ಕ್ಷುಲಕ ಕಾರಣಕ್ಕೆ 8 ವರ್ಷದ ಬಾಲಕಿಯ ಬಾಯಿಗೆ ಬರೆ ಹಾಕಿದ ಪಾಪಿ!

Published : Jan 07, 2019, 03:10 PM IST
ಕ್ಷುಲಕ ಕಾರಣಕ್ಕೆ 8 ವರ್ಷದ ಬಾಲಕಿಯ ಬಾಯಿಗೆ ಬರೆ ಹಾಕಿದ ಪಾಪಿ!

ಸಾರಾಂಶ

ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ನೆರೆಮನೆಯ 8 ವರ್ಷದ ಬಾಲಕಿಯ ಮುಖ ಹಾಗೂ ತುಟಿಗೆ ಬರೆ ಎಳೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹಾಸನ[ಜ.07]: ಕ್ಷುಲ್ಲಕ ಕಾರಣಕ್ಕೆ ಪಾಪಿಯೊಬ್ಬ 8 ವರ್ಷದ ಬಾಲಕಿಯ ಬಾಯಿಗೆ ಬರೆ ಹಾಕಿದ ಅಮಾನವೀಯ ಘಟನೆ ಹಾಸನದಲ್ಲಿ ನಡೆದಿದೆ.

ಜನವರಿ 5 ರಂದು ಈ ಘಟನೆ ನಡೆದಿದ್ದು, ಇಲ್ಲಿನ ಸಕಲೇಶಪುರದ ಬಾಳ್ಳುಪೇಟೆಯ ನಿವಾಸಿ ಜಯಕುಮಾರ್ ಎಂಬಾತ ಈ ಕುಕೃತ್ಯ ಎಸಗಿದ್ದಾನೆ. ತನ್ನ ನೆರೆ ಮನೆಯ ಭುವನೇಶ್ವರಿ, 8 ವರ್ಷದ ಬಾಲಕಿ ಮನೆ ಮುಂದೆ ಬೆಳೆದಿದ್ದ ಹೂ ಕಿತ್ತಿದ್ದಕ್ಕೆ ಆಕೆಯ ಮುಖ ಮತ್ತು ತುಟಿ ಮೇಲೆ ಬರೆ ಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದಾನೆ.  

ಸದ್ಯ ಬಾಲಕಿ ಪೋಷಕರಿಂದ ಸಕಲೇಶಪುರ  ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಈ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು,  ಕೇವಲ ಮುಚ್ಚಳಿಕೆ ಬರೆಸಿಕೊಂಡು ಆರೋಪಿಯನ್ನು  ಮನೆಗೆ ಕಳುಹಿಸಿದ್ದಾರೆ. 


 

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