ಹಂಪಿ ಬೈ ನೈಟ್‌ ಯೋಜನೆಗೆ ಮರುಜೀವ

By Kannadaprabha News  |  First Published Jul 26, 2021, 1:27 PM IST

* ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ
* ಹಂಪಿ ಬೈ ನೈಟ್‌ ಪ್ರಾಯೋಗಿಕ ಕಾರ್ಯಕ್ರಮ 
*  ಕೋವಿಡ್‌ ಹಿನ್ನೆಲೆ ಕಾರ್ಯಕ್ರಮದ ಸಾಕಾರ ವಿಳಂಬ 


ಹೊಸಪೇಟೆ(ಜು.26): ವಿಶ್ವ ಪರಂಪರೆ ತಾಣ ಪ್ರವಾಸೋದ್ಯಮ ಅಭಿವೃದ್ಧಿಗೆ ರೂಪಿಸಿರುವ ‘ಹಂಪಿ ಬೈ ನೈಟ್‌’ ಯೋಜನೆ ಸಾಕಾರಕ್ಕೆ ಮರುಜೀವ ಬಂದಿದ್ದು, ಹಂಪಿಯಲ್ಲಿ ಭಾನುವಾರ ರಾತ್ರಿ ಪ್ರಾಯೋಗಿಕವಾಗಿ ಕಾರ್ಯಕ್ರಮ ನಡೆಸಲಾಯಿತು.

ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರ ನೇತೃತ್ವದಲ್ಲಿ ಹಂಪಿ ಬೈ ನೈಟ್‌ ಪ್ರಾಯೋಗಿಕ ಕಾರ್ಯಕ್ರಮ ನಡೆಯಿತು. ಎದುರು ಬಸವಣ್ಣ ಮಂಟಪದ ಬಳಿ ವಾಲಿ ಸುಗ್ರೀವ ಕಥಾ ಹಂದರವುಳ್ಳ ಕಾರ್ಯಕ್ರಮ ವಿದ್ಯುದೀಪಾಲಂಕಾರದಲ್ಲಿ ಪ್ರಸ್ತುತಪಡಿಸಲಾಯಿತು.

Latest Videos

undefined

ತಣ್ಣನೆ ಗಾಳಿ, ಜಿಟಿಜಿಟಿ ಮಳೆ: ಮೈಮರೆಸುವಂತಿದೆ ಹಂಪಿ ಸೌಂದರ್ಯ

ಹಂಪಿ ಬೈನೈಟ್‌ ಕಾರ್ಯಕ್ರಮದ ಮೂಲಕ ಹಂಪಿಗೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಇಲಾಖೆಗಳು ಜಂಟಿಯಾಗಿ ಈ ವಿನೂತನ ಕಾರ್ಯಕ್ರಮ ರೂಪಿಸಿದ್ದು, ಕೋವಿಡ್‌ ಹಿನ್ನೆಲೆ ಕಾರ್ಯಕ್ರಮದ ಸಾಕಾರ ವಿಳಂಬವಾಗಿತ್ತು. ಈಗ ಪ್ರಾಯೋಗಿಕವಾಗಿ ಕಾರ್ಯಕ್ರಮದ ವೀಕ್ಷಣೆ ಬಳಿಕ ಕೊಪ್ಪಳ ಹಾಗೂ ಬಳ್ಳಾರಿ- ವಿಜಯನಗರ ಜಿಲ್ಲಾಧಿಕಾರಿಗಳು ಟಿಕೆಟ್‌ ದರ ನಿಗದಿಪಡಿಸಲಿದ್ದಾರೆ. ಬಳಿಕ ಸರ್ಕಾರ ಅಧಿಕೃತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ. ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ, ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ಸೇರಿದಂತೆ ಅಧಿಕಾರಿಗಳು ಇದ್ದರು.
 

click me!