ಪಿಡಿಓ ಮತ್ತು ಅಧ್ಯಕ್ಷರೊಡಗೂಡಿ ಎಲ್ಲ ಅನುದಾನ ಎತ್ತುವಳಿ ಮಾಡಿದ್ದಾರೆ. ಇದರಲ್ಲಿ ತಾ.ಪಂ. ಅಧಿಕಾರಿ, ನರೇಗಾ ಸಹಾಯಕ ನಿರ್ದೇಶಕ, ಜೆಇಇಗಳು ಶಾಮೀಲಾಗಿದ್ದಾರೆ. ಕೂಡಲೇ ಬಗ್ಗೆ ಲೋಕಾಯುಕ್ತರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸುರಪುರ(ಸೆ.03): ಕುಡಿವ ನೀರು, ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡು ಸೊಳ್ಳೆ ಹಾವಳಿ ತಪ್ಪಿಸುವುದು ಸೇರಿದಂತೆ ವಿವಿಧ ಮೂಲ ಸೌಲಭ್ಯಗಳಿಗೆ ಆಗ್ರಹಿಸಿ ಗ್ರಾಮ ಪಂಚಾಯ್ತಿ ಸದಸ್ಯರೇ ಪಂಚಾಯ್ತಿ ಕಚೇರಿಗೆ ಬೀಜ ಜಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಶುಕ್ರವಾರ ಈ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಕಳೆದ ಆರು ವರ್ಷಗಳಿಂದ ತಿಂಥಣಿ ಗ್ರಾಪಂ ವ್ಯಾಪ್ತಿಯ ತಿಂಥಣಿ, ದಾದಲಾಪುರ, ಬಂಡೊಳ್ಳಿ, ಶಾಂತಪುರ, ಹುಣಸಿಹೊಳೆ, ಲಿಂಗದಳ್ಳಿ (ಎಸ್‌ಕೆ) ಒಟ್ಟು ಆರು ಗ್ರಾಮಗಳಿಗೆ ಮೂಲಸೌಲಭ್ಯ ಎನ್ನುವುದು ಕನಸಿನ ಮಾತಾಗಿದೆ ಎಂದು ದೂರಿದ ಗ್ರಾಮ ಪಂಚಾಯ್ತಿ ಸದಸ್ಯ ಭೈರಣ್ಣ ಡಿ ಅಂಬಿಗೇರ, ಕಳೆದೆರಡು ವರ್ಷಗಳಿಂದ ನಾವು ಸದಸ್ಯರಾಗಿ ನೆಪಕ್ಕೆ ಮಾತ್ರ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದೇವೆ. ಗ್ರಾಮಸ್ಥರಿಗೆ ನಾವು ಮೂಲಸೌಕರ್ಯ ಒದಗಿಸಿಕೊಡಲು ಆಗುತ್ತಿಲ್ಲ ಎನ್ನುವ ಕೊರಗು ಕಾಡುತ್ತಿದೆ. ಪಿಡಿಓ ರಾಜಕುಮಾರ ಸುಬೇದಾರ ನಡೆಯಿಂದ ಬೇಸತ್ತು ಗ್ರಾ.ಪಂ.ಗೆ ಬೀಗ ಜಡಿಯಲಾಗಿದೆ ಎಂದು ಆಕ್ರೋ ಶ ವ್ಯಕ್ತಪಡಿಸಿದರು.
undefined
FRAUD CASE: 3.56 ಲಕ್ಷಕ್ಕೆ ಸರ್ಕಾರಿ ಪ್ಲಾಟ್ ಪಡೆದು 20 ಲಕ್ಷಕ್ಕೆ ಮಾರಾಟ?
ಆರು ಗ್ರಾಮಗಳಲ್ಲಿ ಸಮರ್ಪಕ ಕುಡಿಯುವ ನೀರಿಲ್ಲ. ಚರಂಡಿಗಳಂತೂ ಇಲ್ಲದೆ ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿದೆ. ಚರಂಡಿ ಇರುವ ಕಡೆ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ ಎಂದು ದೂರಿದರು. ರಾತ್ರಿ ಹೊತ್ತಿನಲ್ಲಿ ಬೀದಿ ದೀಪಗಳು ಬೆಳಗುವುದಿಲ್ಲ. ಇತ್ತೀಚೆಗೆ ಕೆಲ ಗ್ರಾಮಗಳಿಗೆ ಬಲ್ಬ್ ಮಾತ್ರ ಹಾಕಿದ್ದಾರೆ. ಯಾವ ಅನುದಾನದಲ್ಲಿ ಹಾಕಲಾಗಿದೆ ಎಂಬುದು ಸದಸ್ಯರಿಗೆ ಗೊತ್ತಿಲ್ಲ. ಪಿಡಿಓ ಮತ್ತು ಅಧ್ಯಕ್ಷರೊಡಗೂಡಿ ಎಲ್ಲ ಅನುದಾನ ಎತ್ತುವಳಿ ಮಾಡಿದ್ದಾರೆ. ಇದರಲ್ಲಿ ತಾ.ಪಂ. ಅಧಿಕಾರಿ, ನರೇಗಾ ಸಹಾಯಕ ನಿರ್ದೇಶಕ, ಜೆಇಇಗಳು ಶಾಮೀಲಾಗಿದ್ದಾರೆ. ಕೂಡಲೇ ಬಗ್ಗೆ ಲೋಕಾಯುಕ್ತರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಗ್ರಾ.ಪಂ. ಸದಸ್ಯ ಶರಣು ಶಾಂತಪುರ ಮಾತನಾಡಿ, ಪಿಡಿಒ ರಾಜಕುಮಾರ ಎರಡ್ಮೂರು ಗ್ರಾ.ಪಂ.ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾ.ಪಂ.ಗೆ ಬರುವುದೇ ಇಲ್ಲ. ಹಣ ಬರುವಂತ ಕಡತಗಳಿಗೆ ಸಹಿ ಮಾಡುವುದಿದ್ದರೆ ಮಾತ್ರ ಬರುತ್ತಾರೆ. ಈಗಾಗಲೇ ಗ್ರಾಪಂನಲ್ಲಿ ಅನುದಾನ ಎತ್ತುವಳಿ ಮಾಡಿರುವ, ಕೆಲಸವೇ ಮಾಡದೇ ಖೊಟ್ಟಿದಾಖಲಾತಿ ತಯಾರಿಸಿ ಸರಕಾರದ ಲಪಟಾಯಿಸಿರುವ ಪಿಡಿಒ ರಾಜುಕುಮಾರ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ತಾ.ಪಂ. ಮಾಜಿ ಸದಸ್ಯ ಮಲ್ಲಿಕಾರ್ಜುನ ಸಾಹುಕಾರ ಮಾತನಾಡಿ, ಸ್ಥಳಕ್ಕೆ ತಾಪಂ ಅಧಿಕಾರಿ ಚಂದ್ರಶೇರ ಪವಾರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಗ್ರಾಪಂ ಸದಸ್ಯರಿಗೆ ಬೆದರಿಸುವಂತಹ ಕೆಲಸವನ್ನು ಮಾಡಿದ್ದಾರೆ. ಪ್ರತಿಭಟನಾಕಾರರ ಸಮಸ್ಯೆ ಆಲಿಸುವುದನ್ನು ಬಿಟ್ಟು ನಿಮಿಗೆ ಪ್ರತಿಭಟನೆ ಮಾಡಲು ಹೇಳಿದವರು ಯಾರು? ಯಾರನ್ನು ಕೇಳಿಗೆ ಪಂಚಾಯತ್‌ಗೆ ಬೀಗ ಜಡಿದಿದ್ದೀರಾ? ಸುಮ್ಮನೆ ನಿಮ್ಮ ಮೇಲೆ ಕೇಸ್ ಆಗುತ್ತವೆ ಎನ್ನುವ ಮೂಲಕ ಸದಸ್ಯರು ಹಾಗೂ ಪ್ರತಿಭಟನಾಕಾರರನ್ನು ಮನೋಸ್ಥೆತ್ರೖರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ. ಇಂಥವರ ವಿರುದ್ಧ ಜಿಲ್ಲಾಡಳಿತ ಮತ್ತು ಸಿಇಓ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುರಪುರದಲ್ಲಿ ಗಣೇಶನಿಗೆ ಹೆಚ್ಚಿದ ಬೇಡಿಕೆ ; ತಗ್ಗಿದ ಪೂರೈಕೆ
ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ ಬೇವಿನಾಳ, ಬಸಮ್ಮ ಯಂಕಪ್ಪ, ದವಲಬಿ ಖಾಜಾಸಾಬ್, ರಂಜಾನ್‌ಬಿ ಸಲೀಂಸಾಬ್, ಶರಣು ಶಾಂತಪುರ, ಗುರು ಎಂ ಸಾಹುಕಾರ, ಗ್ರಾಮಸ್ಥರಾದ ಸಲೀಂಸಾಬ್ ಕಂಬಾರ, ಬಾಬು ಹವಲ್ದಾರ್, ಮಾರುತಿ ಬೂದಗುಂಪಿ, ಭೀಮು ರಾಗೇರಿ, ರಂಗಪ್ಪ ಕಟ್ಟಿಮನಿ, ಅಮರಪ್ಪ ಗೋಡಿಕಾರ್, ಮಾನಪ್ಪ ಹೊಸಪೇಟ್, ನಾಗಪ್ಪ ಅಂಗಡಿ, ಮಾದೇಶ್ ಐದುಬಾವಿ, ಅಂಬ್ರೇಶ್ ಅಂಗಡಿ, ಸಿದ್ದಣ್ಣ ಹುಣಸಿಹೊಳೆ, ಭೀಮಾಶಂಕರ ಮಡಿವಾಳ, ದೊಡ್ಡಯ್ಯ ಸ್ವಾಮಿ, ಐಯ್ಯಾಳಪ್ಪ ಕುರಕುಂದಿ, ಚಂದ್ರಶೇಖರ ಹುಣಸಿಹೊಳೆ, ತಿರುಪತಿ ನಾಯಕ, ಅರ್ಜುನ ಅಂಬಿಗೇರ ಸೇರಿದಂತೆ ಇತರರಿದ್ದರು.
ಅಧಿಕಾರಿಗಳು ಕಾಟಾಚಾರಕ್ಕೆ ಭೇಟಿ ನೀಡಿ ಹೋಗಿದ್ದಾರೆ. ತಾಪಂ ಮ್ಯಾನೇಜರ್, ನರೇಗಾ ಸಹಾಯಕ ನಿರ್ದೇಶಕ, ಪಿಡಿಒ ಬಂದರೂ ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ತಾಪಂ ಮ್ಯಾನೇಜರ್ ಕುಳಿತುಕೊಂಡು ಬಗೆಹರಿಸಿಕೊಳ್ಳೋಣ ಎಂದರೆ, ಪಿಡಿಓ ನಾನೇನು ಜವಾಬ್ದಾರಿ ತೆಗೆದುಕೊಳ್ಳಬೇಕು ಎನ್ನುತ್ತಾರೆ. ಇಂಥವರಿಂದ ಅಭಿವೃದ್ಧಿ ಮತ್ತು ನ್ಯಾಯ ನಿರಿಕ್ಷಿಸಲು ಸಾಧ್ಯವಿಲ್ಲ. ಸಿಇಒ ಅವರೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಲಿಖಿತವಾಗಿ ಬರೆದುಕೊಡಬೇಕು ಅಂತ ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಬೇವಿನಾಳ ತಿಳಿಸಿದ್ದಾರೆ.