ಹರಿ ಓಂ ಟ್ರಸ್ಟ್ ಸಂಸ್ಥಾಪಕ ಡಾ. ನಾರಾಯಣ ಸಾವಂತ್ ನಿಧನ

By Kannadaprabha NewsFirst Published May 6, 2021, 12:03 PM IST
Highlights

ಹೋಮಿಯೋಪತಿ ವೈದ್ಯ ತತ್ವಜ್ಞಾನಿ, ಮತ್ತು ಸಂತ, ಹರಿ ಓಂ ಟ್ರಸ್ಟ್ ಸಂಸ್ಥಾಪಕ ಡಾ. ನಾರಾಯಣ ಸಾವಂತ್  ಅನಾರೋಗ್ಯದಿಂದ ಬುಧವಾರ ಬೆಳಗ್ಗೆ ನಿಧನರಾದರು.   ವೈದ್ಯರಾಗಬೇಕೆಂದು ಪ್ರತಿಜ್ಞೆ ಮಾಡಿ  ಹೋಮಿಯೋಪತಿ ವೈದ್ಯ ವೃತ್ತಿ ಆಯ್ಕೆ ಮಾಡಿಕೊಂಡು ಆಧ್ಯಾತ್ಮ ಜೀವನ ಆರಿಸಿಕೊಂಡಿದ್ದರು.

ಬೆಂಗಳೂರು (ಮೇ.06): ಹೋಮಿಯೋಪತಿ ವೈದ್ಯ ತತ್ವಜ್ಞಾನಿ, ಮತ್ತು ಸಂತ, ಹರಿ ಓಂ ಟ್ರಸ್ಟ್ ಸಂಸ್ಥಾಪಕ ಡಾ. ನಾರಾಯಣ ಸಾವಂತ್ (69) ಬುಧವಾರ ಬೆಳಗ್ಗೆ ನಿಧನರಾದರು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ನಾರಾಯಣ ಸಾವಂತ್ ಅವರು ಕೊನೆಯುಸಿರೆಳೆದರು. ನೆಲಮಂಗಲ ಸಮೀಪದ ತಪೋವನದಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. 

1952ರ ಡಿ.29ರಂದು ಕಾರವಾರದಲ್ಲಿ ಜನಿಸಿದ ನಾರಾಯಣ ಸಾವಂತ್ ಪೊಲೀಸ್ ಇಲಾಖೆಯಲ್ಲಿದ್ದ ಅವರ ತಂದೆ ಟೈಫಾಯಿಡ್‌ಗೆ ಚಿಕಿತ್ಸೆ ಸಿಗದೆ ಮೃತರಾಗಿದ್ದು ಅವರ ಮೇಲೆ ಪರಿಣಾಮ ಬೀರಿತು.  ಈ ವೇಳೆ ಅವರು ವೈದ್ಯರಾಗಬೇಕೆಂದು ಪ್ರತಿಜ್ಞೆ ಮಾಡಿ  ಹೋಮಿಯೋಪತಿ ವೈದ್ಯ ವೃತ್ತಿ ಆಯ್ಕೆ ಮಾಡಿಕೊಂಡರು. 

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಭಾಸ್ಕರ ಮಯ್ಯ ನಿಧನ

9ನೇ ವಯಸ್ಸಿನಲ್ಲೇ ಆಧ್ಯಾತ್ಮದ ಸೆಳೆತಕ್ಕೆ ಸಿಲುಕಿ ಸಾವಂತ್ ಗೋವಿಂದ ಪಾದಾಚಾರ್ಯರ ಮಾರ್ಗದರ್ಶನ ಪಡೆದರು. 

1977ರಲ್ಲಿ ಬೆಂಗಳೂರಿನ  ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿಯಲ್ಲಿ ಕೆಲಸಕ್ಕೆ ಸೇರಿದ್ದು , ಇದೇ ಹೊತ್ತಲ್ಲಿ ಔಷಧಿ ನೀಡುವ ಸೇವೆಯನ್ನು ಆರಂಭಿಸಿದರು. 

ಇವರು ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವೆಗಾಗಿ 1995ರಲ್ಲಿ ಹರಿ ಓಂ ಟ್ರಸ್ಟ್ ಸ್ಥಾಪಿಸಿದರು.  ರಾಜಾಜಿನಗರದ ಮಂಜುನಾಥನಗರದಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸುತ್ತದೆ.  

 ಕಳೆದ 43  ವರ್ಷಗಳಿಂದ ಲಕ್ಷಾಂತರ  ಜನರಿಗೆ ಉಚಿತವಾಗಿ  ವೈದ್ಯಕೀಯ  ತಪಾಸಣೆ  ನಡಿಸಿ, ಉಚಿತವಾಗಿ ಔಷಧೋಪಚಾರ ನೀಡಿ ಜನ ಸೇವೆಯೇ ಭಗವಂತನ  ಸೇವೆ ಎಂಬುದನ್ನು ಆಚರಿಸಿದವರು.  ಆಧ್ಯಾತ್ಮದಲ್ಲಿ ಆಸಕ್ತ ಜಿಜ್ಞಾಸುಗಳಿಗೆ ಸ್ವತಃ  ಧ್ಯಾನ ತರಬೇತಿ  ಉಚಿತವಾಗಿ  ನೀಡುತ್ತಾ, ಸದಾ ಸತ್ಸಂಗದಲ್ಲಿ ಭಾಗಿಯಾಗಿ ಮಾರ್ಗದರ್ಶನ ನೀಡುತ್ತಿದ್ದರು.  

click me!