ಗ್ರಾಮ ಒನ್ ಐಡಿಗಳನ್ನು ಪಂಚಾಯಿತಿಗೆ 1-2 ನೀಡಿದ್ದು, ಕರ್ನಾಟಕ ಒನ್ ಐಡಿಗಳನ್ನು ತಾಲೂಕಿಗೆ 1-2 ಮಾತ್ರ ನೀಡುವ ಮಾಹಿತಿ ಬಂದಿದೆ ಡಿಜಿಟಲ್ ಸೇವಾ ಕೇಂದ್ರಗಳ ಸಮಸ್ಯೆ ಬಗೆಹರಿಸಿ. ಡಿಜಿಟಲ್ ಸೇವಾ ಕೇಂದ್ರಗಳ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಮನವಿ
ಹಾನಗಲ್ಲ (ಸೆ.3): ತಾಲೂಕು ಡಿಜಿಟಲ್ ಸೇವಾ ಕೇಂದ್ರಗಳ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಘದ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಶುಕ್ರವಾರ ಸಂಘದ ಸದಸ್ಯರು ಹಾವೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ನಾವು ಹಲವಾರು ವರ್ಷಗಳಿಂದ ಸಿಎಸ್‌ಸಿ ಡಿಜಿಟಲ್ ಸೇವಾ ಕೇಂದ್ರಗಳ ಸೇವಾಸಿಂಧು ಸವೀರ್‍ಸ್ ಪ್ಲಸ್ ಮುಖಾಂತರ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿದ್ದೇವೆ. ಆದರೆ ಕಳೆದ ಡಿಸೆಂಬರ್‌ನಲ್ಲಿ ನಮಗೆ ಯಾವುದೇ ಮಾಹಿತಿ ನೀಡದೆ ಸಿಎಸ್‌ಸಿ ಸೇವಾಸಿಂಧು ಐಡಿಗಳನ್ನು ನಿಷ್ಕಿ್ರಯಗೊಳಿಸಲಾಗಿದೆ. ಆನಂತರ ನಾವು ಸೇವಾಸಿಂಧು ಸಿಟಿಜನ್ ಲಾಗಿನ್ ಮುಖಾಂತರ ಸಾರ್ವಜನಿಕರಿಗೆ ಸೇವೆ ನೀಡುತ್ತ ಬಂದಿದ್ದೇವೆ. ಆದರೆ ಸೇವಾಸಿಂಧು ಸಿಟಿಜನ್ ಲಾಗಿನ್‌ನಲ್ಲಿಯೂ ವಿವಿಧ ಸೇವೆಗಳನ್ನು ಕಡಿತಗೊಳಿಸಿ ಕೇವಲ ಕರ್ನಾಟಕ ಒನ್, ಗ್ರಾಮ ಒನ್‌ಗಳಿಗೆ ಮಾತ್ರ ನೀಡಲಾಗಿದೆ. ಹಾನಗಲ್ಲ ನಗರದಲ್ಲಿ ಇಲ್ಲಿಯವರೆಗೂ ಒಂದೆ ಒಂದು ಕರ್ನಾಟಕ ವನ್ ಸೆಂಟರ್ ಸ್ಥಾಪನೆಯಾಗಿಲ್ಲ. ಇದರಿಂದಾಗಿ ನಾವು ಯಾವುದೇ ಕೆಲಸವಿಲ್ಲದೆ ಅಂಗಡಿಯಲ್ಲಿ ಖಾಲಿ ಕುಳಿತು ಇಂಟರ್‌ನೆಟ್ ಬಿಲ್, ಅಂಗಡಿ ಬಾಡಿಗೆ ಕೊಡುವ ಆರ್ಥಿಕ ಸಂಕಷ್ಟಎದುರಾಗಿದೆ. ಆದ್ದರಿಂದ ನಮ್ಮ ಸಮಸ್ಯೆಗೆ ತುರ್ತು ಪರಿಹಾರ ನೀಡಬೇಕು ಎಂದು ಕೋರಿದರು.
undefined
Grama One Project: ಗ್ರಾಮ ಒನ್‌ನಲ್ಲೇ ಪಡಿತರ ಕಾರ್ಡ್ ವಿತರಣೆ: ಸಿಎಂ ಬೊಮ್ಮಾಯಿ
ಸಮಸ್ಯೆಗಳೇನು?
