
ಚಾಮರಾಜನಗರ (ಫೆ.28): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಣ್ಣೆ ಕಂಡ್ರೆ ಆಗಲ್ಲ ಅನ್ಸುತ್ತೆ. ಅದಕ್ಕಾಗಿ ಎಲ್ಲ ಎಣ್ಣೆ ಬೆಲೆ ಏರಿಕೆಮಾಡಿದ್ದಾರೆ ಎಂದು ಹನೂರು ಶಾಸಕ ಆರ್. ನರೇಂದ್ರ ಮಾರ್ಮಿಕವಾಗಿ ನುಡಿದರು.
ನಗರದ ಶಿವಕುಮಾರಸ್ವಾಮಿ ಭವನ ಅವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದರು.
ಚಳಿಗಾಲ ಮುಗಿದ ಬಳಿಕ ಪೆಟ್ರೋಲ್ ದರ ಇಳಿಕೆ: ಕೇಂದ್ರ! ..
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿಯಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ.
ಮೋದಿ ಅವರಿಗೆ ಎಣ್ಣೆಕಂಡರೆ ಆಗದಿರುವುದರಿಂದ ಅಡುಗೆ ಎಣ್ಣೆ, ವಾಹನಗಳಿಗೆ ಹಾಕುವ ಎಣ್ಣೆ ಎರಡರ ಬೆಲೆಯೂ ನಿರಂತರ ಹೆಚ್ಚಾಗುತ್ತಿದೆ, ಶ್ರೀಸಾಮಾನ್ಯನ ಬದುಕು ದುಸ್ತರ ವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಲೇವಡಿ ಮಾಡಿದರು.