ಹಾನಗಲ್ಲ ನಿರಂತರ ಕುಡಿಯುವ ನೀರು ಯೋಜನೆ ಶೀಘ್ರ ಸಾಕಾರ: ಶಾಸಕ ಶ್ರೀನಿವಾಸ ಮಾನೆ

By Kannadaprabha News  |  First Published Jan 27, 2023, 8:51 AM IST

: ತಾಲೂಕಿನಲ್ಲಿ . 25 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೀಘ್ರ ಹಾನಗಲ್ಲ ನಗರಕ್ಕೆ ನಿರಂತರ ನೀರು ಕುಡಿಯುವ ಯೋಜನೆ ಸಾಕಾರಗೊಳ್ಳಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.


ಹಾನಗಲ್ಲ (ಜ.27) : ತಾಲೂಕಿನಲ್ಲಿ . 25 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೀಘ್ರ ಹಾನಗಲ್ಲ ನಗರಕ್ಕೆ ನಿರಂತರ ನೀರು ಕುಡಿಯುವ ಯೋಜನೆ ಸಾಕಾರಗೊಳ್ಳಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಗುರುವಾರ ತಾಲೂಕು ಕ್ರೀಡಾಂಗಣದಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಸಮರ್ಥ ಸಂವಿಧಾನ ಹೊಂದಿದೆ. ಡಾ. ಬಿ.ಆರ್‌. ಅಂಬೇಡ್ಕರ್‌ ನೀಡಿದ ಸಂವಿಧಾನದಿಂದ ಭಾರತ ಸುಭದ್ರ ಹಾಗೂ ಸಂಘಟಿತ ಪ್ರಜಾಪ್ರಭುತ್ವವಾಗಿದೆ. ಈ ನೆಲದ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿಕೊಂಡು ಮಾನವೀಯ ಮೌಲ್ಯದ ಮೂಲಕ ಸುಭದ್ರ ಭಾರತ ಕಟ್ಟಲು ಯುವ ಸಮದಾಯ ಗಟ್ಟಿಯಾಗಿ ನಿಲ್ಲಬೇಕಿದೆ ಎಂದು ತಿಳಿಸಿದ ಅವರು, ಬಹುದಿನಗಳಿಂದ ಹಾನಗಲ್ಲ ನಗರದ ಶೈಕ್ಷಣಿಕ ಹಿತಕ್ಕೆ ಇರುವ ಸರಕಾರಿ ಕನ್ನಡ ಪೌಢಶಾಲೆ ಮಂಜೂರಾಗಿದ್ದು, ಜೂನ್‌ ತಿಂಗಳಿನಿಂದ ಕಾರ್ಯಾರಂಭ ಮಾಡಲಿದೆ. 13600ಕ್ಕೂ ಅಧಿಕ ಮನೆಗಳನ್ನು ಸಕ್ರಮಗೊಳಿಸಲಾಗಿದೆ. ಒಂದೇ ವರ್ಷದಲ್ಲಿ ಕೊಳಗೇರಿ ಹಾಗೂ ಆಶ್ರಯ ಯೋಜನೆಯಡಿ 2000 ಬಡವರಿಗೆ ಮನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

Tap to resize

Latest Videos

undefined

ಹಾನಗಲ್ಲ ಕುಮಾರ ಶಿವಯೋಗಿ ಜೀವನ ಚರಿತ್ರೆ ಆಧರಿತ ‘ವಿರಾಟಪುರ ವಿರಾಗಿ’; ಬಿ.ಎಸ್‌. ಲಿಂಗದೇವರು ನಿರ್ದೇಶನ

