Hassan: 25ನೇ ವರ್ಷಕ್ಕೆ ನ್ಯಾಯಾಧೀಶೆಯಾದ ಸಕಲೇಶಪುರದ ಅನುಷಾ

By Sathish Kumar KH  |  First Published Jan 18, 2023, 11:16 PM IST

ಸಿವಿಲ್ ನ್ಯಾಯಾಧೀಶರ ಆಯ್ಕೆಗಾಗಿ ನಡೆದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ
ಯುವ ನ್ಯಾಯವಾದಿ ಕು.ವಿ.ಆರ್.ಅನುಷಾ. ಆಯ್ಕೆ
ಸಾಧನೆಗೆ ಅನೇಕ ಗಣ್ಯರು ಹಾಗೂ ಇತರರಿಂದ ಅಭಿನಂದನೆ


ವರದಿ- ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಹಾಸನ (ಜ.18): ಸಿವಿಲ್ ನ್ಯಾಯಾಧೀಶರ ಆಯ್ಕೆಗಾಗಿ ನಡೆದ ಪರೀಕ್ಷೆಯಲ್ಲಿ ಹಾಸನ ಜಿಲ್ಲೆ, ಸಕಲೇಶಪುರದ ಕು.ವಿ.ಆರ್.ಅನುಷಾ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

Latest Videos

undefined

25 ವರ್ಷದ ಅನುಷಾ, (Anusha) ಸಕಲೇಶಪುರ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾರ ವಿ.ಪಿ.ರಮೇಶ್-ಸೌಮ್ಯ.ಎಲ್ (Couple of VP Ramesh- Sowmya L) ದಂಪತಿ ಪುತ್ರಿ. 27-10-1998 ರಲ್ಲಿ ಜನಿಸಿದ್ದು ಒಂದರಿಂದ ಎಂಟನೇ ತರಗತಿಯವರೆಗೆ ಸಕಲೇಶಪುರದ ಸಂತ ಜೋಸೆಫರ ಶಾಲೆಯಲ್ಲಿ ಓದಿದ್ದಾರೆ. ನಂತರ ಎಂಟರಿಂದ ಹತ್ತನೇ ತರಗತಿಯವರೆಗೆ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ (Saint philomena High School) ವಿದ್ಯಾಭ್ಯಾಸ ಪಡೆದರು. ಸಕಲೇಶಪುರದ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ( PU College) ಪ್ರಥಮ ಮತ್ತು ದ್ವಿತೀಯ ಪಿಯುಸಿ ಮುಗಿಸಿದ ಅನುಷಾ ಹಾಸನದ ಸರ್ಕಾರಿ ಕಾನೂನು ಕಾಲೇಜಿನಲ್ಲಿ (Hassan Govt Law College) ಪ್ರಥಮ ಹಾಗೂ ದ್ವೀತಿಯ ವರ್ಷ, ಬೆಂಗಳೂರಿನ ಕೆಎಲ್ಇ ಕಾಲೇಜಿನಲ್ಲಿ (Bengaluru KLE College) ಮೂರು, ನಾಲ್ಕು ಹಾಗೂ ಅಂತಿಮ ವರ್ಷ ಕಾನೂನು ವಿದ್ಯಾರ್ಥಿನಿಯಾಗಿ ವಿದ್ಯಾಭ್ಯಾಸ ಪಡೆದು 2021 ರಲ್ಲಿ ಕಾನೂನು ಪದವಿ ಪಡೆದಿದ್ದಾರೆ.

