ಟಾಟಾ ಸುಮೋ -ಕ್ವಾಲೀಸ್ ನಡುವೆ ಭೀಕರ ಅಪಘಾತ : ಸ್ಥಳದಲ್ಲೇ ನಾಲ್ಕು ಸಾವು

Kannadaprabha News   | Asianet News
Published : Feb 21, 2021, 12:03 PM IST
ಟಾಟಾ ಸುಮೋ -ಕ್ವಾಲೀಸ್ ನಡುವೆ ಭೀಕರ ಅಪಘಾತ : ಸ್ಥಳದಲ್ಲೇ ನಾಲ್ಕು ಸಾವು

ಸಾರಾಂಶ

ಟಾಟಾ ಸುಮೋ ಕ್ವಾಲಿಸ್ ನಡುವೆ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದು, 11ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 

ಹಾಸನ (ಫೆ.21): ಟಾಟಾ ಸುಮೋ- ಕ್ವಾಲೀಸ್ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. 

ಟಾಟಾಸುಮೋಗೆ ಹಿಂಬದಿಯಿಂದ ಕ್ವಾಲಿಸ್ ಡಿಕ್ಕಿ ಹೊಡೆದಿದ್ದು ಈ ವೇಳೆ ಸ್ಥಳದಲ್ಲೇ ನಾಲ್ವರು ಸಾವಿಗೀಡಾಗಿದ್ದು, ಓರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.  

ಹಾಸನ ಹೊರವಲಯದ ಕೆಂಚಟ್ಟಹಳ್ಳಿ ಬಳಿ ಅಪಘಾತ ಸಂಭವಿಸಿದ್ದು, ನಾಲ್ವರು ಮಹಿಳೆಯರು ಸೇರಿ 10 ಮಂದಿಗೆ ತೀವ್ರ ಗಾಯವಾಗಿದೆ.

ಶಿವಮೊಗ್ಗ ಸ್ಫೋಟ: ಪೊಲೀಸರ ಮೇಲೆ ಒತ್ತಡ ಹಾಕಿ ಆರೋಪಿಯನ್ನು ಬಿಡಿಸಲಾಯ್ತಾ.? ..

ಕಳೆದ ವಾರವಷ್ಟೇ ಇದೇ  ರಾಷ್ಟ್ರೀಯ ಹೆದ್ದಾರಿ 75 ರ ಚನ್ನರಾಯಪಟ್ಟಣ ಬಳಿ ಅಪಘಾತವಾಗಿ ನಾಲ್ವರು ಯುವಕರು ಮೃತಪಟ್ಟಿದ್ದರು.  

ಕೆ.ಜಿ.ಎಫ್ ಮೂಲದ ಪ್ರದೀಪ್ ಕುಮಾರ್, ಪುನೀತ್, ನವೀನ್, ಗುಡ್ಡು ಮೃತರು. ಉಡುಪಿಯಲ್ಲಿ ನಡೆಯುತ್ತಿರುವ ಸಂಬಂಧಿಗಳ ಮದುವೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆಯಾಗಿದೆ.  

ಗಾಯಾಳುಗಳನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC