ಛಾಯಾಗ್ರಾಹಕರಿಗೆ ಹಂಪಿ ನೆಚ್ಚಿನ ತಾಣ: ಪವರ್‌ ಸ್ಟಾರ್‌ ಪುನೀತ್‌ಗೂ ಇಷ್ಟದ ಸ್ಥಳ

By Kannadaprabha News  |  First Published Aug 20, 2023, 6:01 PM IST

ವಿಶ್ವ ಪರಂಪರೆ ತಾಣ ಹಂಪಿ ಬರೀ ದೇಶ-ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿಲ್ಲ. ಛಾಯಾಚಿತ್ರದ ಹವ್ಯಾಸ ಹೊಂದಿರುವ ಛಾಯಾಗ್ರಾಹಕರನ್ನು ಸೆಳೆಯುತ್ತಿದೆ. ಹಂಪಿ ಈಗ ಹವ್ಯಾಸಿ ಛಾಯಾಗ್ರಾಹಕರ ಅಚ್ಚುಮೆಚ್ಚಿನ ತಾಣವೂ ಆಗಿದೆ.


ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ಆ.20): ವಿಶ್ವ ಪರಂಪರೆ ತಾಣ ಹಂಪಿ ಬರೀ ದೇಶ-ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿಲ್ಲ. ಛಾಯಾಚಿತ್ರದ ಹವ್ಯಾಸ ಹೊಂದಿರುವ ಛಾಯಾಗ್ರಾಹಕರನ್ನು ಸೆಳೆಯುತ್ತಿದೆ. ಹಂಪಿ ಈಗ ಹವ್ಯಾಸಿ ಛಾಯಾಗ್ರಾಹಕರ ಅಚ್ಚುಮೆಚ್ಚಿನ ತಾಣವೂ ಆಗಿದೆ. ನೈಜ ಫೋಟೋಗ್ರಾಫಿಗಾಗಿ ದೇಶ-ವಿದೇಶದಿಂದ ಛಾಯಾಗ್ರಾಹಕರು ಆಗಮಿಸಿ ಹಂಪಿಯ ಫೋಟೋಗಳನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಹಂಪಿ ಶಿಲ್ಪಕಲೆ, ಸ್ಮಾರಕಗಳ ಸೊಬಗು, ವಾಸ್ತುಶಿಲ್ಪ ಪ್ರಪಂಚ, ಸಂಸ್ಕೃತಿ, ಪರಂಪರೆಯನ್ನು ವಿಶ್ವಕ್ಕೆ ಪ್ರಚುರಪಡಿಸಲು ಛಾಯಾಚಿತ್ರಗಾರರು ಹಂಪಿಯತ್ತ ಧಾವಿಸುತ್ತಿದ್ದಾರೆ.

Tap to resize

Latest Videos

undefined

ಕ್ಯಾಮೆರಾ ಕಣ್ಣಲ್ಲಿ ..: ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯ, ಎದುರು ಬಸವಣ್ಣ, ಹೇಮಕೂಟ, ಕೃಷ್ಣ ದೇಗುಲ, ಕಮಲ ಮಹಲ್‌, ಹಜಾರರಾಮ ದೇವಾಲಯ, ಗಜಶಾಲೆ, ಮಹಾನವಮಿ ದಿಬ್ಬ, ಪುಷ್ಕರಣಿ, ರಾಣಿಸ್ನಾನ ಗೃಹ, ಚಕ್ರತೀರ್ಥ, ತುಂಗಭದ್ರಾ ನದಿತೀರ ಪ್ರದೇಶಗಳು ಫೋಟೋಗ್ರಾಫಿಗೆ ನೆಚ್ಚಿನ ತಾಣಗಳಾಗಿವೆ.

ಮಹದಾಯಿ ವಿಷಯದಲ್ಲಿ ರಾಜಕೀಯ ಮಾಡಿಲ್ಲ: ಪ್ರಲ್ಹಾದ್‌ ಜೋಶಿ

ವನ್ಯಜೀವಿ ತಾಣ: ಐತಿಹಾಸಿಕ ಹಂಪಿ ಶಿಲ್ಪಕಲಾ ವೈಭವಕ್ಕೆ ಮಾತ್ರ ಫೇಮಸ್‌ ಆಗಿಲ್ಲ, ಜೀವ ವೈವಿಧ್ಯತೆಗಳ ಬೀಡಾಗಿದೆ. ವಿಶಾಲವಾದ ಕುರಚಲ ಕಾಡು ಪ್ರದೇಶ, ಕರಡಿ, ಚಿರತೆ ಸೇರಿದಂತೆ ಹಲವು ಪ್ರಾಣಿ-ಪಕ್ಷಿಗಳಿಗೆ ಆವಾಸ ಸ್ಥಾನವಾಗಿದೆ. ಆಮೆ, ನವಿಲು, ಹಾವು, ಚೇಳು, ಕ್ರಿಮಿಕೀಟಗಳು, ನಾನಾ ಜಾತಿಯ ಪಕ್ಷಿಗಳು ಹಂಪಿ ಪ್ರದೇಶದಲ್ಲಿವೆ.

ಪ್ರಖ್ಯಾತರು ಕ್ಯಾಮೆರಾ ಹಿಡಿದ ತಾಣ: ಮೈಸೂರು ಮಹಾರಾಜ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರು, ಸಂಡೂರು ರಾಜಮನೆತನದ ಎಂ.ವೈ. ಘೋರ್ಪಡೆ, ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಸೇರಿದಂತೆ ಹಂಪಿ ಪರಿಸರದಲ್ಲಿ ಹಲವರು ಛಾಯಾಚಿತ್ರ ಸೆರೆ ಹಿಡಿದಿದ್ದಾರೆ. ಕ್ರಿಕೆಟಿಗ ಅನಿಲ್‌ ಕುಂಬ್ಳೆ, ಮೈಸೂರು ಮಹಾರಾಜ ಯದುವೀರ್‌ ಸೇರಿದಂತೆ ಹಲವರು ಹಂಪಿ ಪರಿಸರದಲ್ಲಿ ಕ್ಯಾಮೆರಾ ಕೈಗೆತ್ತಿಕೊಂಡು ತಿರುಗಾಡಿದ್ದಾರೆ.

ಪವರ್‌ ಸ್ಟಾರ್‌ಗೂ ಇಷ್ಟದ ತಾಣ: ನಟ ಪುನೀತ್‌ ರಾಜಕುಮಾರ್‌ ಅಭಿನಯಿಸಿದ ಕೊನೆಯ ಚಿತ್ರ ಗಂಧದ ಗುಡಿಯ ಕೆಲವು ದೃಶ್ಯಗಳನ್ನು ಹಂಪಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಹಂಪಿ ಪರಿಸರದಲ್ಲಿ ಪುನೀತ್‌ ರಾಜಕುಮಾರ್‌ ಓಡಾಡಿದ್ದಾರೆ. ಇಂಗ್ಲಿಷ್‌, ಹಿಂದಿ, ತೆಲುಗು ಹಾಗೂ ಕನ್ನಡ ಚಿತ್ರಗಳು ಹಂಪಿಯಲ್ಲಿ ಚಿತ್ರೀಕರಣಗೊಂಡಿವೆ. ಹಂಪಿ ಪ್ರದೇಶದಲ್ಲಿ ವೈದ್ಯರು ಹಾಗೂ ಟೆಕ್ಕಿಗಳು ಕೂಡ ಬೆಳೆಬಾಳುವ ಕ್ಯಾಮೆರಾಗಳನ್ನು ಹೆಗಲಿಗೇರಿಸಿಕೊಂಡು ಫೋಟೋಗ್ರಾಫಿ ಮಾಡುವ ಖಯಾಲಿಗೆ ಇಳಿದಿದ್ದಾರೆ. ಹಂಪಿಯ ಬೆಟ್ಟಗುಡ್ಡ, ತುಂಗಭದ್ರಾ ನದಿ, ಸ್ಮಾರಕ, ಪ್ರಕೃತಿ ಛಾಯಾಚಿತ್ರಗಳು, ಚಿರತೆ, ಕರಡಿ, ನವಿಲು, ನಕ್ಷತ್ರ ಆಮೆ, ನೀರುನಾಯಿ ಸೇರಿದಂತೆ ನಾನಾ ಜಾತಿಯ ಪಕ್ಷಿ, ಪ್ರಾಣಿ ಸಂಕುಲಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯುತ್ತಿದ್ದಾರೆ.

ಕೊಡಗು-ಮೈಸೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ನಾನೇ: ಪ್ರತಾಪ್ ಸಿಂಹ

ಹಂಪಿ ಪ್ರದೇಶದಲ್ಲಿ ಫೋಟೋಗ್ರಾಫರ್‌ಗಳಿಗೆ ಬೆಳೆಯಲು ವಿಪುಲ ಅವಕಾಶ ಇದೆ. ಪ್ರವಾಸೋದ್ಯಮ ಇಲಾಖೆ ಫೋಟೋಗ್ರಾಫರ್‌ಗಳಿಗೆ ತರಬೇತಿ ನೀಡಿ, ಫೋಟೋಗ್ರಫಿ ಗೈಡ್‌ಗಳನ್ನಾಗಿ ರೂಪಿಸಬೇಕು. ಇದರಿಂದ ಪ್ರವಾಸೋದ್ಯಮ ಕೂಡ ಬೆಳೆಯಲಿದೆ. ಯುವಕರಲ್ಲಿ ಆಸಕ್ತಿ ಬೆಳೆಸುವ ಕಾರ್ಯವನ್ನು ಇಲಾಖೆ ಮಾಡಬೇಕಿದೆ.
-ಡಾ. ಸಮದ್‌ ಕೊಟ್ಟೂರು, ವನ್ಯಜೀವಿ ಛಾಯಾಚಿತ್ರಗಾರ ಹೊಸಪೇಟೆ

click me!