Namma Metro: ವಾಟ್ಸ್‌ ಆ್ಯಪ್‌, ಕ್ಯೂಆರ್‌ ಕೋಡ್‌ನಲ್ಲಿ ಒಮ್ಮೆಗೆ 6 ಮೆಟ್ರೋ ಟಿಕೆಟ್‌ ಖರೀದಿ

By Govindaraj SFirst Published Jan 8, 2023, 8:19 AM IST
Highlights

ವಾಟ್ಸ್‌ಆ್ಯಪ್‌, ಕ್ಯೂಆರ್‌ ಕೋಡ್‌ ಟಿಕೆಟ್‌ ವ್ಯವಸ್ಥೆಯಿಂದ ಕಳೆದೆರಡು ತಿಂಗಳಲ್ಲಿ .2 ಕೋಟಿಗೂ ಹೆಚ್ಚಿನ ಆದಾಯ ಗಳಿಸಿರುವ ಹಿನ್ನೆಲೆಯಲ್ಲಿ ‘ನಮ್ಮ ಮೆಟ್ರೋ’, ಇನ್ನೊಂದು ತಿಂಗಳಲ್ಲಿ ಏಕ ಕಾಲಕ್ಕೆ ಆರು ಜನರಿಗೆ ಟಿಕೆಟ್‌ ಪಡೆಯುವ ವ್ಯವಸ್ಥೆ ಜಾರಿಗೆ ಮುಂದಾಗಿದೆ. 

ಬೆಂಗಳೂರು (ಜ.08): ವಾಟ್ಸ್‌ಆ್ಯಪ್‌, ಕ್ಯೂಆರ್‌ ಕೋಡ್‌ ಟಿಕೆಟ್‌ ವ್ಯವಸ್ಥೆಯಿಂದ ಕಳೆದೆರಡು ತಿಂಗಳಲ್ಲಿ 2 ಕೋಟಿಗೂ ಹೆಚ್ಚಿನ ಆದಾಯ ಗಳಿಸಿರುವ ಹಿನ್ನೆಲೆಯಲ್ಲಿ ‘ನಮ್ಮ ಮೆಟ್ರೋ’, ಇನ್ನೊಂದು ತಿಂಗಳಲ್ಲಿ ಏಕ ಕಾಲಕ್ಕೆ ಆರು ಜನರಿಗೆ ಟಿಕೆಟ್‌ ಪಡೆಯುವ ವ್ಯವಸ್ಥೆ ಜಾರಿಗೆ ಮುಂದಾಗಿದೆ. ನಮ್ಮ ಮೆಟ್ರೋ ಕಳೆದ ನ.1ರಿಂದ ಜಾರಿಗೊಳಿಸಿರುವ ಈ ಎರಡು ವ್ಯವಸ್ಥೆಗೆ ಹೆಚ್ಚಿನ ಸ್ಪಂದನೆ ದೊರಕುತ್ತಿದೆ. ಹೀಗಾಗಿ ಈ ಸೌಲಭ್ಯವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಮೂಲಕ ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿಸಲು ನಿರ್ಧರಿಸಿದೆ.

ಸದ್ಯ ಒಮ್ಮೆ ಸ್ಕ್ಯಾನ್‌ ಮಾಡಿದಲ್ಲಿ ಒಂದು ಟಿಕೆಟ್‌ ಮಾತ್ರ ಪಡೆದುಕೊಳ್ಳುವ ವ್ಯವಸ್ಥೆ ಇದೆ. ಇನ್ನೊಂದು ತಿಂಗಳಲ್ಲಿ ಒಂದೇ ಬಾರಿಗೆ ಆರು ಜನರಿಗೆ ಟಿಕೆಟ್‌ ಖರೀದಿಸಲು ಸಾಧ್ಯವಾಗುವಂತೆ ತಂತ್ರಜ್ಞಾನ ಅಭಿವೃದ್ಧಿ ಮಾಡಲಾಗುತ್ತಿದೆ. ಇದಾದ ನಂತರ 10 ಜನರಿಗೆ ಟಿಕೆಟ್‌ ಪಡೆಯಲು ಅನುವಾಗುವಂತೆ ಮಾಡಲಾಗುವುದು. ಈಗಾಗಲೇ ಪ್ರಾಯೋಗಿಕ ಕಾರ್ಯಗಳು ನಡೆದಿದ್ದು, ಇನ್ನೊಂದು ತಿಂಗಳಲ್ಲಿ ಜಾರಿಗೊಳಿಸುವ ಪ್ರಯತ್ನ ನಡೆಸಿದ್ದೇವೆ ಎಂದು ಮೆಟ್ರೋ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಪ್ರಿ-ಫಿಕ್ಸೆಡ್‌ ಆಟೋ ಕೌಂಟರ್‌ ಆರಂಭ

