ಹಾಸನಾಂಬೆ ದರ್ಶನದ ವೇಳೆ ಡಿಸಿಗೆ ಆವಾಜ್‌ ಹಾಕಿದ ಸಿಪಿಐ, 'ಡಿಸ್ಮಿಸ್‌ ಮಾಡಿಸ್ತೀನಿ' ಎಂದ ಜಿಲ್ಲಾಧಿಕಾರಿ!

By Santosh Naik  |  First Published Oct 29, 2024, 9:09 PM IST

ಹಾಸನಾಂಬೆ ದೇವಿ ದರ್ಶನೋತ್ಸವದಲ್ಲಿ ಪೊಲೀಸ್ ಮತ್ತು ಜಿಲ್ಲಾಧಿಕಾರಿ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದ್ದು, ಡಿಸಿ ಸಿ.ಸತ್ಯಭಾಮಾ ಸಾರ್ವಜನಿಕವಾಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಡಿಸಿ ಪಿಎ ಮತ್ತು ಸಬ್‌ಇನ್ಸ್‌ಪೆಕ್ಟರ್ ನಡುವಿನ ವಾಗ್ವಾದದಿಂದ ಘಟನೆ ಉಲ್ಬಣಗೊರಿದೆ.


ಹಾಸನ (ಅ.29): ಹಾಸನಾಂಬೆ ದೇವಿ ದರ್ಶನೋತ್ಸವ ವೇಳೆ ಪೊಲೀಸ್ ಮತ್ತು ಜಿಲ್ಲಾಧಿಕಾರಿ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ. ಇದೇ ಕಾರಣಕ್ಕೆಹಾಸನ ಡಿಸಿ ಸಿ.ಸತ್ಯಭಾಮಾ ಸಾರ್ವಜನಿಕವಾಗಿಯೇ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೊಂದೆಡೆ ಪೊಲೀಸ್‌ ಅಧಿಕಾರಿ ಕೂಡ ತಾವೇನು ಕಮ್ಮಿ ಎನ್ನುವಂತೆ ಡಿಸಿ ಸತ್ಯಭಾಮಾ ಅವರಿಗೆ ಅವಾಜ್‌ ಹಾಕಿರುವ ಘಟನೆ ನಡೆದಿದೆ. ಮಾರಾಮಾರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಸಿ ಸತ್ಯಭಾಮಾ ಪೊಲೀಸ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಡಿಸಿ ಗರಂ ಆಗಿದ್ದರು. ಶಿಷ್ಟಾಚಾರದ ವಾಹನ ತಡೆದಿದ್ದಕ್ಕೆ ಜಿಲ್ಲಾಧಿಕಾರಿಪಿಎ ಶಶಿ ಹಾಗೂ ಸಬ್‌ಇನ್ಸ್‌ಪೆಕ್ಟರ್ ನಡುವೆ ಮಾರಾಮಾರಿ ನಡೆದಿತ್ತು.

ಡಿ‌ಸಿ ಪಿಎ ಶಶಿ ಎಂಬಾತನನ್ನು ಪೊಲೀಸರು ಹೊರಗೆ ತಳ್ಳಿದ್ದರು ಎನ್ನಲಾಗಿತ್ತು. ಈ ವೇಳೆ ಸಿಸಿಟಿವಿ ಪರಿಶೀಲನೆ ಮುಖ್ಯದ್ವಾರದ ಬಳಿ  ಡಿಸಿ ಸಿ.ಸತ್ಯಭಾಮ ಬಂದಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೇಳಿ ಅಮಾನತು ಮಾಡಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

Tap to resize

Latest Videos

ಇದರಿಂದ ಇನ್ನಷ್ಟು ಸಿಟ್ಟಾದ ಪೊಲೀಸ್‌ ಅಧಿಕಾರಿಗಳು ಡಿಸಿ ಮಾತಿಗೆ ಸಾರ್ವಜನಿಕವಾಗಿತೇ ತಿರುಗೇಟು ನೀಡಿದ್ದು ಡಿಸಿಗೆ ಇನ್ನಷ್ಟು ಮುಜುಗರಕ್ಕೆ ಕಾರಣವಾಯಿತು. ಈ ನಡುವೆ ಮಳವಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಮತ್ತು ಡಿಸಿ ನಡುವೆ ವಾಗ್ವಾದ ನಡೆದಿದೆ.

2 ಬಾರಿ ಸೋತ ನನ್ನ ಮಗನನ್ನ ಈ ಸಾರಿ ಗೆಲ್ಲಿಸುವಂತೆ ಹಾಸನಾಂಬೆಯಲ್ಲಿ ಬೇಡಿಕೊಂಡಿದ್ದೇನೆ: ಕುಮಾರಸ್ವಾಮಿ

'ನಮ್ಮ ಮಹಿಳಾ ಪೊಲೀಸ್ ಸಬ್ಇನ್ಸ್‌ಪೆಕ್ಟರ್‌ಗೆ ಗಾಯವಾಗಿದೆ. ಕೂಡಲೇ ಚಿಕಿತ್ಸೆ ಕೊಡಿಸಿ ಎಂದ ಸಿಪಿಐ ರವಿ, ಡಿಸಿಗೆ ತಿಳಿಸಿದ್ದಾರೆ. ನಿಮ್ಮ ಪಿ‌ಎ ವರ್ತನೆಯೇ ಘಟನೆಗೆ ಕಾರಣ ಎಂದು ಡಿಸಿ ಮುಂದೆ ಏರು ಧ್ವನಿಯಲ್ಲೇ ಹೇಳಿದ ಸಿಪಿಐ ರವಿ ಮಾತನಾಡಿದ್ದಾರೆ.

365 ದಿನಗಳಲ್ಲಿ ದೀಪಾವಳಿಗೆ ಮಾತ್ರ ತೆರೆಯುವ ಹಾಸನಾಂಬ ದೇವರ ಬಗ್ಗೆ ನಿಮಗೆಷ್ಟು ಗೊತ್ತು?

ಈ ಹಂತದಲ್ಲಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಗೇಟ್ ಮುಂದೆ  ಕಂದಾಯ ಅಧಿಕಾರಿಗಳು ನಿಂತು ಕೆಲಸ ನಿರ್ವಹಿಸುವಂತೆ ಡಿಸಿ ಆದೇಶ ನೀಡಿದ್ದಾರೆ. ಈ ವೇಳೆ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿ  ಡಿಸಿ ಸಿ.ಸತ್ಯಭಾಮ ಹೊರಟಿದ್ದಾರೆ. ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಆಗಮಿಸಿದ್ದಾರೆ.
 

click me!