25ನೇ ವಯಸ್ಸಿಗೆ ಸಿವಿಲ್ ಕೋರ್ಟ್‌ನ ನ್ಯಾಯಾಧೀಶೆಯಾಗಿ ಗಾಯಿತ್ರಿ ಆಯ್ಕೆ

ನಂತರ ಸಕಲೇಶಪುರದ ಹಿರಿಯ ವಕೀಲರಾದ ಶ್ರೀ ಪೀತಾಂಬರಾಚಾರ್ (Pitambachar) ಅವರ ಬಳಿ ಕಿರಿಯ ವಕೀಲರಾಗಿ ಕಾರ್ಯ ನಿರ್ವಹಿಸಿದ್ದು 17-10-2022 ರಿಂದ ಕರ್ನಾಟಕದ ಉಚ್ಚ ನ್ಯಾಯಾಲಯ ದಲ್ಲಿ LAW CLERK CUM RESEARCH SCHOLAR ಆಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯ(Highcourt of karnataka)(ವು ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು ಗಾಯತ್ರಿ(N.Gayatri) ಅವರು ಆಯ್ಕೆಯಾಗಿದ್ದಾರೆ. ಅದರಲ್ಲಿಯೂ ಸಿವಿಲ್ ನ್ಯಾಯಾಧೀಶರ (Civil Judge) ಆಯ್ಕೆಗಾಗಿ ನಡೆದ ಪರೀಕ್ಷೆಯಲ್ಲಿ ಎರಡನೇ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅನುಷಾ ಸಾಧನೆಗೆ ಅನೇಕ ಗಣ್ಯರು ಹಾಗೂ ಇತರರು ಅಭಿನಂದನೆ ಸಲ್ಲಿಸಿದ್ದಾರೆ.

ಕೋಲಾರದಲ್ಲಿಯೂ ಗಾಯತ್ರಿ ಸಾಧನೆ: ಕೋಲಾರ ಜಿಲ್ಲೆ ಬಂಗಾರಪೇಟೆಯ ಎನ್.ಗಾಯಿತ್ರಿ ಅವರು  ಕರ್ನಾಟಕ ಹೈಕೋರ್ಟ್‌ನ ಸಿವಿಲ್ ನ್ಯಾಯಾಧೀಶೆರಾಗಿ ಆಯ್ಕೆಯಾಗಿ ಬಂಗಾರಪೇಟೆ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. 2021ರಲ್ಲಿ ಕಾನೂನು ಪದವಿ ಪಡೆದುಕೊಂಡಿರುವ ಗಾಯತ್ರಿರವರು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಮತ್ತು ಸರಿಯಾದ ಪ್ರಯತ್ನದ ಮೂಲಕ 25ನೇ ವಯಸ್ಸಿಗೆ ಕರ್ನಾಟಕ ಸಿವಿಲ್ ಕೋರ್ಟ್‌(Karnataka Civil Court)ನ  ನ್ಯಾಯಾಧೀಶರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಬಡ ಕುಟುಂಬದಲ್ಲಿ ಜನಿಸಿದ ಹುಡುಗಿ: ಅತ್ಯಂತ ತಳ ಸಮುದಾಯದ ಮತ್ತು ಬಡತನದ ಹಿನ್ನೆಲೆಯಿಂದ ಬಂದ ಗಾಯತ್ರಿರವರು ಬಂಗಾರಪೇಟೆ(Bangarapete)ಯ ಕಾರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಧ್ಯಾಭ್ಯಾಸ ಆರಂಭಿಸಿ  ಬಾಲಕಿಯ ಪ್ರೌಢಶಾಲೆಯಲ್ಲಿ ಓದಿ ಪದವಿ ಪೂರ್ವ ಕಾಲೇಜು ಶಿಕ್ಷಣ ಪಡೆದುಕೊಂಡಿದ್ದರು. ಕೆಜಿಎಫ್‌ನ ಕೆಂಗಲ್ ಹನುಮಂತಯ್ಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯಲ್ಲಿ ಕರ್ನಾಟಕಕ್ಕೆ ನಾಲ್ಕನೆ‌ ಶ್ರೇಣಿಯನ್ನು ಪಡೆದುಕೊಂಡು ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದರು. ಗಾಯತ್ರಿರವರು ಬಂಗಾರಪೇಟೆಯ  ನಾರಾಯಣಸ್ವಾಮಿ ವೆಂಕಟಲಕ್ಷ್ಮಿರವರ ಒಬ್ಬಳೇ ಮಗಳಾಗಿದ್ದು ತೀರಾ ಬಡತನದಲ್ಲಿ ಬೆಳೆದ ಗಾಯಿತ್ರಿರವರು ಮೊದಲಿನಿಂದಲೂ ಸಾಮಾಜಿಕ ಕಾಳಜಿಹೊಂದಿದ್ದು  ಏನಾದರೂ ಸಾಧಿಸಬೇಕೆಂಬ ಛಲ ಹೊಂದಿದ್ದರು. ಇದೀಗ 25ನೇ ವಯಸ್ಸಿಗೆ ಸಿವಿಲ್ ಕೋರ್ಟ್‌ನ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ಹೆಮ್ಮೆ ಪಡುವಂತಾಗಿದೆ.

click me!