯವರು ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಳುಹಿಸಿದ್ದರು.

ಈ ಹಿನ್ನೆಲೆಯಲ್ಲಿ ನೊಂದ ಯುವತಿ ನ್ಯಾಯಕ್ಕಾಗಿ ಬಸವನಗುಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಇದೀಗ ಈ ಪ್ರಕರಣ ಸುಖಾಂತ್ಯ ಕಂಡಿದ್ದು, ಆರೋಪಿ ಅರುಣ್, ಯುವತಿಯನ್ನು ಹೇಗೆ ನೋಡಿಕೊಳ್ಳುತ್ತಾನೆ ಎನ್ನುವುದೇ ಮುಂದಿರುವ ಪ್ರಶ್ನೆ.

PREV
click me!

Recommended Stories

ಉಡುಪಿ ನೀರು ಸೇದುವಾಗ ಅಮ್ಮನ ಕೈತಪ್ಪಿ ಬಾವಿಗೆ ಬಿದ್ದ ಮಗು; ತಾಯಿ ಬಾವಿಗಿಳಿಯುವಷ್ಟರಲ್ಲಿ ಮಗು ಸಾವು!
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!