ವೇದಿಕೆಯಲ್ಲಿ ಕಣ್ಣೀರಿಟ್ಟ ಕೈ ನಾಯಕ ಜಿ.ಪರಮೇಶ್ವರ್‌

By Kannadaprabha NewsFirst Published Feb 28, 2021, 11:15 AM IST
Highlights

ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ವೇದಿಕೆಯಲ್ಲೇ ಕಣ್ಣಿರು ಹಾಕಿದ್ದಾರೆ. ಕಾರ್ಯಕ್ರಮ ಒಂದರ ವೇದಿಕೆಯಲ್ಲಿ ಪರಮೇಶ್ವರ್ ಅತ್ತಿದ್ದಾರೆ. 

 ಹಾಸನ (ಫೆ.28):  ಡಾ.ಬಿ.ಆರ್‌.ಅಂಬೇಡ್ಕರ್‌ ರಚಿಸಿರುವ ಸಂವಿಧಾನ ಬದಲಾಣೆಗೆ ಮುಂದಾದರೆ ದೇಶದ ಜನ ದಂಗೇಳುತ್ತಾರೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್‌ ಎಚ್ಚರಿಕೆ ನೀಡಿದರು.

ತಾಲೂಕಿನ ಮಾಯಸಮುದ್ರ ಗ್ರಾಮದಲ್ಲಿ ಅಂಬೇಡ್ಕರ್‌ ಅಭಿಮಾನಿಗಳು ಶನಿವಾರ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಬೃಹತ್‌ ಸಮಾವೇಶ ಹಾಗೂ ಝೀ ಟಿವಿ ವಾಹಿನಿಯವರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾಭಾರತ, ರಾಮಾಯಣ ಮಹಾಗ್ರಂಥದಷ್ಟೇ ಅಂಬೇಡ್ಕರ್‌ ಸಂವಿಧಾನ ಸರಿಸಮಾನವಾದು. ಆದ್ದರಿಂದ ಯಾರಿಂದಲೂ ಸಂವಿಧಾನ ಬದಲಾಯಿಸುವ ಮಾತು ಬರಬಾರದು. ಸಂವಿಧಾನ ರಚನೆ 71 ವರ್ಷ ಕಳೆದರೂ ಯಾವುದೇ ಅನಾಹುತ ನಡೆದಿಲ್ಲ. ಇದುವರೆಗೂ ಅಧಿ​ಕಾರ ಹಸ್ತಾಂತರ, ಬದಲಾವಣೆಯಾಗುವ ಏನಾದರೂ ಕಾನೂನಾತ್ಮಕವಾಗಿ ತೊಂದರೆಯಾದ್ದೀಯ ಎಂದು ಪ್ರಶ್ನಿಸಿದರು.

ರಾಜಕೀಯದಲ್ಲಿ ನಿಷ್ಠೆ, ಪ್ರಾಮಾಣಿಕತೆಗೆ ಬೆಲೆ ಇಲ್ಲ : ಪರಮೇಶ್ವರ್‌ ವಿಷಾದ .

ಲಂಡನ್‌ನಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ವಾಸ ಇದ್ದ ಮನೆಗೆ ಭೇಟಿ ನೀಡಿದ್ದೆ. ಬಹಳ ಚಿಕ್ಕದಾದ ಕೊಠಡಿ. ಅಲ್ಲಿಯೇ ಅಂಬೇಡ್ಕರ್‌ ವಿದ್ಯಾಭ್ಯಾಸ ಮಾಡಿದ್ದಾರೆ. ಈ ಕೊಠಡಿಯಲ್ಲಿ ಅಂಬೇಡ್ಕರ್‌ ಹೇಗೆ ಓದಿರಬಹುದು ಎಂದು ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ಆಮನೆಯ ಜಾಗವನ್ನು ಕೇಂದ್ರ ಸರ್ಕಾರ ಖರೀದಿಸಿ ಮ್ಯೂಜಿಯಂ ಮಾಡಿದೆ.

 ಆ ಮನೆಯಲ್ಲಿ ಅಂಬೇಡ್ಕರ್‌ ಅವರ ಫೋಟೋ ಇಡಲಾಗಿದೆ. ಅದು ಉದ್ಘಾಟನೆಯಾದಾಗ ಪ್ರಧಾನಿ ಬಿಟ್ಟರೆ ಸಹಿ ಹಾಕಲು ನಾನು ಮೂರನೇಯವನು. ಅಲ್ಲಿ ಹೋದಾಗ ಮೈ ರೋಮಗಳು ಎದ್ದು ನಿಂತವು. ಗಳಗಳ ಅಂತ ಅತ್ತು ಬಿಟ್ಟೆಎಂದು ಅಂಬೇಡ್ಕರ್‌ ನೆನೆದು ವೇದಿಕೆಯಲ್ಲಿ ಜಿ.ಪರಮೇಶ್ವರ್‌ ಕಣ್ಣೀರಿಟ್ಟರು.

click me!