ವಿಜಯಪುರದ ನರಸಲಗಿ ಗ್ರಾಮದಲ್ಲಿ ವಿಶೇಷ "ಹಂತಿ ಹಬ್ಬ" ಆಚರಣೆ..!

By Girish Goudar  |  First Published Mar 1, 2024, 10:16 AM IST

ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆಯಿಂದಾಗಿ ಹಂತಿ ಹೊಡೆಯುವ ಪದ್ಧತಿ ನಶಿಸಿಹೋಗಿದೆ. ವಿಜಯಪುರ ಜಿಲ್ಲೆಯಲ್ಲಿ ಹಂತಿ ಹೊಡೆಯುವುದು ಜಾನಪದ ಹಾಡುಗಳು ಮೂಲಕ ಮತ್ತೆ ಜಾನಪದ ಪದ್ಧತಿ ಮರುಕಳಿಸುವ ವಿಭಿನ್ನ ಪ್ರಯತ್ನ ಮಾಡಲಾಗಿದೆ. ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ದೇವೇಂದ್ರ ಗೋನಾಳ ಅವರ ಹೊಲದಲ್ಲಿ  'ಜೋಳದ ರಾಶಿ ನರಸಲಗಿ ಹಂತಿ ಹಬ್ಬ ಅರ್ಥಪೂರ್ಣವಾಗಿ ನಡೆಯಿತು.


ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ಮಾ.01):  ಕೃಷಿ ಆಧುನಿಕ‌ ಯಂತ್ರೋಪಕರಣಗಳ‌ ಸದ್ದು ಗದ್ದಲಗಳ ನಡುವೆ ನಮ್ಮ ಹಳೆ‌ ಕೃಷಿ ಸಂಪ್ರದಾಯಗಳು ನಶಿಸಿ‌ಹೋಗ್ತಿವೆ. ಹಂತಿ ಕಟ್ಟುವುದು, ಹಂತಿ ಹಾಡು ಹೇಳುವ ಮೂಲಕ ನಡೆಯುತ್ತಿದ್ದ ರಾಶಿ ಈಗ ನೋಡೋದಕ್ಕು ಸಿಗುವುದಿಲ್ಲ. ಹಂತಿ ಪದ್ದತಿಯ ಕೃಷಿ ಕಾರ್ಯ ಸಧ್ಯ ನಿಂತು ಹೋಗಿವೆ. ಈ ಅಪರೂಪದ ಹಂತಿ ಪದ್ದತಿಯನ್ನ‌ ವಿಜಯಪುರ ಜಿಲ್ಲೆಯ ನರಸಲಗಿ ಗ್ರಾಮದಲ್ಲಿ "ಹಂತಿ ಹಬ್ಬದ" ಮೂಲಕ ಪುನರ್ ನೆನಪಿಸಲಾಯಿತು. 

Latest Videos

undefined

ರೈತರ ಹಂತಿ ಹಬ್ಬ, ಮತ್ತೆ ನೆನಪಾಯ್ತು ಸಂಸ್ಕೃತಿ..

ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆಯಿಂದಾಗಿ ಹಂತಿ ಹೊಡೆಯುವ ಪದ್ಧತಿ ನಶಿಸಿಹೋಗಿದೆ. ವಿಜಯಪುರ ಜಿಲ್ಲೆಯಲ್ಲಿ ಹಂತಿ ಹೊಡೆಯುವುದು ಜಾನಪದ ಹಾಡುಗಳು ಮೂಲಕ ಮತ್ತೆ ಜಾನಪದ ಪದ್ಧತಿ ಮರುಕಳಿಸುವ ವಿಭಿನ್ನ ಪ್ರಯತ್ನ ಮಾಡಲಾಗಿದೆ. ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ದೇವೇಂದ್ರ ಗೋನಾಳ ಅವರ ಹೊಲದಲ್ಲಿ  'ಜೋಳದ ರಾಶಿ ನರಸಲಗಿ ಹಂತಿ ಹಬ್ಬ ಅರ್ಥಪೂರ್ಣವಾಗಿ ನಡೆಯಿತು.

ವಿಜಯಪುರ ವಸತಿ ಶಾಲೆಯಲ್ಲಿ ಬೆಂಕಿ ಅವಘಡ, ಓರ್ವ ವಿದ್ಯಾರ್ಥಿ ಸ್ಥಿತಿ ಗಂಭೀರ!

ಹಂತಿ ಹಬ್ಬ ಹಿನ್ನೆಲೆ‌ ಎತ್ತುಗಳ ಮೆರವಣಿಗೆ..!

