ಕಳೆದ ಬಾರಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕಡಿಮೆ ದರದಲ್ಲಿ ಪ್ರತಿಯೊಂದು ಮನೆಗೆ ತ್ರಿವರ್ಣ ಧ್ವಜವನ್ನು ತಲುಪಿಸುವ ಕಾರ್ಯ ಯಶಸ್ವಿಯಾಗಿತ್ತು. ಉಡುಪಿ ಅಂಚೆ ವಿಭಾಗದಿಂದ 20 ಸಾವಿರಕ್ಕೂ ಅಧಿಕ ಮನೆಗಳಿಗೆ ತ್ರಿವರ್ಣ ಧ್ವಜವನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಬಾರಿ 22 ಸಾವಿರ ಧ್ವಜಗಳನ್ನು ವಿತರಿಸುವ ಗುರಿ ಇದೆ ಎಂದ ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು
ಉಡುಪಿ(ಆ.12): ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಬಾರಿಯ ಸ್ವಾತಂತ್ರ್ಯೋತ್ಸವದಂಗವಾಗಿ ಅಂಚೆ ಇಲಾಖೆಯು ರ್ಹ ರ್ಘ ತಿರಂಗಾ ಅಭಿಯಾನವನ್ನು ಆಯೋಜಿಸಿದೆ. ಇದರ ಯಶಸ್ಸಿಗಾಗಿ ಉಡುಪಿ ಅಂಚೆ ವಿಭಾಗವು ತ್ರಿವರ್ಣ ಧ್ವಜದ ಕುರಿತು ಜನಜಾಗೃತಿ ಜಾಥಾವನ್ನು ಉಡುಪಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿತ್ತು
ನಗರದ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿ ಜಾಥಾಕ್ಕೆ ಚಾಲನೆ ನೀಡಿದ ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು ಮಾತನಾಡಿ, ಕಳೆದ ಬಾರಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕಡಿಮೆ ದರದಲ್ಲಿ ಪ್ರತಿಯೊಂದು ಮನೆಗೆ ತ್ರಿವರ್ಣ ಧ್ವಜವನ್ನು ತಲುಪಿಸುವ ಕಾರ್ಯ ಯಶಸ್ವಿಯಾಗಿತ್ತು. ಉಡುಪಿ ಅಂಚೆ ವಿಭಾಗದಿಂದ 20 ಸಾವಿರಕ್ಕೂ ಅಧಿಕ ಮನೆಗಳಿಗೆ ತ್ರಿವರ್ಣ ಧ್ವಜವನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಬಾರಿ 22 ಸಾವಿರ ಧ್ವಜಗಳನ್ನು ವಿತರಿಸುವ ಗುರಿ ಇದೆ ಎಂದರು.
undefined
ಕೋಡಿಬೆಂಗ್ರೆ ಬೀಚ್‌ನಲ್ಲಿ ಮೀನಿನ ಸುಗ್ಗಿ, ಟನ್‌ಗಟ್ಟಲೆ ಮೀನು ಬಲೆಗೆ
ಈ ಸಂದರ್ಭದಲ್ಲಿ ಉಡುಪಿ ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ್ ವಿಠಲ ಭಟ್, ವಸಂತ್, ದಯಾನಂದ ದೇವಾಡಿಗ, ಅಂಚೆ ನಿರೀಕ್ಷಕರಾದ ಶಂಕರ ಲಮಾಣಿ, ಶಶಿಕುಮಾರ್ ಹೀರೆಮಠ, ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಗುರುಪ್ರಸಾದ್, ಉಡುಪಿ ಅಂಚೆ ವಿಭಾಗದ ಅಂಚೆ ಸಿಬ್ಬಂದಿ ಉಪಸ್ಥಿತರಿದ್ದರು. ಉಡುಪಿ ಅಂಚೆ ಕಚೇರಿಯಿಂದ ಹೊರಟ ಜಾಥಾ ಹಳೆ ಪೋಸ್ಟ್ ಆಫೀಸ್ ರಸ್ತೆ ಮೂಲಕ ಸಾಗಿ ಹಳೆ ಡಯಾನಾ ವೃತ್ತದಿಂದ ತಿರುಗಿ ಕವಿ ಮುದ್ದಣ್ಣ ಮಾರ್ಗವಾಗಿ ವಾಪಸ್ ಉಡುಪಿ ಅಂಚೆ ಕಚೇರಿಯ ಬಳಿ ಸಮಾಪನಗೊಂಡಿತು.
ಎಲ್ಲ ಅಂಚೆ ಕಚೇರಿಗಳಲ್ಲಿ ಧ್ವಜ ಲಭ್ಯ
ಆ.13ರಂದು ಭಾನುವಾರ ಬೆಳಿಗ್ಗಿನಿಂದ ಮಧ್ಯಾಹ್ನದ ತನಕ ಜಿಲ್ಲೆಯ ಎಲ್ಲ ಅಂಚೆ ಕಚೇರಿಗಳಲ್ಲಿ ವಿಶೇಷ ಕೌಂಟರ್‌ಗಳಲ್ಲಿ 25 ರು. ನೀಡಿ ತ್ರಿವರ್ಣ ಧ್ವಜ ಖರೀದಿಗೆ ಅವಕಾಶವಿದೆ. ಅಂಚೆ ಇಲಾಖೆಯ ವೆಬ್‌ಸೈಟ್‌ನಿದಂಲೂ ಆನ್‌ಲೈನ್ ಮೂಲಕ ತ್ರಿವರ್ಣ ಧ್ವಜವನ್ನು ಖರೀದಿಸಬಹುದಾಗಿದೆ.