ಗ್ರಾಮ ಒನ್ ಐಡಿಗಳನ್ನು ಪಂಚಾಯಿತಿಗೆ 1-2 ನೀಡಿದ್ದು, ಕರ್ನಾಟಕ ಒನ್ ಐಡಿಗಳನ್ನು ತಾಲೂಕಿಗೆ 1-2 ಮಾತ್ರ ನೀಡುವ ಮಾಹಿತಿ ಬಂದಿದೆ. ಎಲ್ಲರಿಗೂ ಐಡಿಗಳನ್ನು ನೀಡದೆ ಒಂದಿಬ್ಬರಿಗೆ ಕೊಟ್ಟು ಖಾಸಗಿ ಕಂಪನಿಗಳು ಏಕಸ್ವಾಮ್ಯವನ್ನು ಸ್ಥಾಪಿಸ ಹೊರಟಿವೆ. ವಿವಿಧ ಯೋಜನೆಗಳ ಅರ್ಜಿಗಳಿಗೆ ಬಳಸುವ ಬಯೋಮೆಟ್ರಿಕ್ ಡಿವೈಸ್‌ಗಳನ್ನು ಪದೇ ಪದೇ ಬದಲಾಯಿಸುತ್ತಿರುವುದು ಸೆಕ್ಯುಜೆನ್, ಸ್ಪಾರ್ಟೆಕ್, ಮಂತ್ರ, ಮಾಫೆäರ್ ಮುಂತಾದ ಡಿವೈಸ್‌ಗಳಿಗೆ .4-5 ಸಾವಿರ ಕೊಟ್ಟು ತಂದು ಸೇವೆ ನೀಡುವ ಹೊತ್ತಿಗೆ ಆ ಡಿವೈಸ್‌ಗಳನ್ನು ಬದಲಾಯಿಸಿ ಬಿಟ್ಟಾಗ ನಾವು ಡಿವೈಸ್‌ಗಳಿಗೆ ಖರ್ಚು ಮಾಡಿದ ಹಣ ಸಹ ಕಳೆದುಕೊಂಡು ಬಿಟ್ಟಿದ್ದೇವೆ ಎಂದು ವಿವರಿಸಿದ್ದಾರೆ.
ವಿವಿಧ ಇಲಾಖೆಗಳ ಆನ್‌ಲೈನ್ ಅಪ್ಲಿಕೇಶನ್ ಹಾಕುವಾಗ ಇಲಾಖೆಗಳ ಸಾಫ್‌್ಟವೇರ್‌ಗಳ ಸಮರ್ಪಕ ನಿರ್ವಹಣೆ ಕೊರತೆಯಿಂದ ಸಮಸ್ಯೆ ಉಂಟಾಗುತ್ತಿದೆ. ಸುತ್ತಮುತ್ತಲಿನ ಹಳ್ಳಿಗಳ ಜನರು ಇಡೀ ದಿನ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ನಮ್ಮ ಆದಾಯಕ್ಕೂ ಹೊಡೆತ ಬಿದ್ದಂತಾಗಿದೆ. ಆದ್ದರಿಂದ ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಸಂಘದ ಗೌರವಾಧ್ಯಕ್ಷ ಪ್ರಶಾಂತ ಮುಚ್ಚಂಡಿ, ಅಧ್ಯಕ್ಷ ಮಹೇಶ ದಾಮೋದರ, ಉಪಾಧ್ಯಕ್ಷ ಇರ್ಫಾನ್ ನಾಗರೊಳ್ಳಿ, ಕಾರ್ಯದರ್ಶಿ ಮಾಲತೇಶ ವಾಲ್ಮೀಕಿ, ಸದಸ್ಯರಾದ ರಾಜೇಶ ಬ್ಯಾಡಗಿ, ಮಾಲತೇಶ ದೇಸಾಯಿ, ತನ್ವೀರ ಉಪ್ಪಿನ, ಸಿಕಂದರ ಕರಗುದರಿ, ಜಗದೀಶ ಕಮ್ಮಾರ, ಅಬ್ದುಲ್‌ಲತೀಫ ಬಾಲೂರ, ಮಂಜುನಾಥ ಜನಗೇರಿ, ಎನ್.ಕೆ. ಚನ್ನಬಸನಗೌಡ, ಶಿವಕುಮಾರ ಹಳ್ಳಕ್ಕನವರ, ಬಿ.ಎ. ಚನ್ನಬಸಪ್ಪ, ಅರುಣ ಲಕ್ಕೊಳ್ಳಿ, ಸಂಜೀವ ಹೊಸಮನಿ, ಮಂಜುನಾಥ ಟಾಕಣ್ಣನವರ, ಸಂತೋಷ, ವಿಜಯ ಕಲಾಲ, ಪರಮೇಶ ಪೂಜಾರ ಮೊದಲಾದವರು ಈ ಸಂದರ್ಭದಲ್ಲಿದ್ದರು.