ಸಾಂಪ್ರದಾಯಿಕ ಕೃಷಿ ಪದ್ಧತಿ ಪರಿಚಯಿಸುವುದು ಹಾಗೂ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ದೇವೇಂದ್ರ ಅವರು  'ಹಂತಿ ಹಬ್ಬ' ಆಚರಿಸುತ್ತಾ ಬಂದಿದ್ದಾರೆ. ಹೊಲದಲ್ಲಿ ವಿಶಾಲವಾದ ಕಣ ನಿರ್ಭಿಸಿ, ಮಧ್ಯೆ 'ಮೇಟಿ' ಕಂಬ ಹಾಕುತ್ತಾರೆ. ಹಂತಿ ಆರಂಭಕ್ಕೂ ಮುನ್ನ ಸುಮಾರು 25 ಜೋಡಿ ಎತ್ತುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಹಂತಿ ಸ್ಥಳಕ್ಕೆ ಕರೆತರಲಾಗುತ್ತೆ. ಕಟಾವು ಮಾಡಿ ಗೂಡು ಹಾಕಿದ್ದ ಜೋಳದ ತೆನೆಗಳಿಗೆ, ಹಂತಿ ಮಾಡುವ ಸ್ಥಳಕ್ಕೆ ಹಾಗೂ ಎತ್ತುಗಳಿಗೆ ಪೂಜೆ ಸಲ್ಲಿಸಿ ರೈತರ ಹಂತಿ ಪದಗಳೊಂದಿಗೆ ಹಾಗೂ ಜೋಳದ ತೆನೆ ಮುರಿಯುವ ಮೂಲಕ ಹಂತಿ ಹಬ್ಬಕ್ಕೆ ನಡೆಯುತ್ತದೆ.

ವಿಜಯಪುರ ಬಿಜೆಪಿ ಅಭ್ಯರ್ಥಿ ನಾನೇ, ನನ್ನ ಆಸ್ತಿ ಇನ್ನೂ ಜಾಸ್ತಿ ಇದೆ: ಸಂಸದ ರಮೇಶ ಜಿಗಜಿಣಗಿ

ಕುಪ್ಪಸ ತೊಟ್ಟು ಮಿಂಚಿದ ರೈತ ಮಹಿಳೆಯರು..!

ಹಂತಿ‌‌‌ ಪದ್ದತಿ ನೆನಪಿಸುವ ಹಂತಿ ಹಬ್ಬದಲ್ಲಿ ಯುವಕರು, ಯುವತಿಯರು ಹಳೆ ಕಾಲದ ಪೋಷಾಕಿನಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಹಳೆ ಪದ್ದತಿಯಂತೆ 8 ಎತ್ತುಗಳ ಸಹಾಯದಿಂದ ಜೋಳದ ರಾಶಿ ನಡೆಸಲಾಯಿತು. ರೈತ ಮಹಿಳೆಯರು ಸೀರೆ ಕುಪ್ಪಸ ತೊಟ್ಟು ಮಿಂಚಿದ್ರು, ರೈತರು ಎತ್ತುಗಳಿಗೆ ಸಿಂಗರಿಸಿ, ಸಂಭ್ರಮದಿಂದ ಹಂತಿ ಪದಗಳ ಮೂಲಕ ರಾಶಿ ಮಾಡಿದ್ದು ವಿಶೇಷವಾಗಿತ್ತು.. ನರಸಲಗಿ ಗ್ರಾಮದಲ್ಲಿ ವಿಶಿಷ್ಟವಾಗಿ ಜಾನಪದ ಹಾಡುಗಳು,ಹಂತಿ ಹೊಡೆದಿದ್ದು ಗಮನಸೆಳೆದು ಸಂಭ್ರಮ ಮನೆ ಮಾಡಿತ್ತು.

ಕೃಷಿ ಉಪನ್ಯಾಸ ; ರೈತ, ಕನ್ನಡ ಸಂಘಗಳು ಭಾವಿ..!

ಕೃಷಿಗೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರಗಿತು .ತಾಲ್ಲೂಕು ಅಧ್ಯಕ್ಷ ಬಾಳನಗೌಡ ಪಾಟೀಲ ಸೇರಿದಂತೆ ಗಣ್ಯರು, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರನ್ನು ಹಂತಿ ಹಬ್ಬಕ್ಕೆ ಆಗಮಿಸಿದ್ದರು. ಕೃಷಿಕರು ಯಂತ್ರಗಳ ಬೆನ್ನು ಹತ್ತಿದ್ದರಿಂದ ಕೃಷಿಯಲ್ಲಿನ ಸಾಂಪ್ರದಾಯಿಕ ಪದ್ಧತಿ, ಹಿಂದಿನ ಗತವೈಭವ ಮರೆಯಾಗುತ್ತಿದೆ. ಹಂತಿ ಮೂಲಕ ರಾಶಿ ಮಾಡುವುದರಿಂದ ರೈತರಲ್ಲಿ ಬಾಂಧವ್ಯ ಹೆಚ್ಚುತ್ತದೆ. ಕಷ್ಟ-ಸುಖಗಳನ್ನು ವೇದಿಕೆಯಾಗುತ್ತದೆ.  ಪ್ರತಿ ವರ್ಷ ಹಂತಿ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ ಎಂದು ಆಯೋಜಕ ದೇವೇಂದ್ರ ಗೋನಾಳ ಮಾಹಿತಿ‌ ಹಂಚಿಕೊಂಡಿದ್ದಾರೆ.

click me!