ಅನಿವಾರ್ಯ ಕಾರಣಗಳಿಂದಾಗಿ ಅಲ್ಪಾವಧಿಯಲ್ಲಿ ಶಾಸಕನಾಗಿ ಈ ತಾಲೂಕಿನ ಜನರ ನಿರೀಕ್ಷೆಯಂತೆ ಕೆಲಸ ಮಾಡಿದ್ದೇನೆ ಎಂಬ ಸಮಾಧಾನವಿದೆ. ಇನ್ನೂ ನೆನಗುದಿಗೆ ಬಿದ್ದಿರುವ ಕಾಮಗಾರಿಗಳ ಪೂರ್ಣಗೊಳಿಸಲು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ. ಹಾನಗಲ್ಲ ತಾಲೂಕಿನ ಜನತೆ ನನ್ನ ಮೇಲಿಟ್ಟಭರವಸೆ ಉಳಿಸಿಕೊಂಡು ಕೆಲಸಮಾಡುತ್ತೇನೆ ಎಂದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಲೂಕು ತಹಸೀಲ್ದಾರ್‌ ಪಿ.ಎಸ್‌. ಎರ್ರಿಸ್ವಾಮಿ, ಭಾರತದ ಪ್ರಜಾ ಸರಕಾರ ವಿವಿಧತೆಯಲ್ಲಿ ಏಕತೆ ಸಾಧಿಸಿದ ಪ್ರಪಂಚದ ಅತಿದೊಡ್ಡ ಸಂವಿಧಾನ ಹೊಂದಿದೆ. ಆರ್ಥಿಕ, ಆಹಾರ ಭದ್ರತೆ, ತಂತ್ರಜ್ಞಾನ, ವಿಜ್ಞಾನ, ರಕ್ಷಣಾ ಕ್ಷೇತ್ರದಲ್ಲಿ ಮೇಲ್ಪಂಕ್ತಿಯಲ್ಲಿದ್ದೇವೆ. ಭಾರತೀಯರಾದ ನಾವು ನಮ್ಮ ಹಕ್ಕುಗಳನ್ನು ಪಡೆಯುವ ಮೂಲಕ ಕರ್ತವ್ಯಗಳಿಗೆ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸಲು ಮರೆಯಬಾರದು ಎಂದರು.

ಪುರಸಭೆ ಅಧ್ಯಕ್ಷ ಅನಂತವಿಕಾಸ ನಿಂಗೋಜಿ, ಉಪಾಧ್ಯಕ್ಷೆ ಶಮಶಿಯಾಬಾನು ಬಾಳೂರ, ಸದಸ್ಯರಾದ ಶೋಭಾ ಉಗ್ರಣ್ಣನವರ, ಮಮತಾ ಆರೇಗೊಪ್ಪ, ಸಂತೋಷ ಸುಣಗಾರ, ಮುಖಂಡರಾದ ಗುರುರಾಜ ನಿಂಗೋಜಿ, ರವೀಂದ್ರ ದೇಶಪಾಂಡೆ, ಸಿಪಿಐ ಶಿವಶಂಕರ ಗಣಾಚಾರಿ, ಇಓ ಬಿ. ಸುನೀಲಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಎನ್‌. ಹುರಳಿ, ಬಿಸಿಎಂ ಅಧಿಕಾರಿ ಎಸ್‌. ಆನಂದ ಮೊದಲಾದವರು ಈ ಸಂದರ್ಭದಲ್ಲಿದ್ದರು.

ಆಕ್ಸ್‌ಫರ್ಡ್‌ ಪ್ರಾಥಮಿಕ ಶಾಲೆ, ದಯಾನಂದ ವಿದ್ಯಾ ಭಾರತಿ ಪ್ರೌಢಶಾಲೆ, ಎನ್‌ಸಿಜೆಸಿ ಪ್ರೌಢಶಾಲೆ, ರೋಶನಿ ಪ್ರೌಢಶಾಲೆ, ಡಾ. ಬಿ.ಆರ್‌. ಅಂಬೇಡ್ಕರ್‌ ವಸತಿ ಶಾಲೆ, ಸರಕಾರಿ ಉರ್ದು ಪ್ರಾಥಮಿಕ ಶಾಲೆ, ಸರಕಾರಿ ಶಾಸಕರ ಮಾದರಿ ಶಾಲೆ, ಜನತಾ ಬಾಲಿಕಿಯರ ಪ್ರೌಢಶಾಲೆ, ಎನ್‌ಸಿಜೆಸಿ ಪ.ಪೂ ಕಾಲೇಜು, ಕುಮಾರೇಶ್ವರ ಪ.ಪೂ ಕಾಲೇಜು, ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಂದ ನಡೆದ ರೂಪಕ ಹಾಗೂ ನೃತ್ಯಗಳು ಜನಮನಸೂರೆಗೊಂಡವು. ಸಿಆರ್‌ಪಿ ಶ್ರೀನಿವಾಸ ದೀಕ್ಷಿತ ಅವರು ಕಾರ್ಯಕ್ರಮ ನಿರ್ವಹಿಸಿದರು.

ಹಾನಗಲ್ಲ ಬಗ್ಗೆ ಸರ್ಕಾರದ ಮಲತಾಯಿ ಧೋರಣೆ; ಶಾಸಕ ಮಾನೆ ಅಸಮಾಧಾನ

ಇದೇ ಸಂದರ್ಭದಲ್ಲಿ ಎಸ್‌ಎಲ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಿ ಗೌರವಿಸಲಾಯಿತು. ಇದರೊಂದಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

click me!