ಕ್ಯೂಆರ್‌ ಕೋಡ್‌ ಸೌಲಭ್ಯ ಜಾರಿಯಾದ ನವೆಂಬರ್‌ನಲ್ಲಿ 2.1 ಲಕ್ಷ ಟಿಕೆಟ್‌ ಮಾರಾಟವಾಗಿತ್ತು. ಕಳೆದ ಡಿ.6ರವರೆಗೆ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ವ್ಯವಸ್ಥೆಯಿಂದ ಬರೋಬ್ಬರಿ 7,45,299 ಮಂದಿ ಟಿಕೆಟ್‌ ಪಡೆದು ಪ್ರಯಾಣಿಸಿದ್ದಾರೆ. ಇದೇ ರೀತಿ ವಾಟ್ಸ್‌ಆ್ಯಪ್‌ ಚಾಟ್‌ಬಾಟ್‌ ಮೂಲಕ 4,23,753 ಮಂದಿ ಟಿಕೆಟ್‌ ಪಡೆದಿದ್ದಾರೆ. ಇವೆರಡರಿಂದ ಒಟ್ಟಾರೆ 2.13 ಕೋಟಿ ಆದಾಯವನ್ನು ಮೆಟ್ರೋ ಗಳಿಸಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ.

2 ತಿಂಗಳಲ್ಲಿ 33 ಲಕ್ಷ ಜನ ಪ್ರಯಾಣ: ಎರಡು ತಿಂಗಳಲ್ಲಿ 33.06 ಲಕ್ಷ ಜನ ಪ್ರಯಾಣಿಸಿದ್ದು, 78.01 ಕೋಟಿ ಆದಾಯ ಗಳಿಸಿದೆ. ದಿನಕ್ಕೆ ಸರಾಸರಿ 5.2 ಲಕ್ಷ ಜನ ಪ್ರಯಾಣಿಸುತ್ತಾರೆ. ಹೊಸ ವರ್ಷದ ದಿನ 6.50 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿ ದಾಖಲೆ ಬರೆದಿದ್ದರು. ಅಂದು ಒಂದೇ ದಿನ ಮೆಟ್ರೋಗೆ 1.70 ಕೋಟಿ ಆದಾಯ ಬಂದಿತ್ತು. ಸದ್ಯ ಶೇ.58ಕ್ಕೂ ಹೆಚ್ಚು ಜನ ಸ್ಮಾರ್ಟ್‌ ಕಾರ್ಡ್‌ ಬಳಸುತ್ತಿದ್ದು, ಇದನ್ನು ರಿಚಾರ್ಜ್‌ ಮಾಡಿಕೊಳ್ಳಲು ಬಹುತೇಕರು ನಿಲ್ದಾಣದ ಕೌಂಟರನ್ನು ನೆಚ್ಚಿಕೊಂಡಿದ್ದಾರೆ. ಫೋನ್‌ ಪೇ, ಪೇಟಿಮ್‌ ಆ್ಯಪ್‌ ಮೂಲವೂ ರಿಚಾಜ್‌ರ್‍ ಮಾಡಿಕೊಳ್ಳುತ್ತಿದ್ದಾರೆ. ವಾಟ್ಸ್‌ಆ್ಯಪ್‌, ಕ್ಯೂಆರ್‌ ಕೋಡ್‌ ಟಿಕೆಟ್‌ ವ್ಯವಸ್ಥೆ ಜಾರಿ ಬಂದ ನಂತರ ಪ್ರಯಾಣಿಕರು ಇದನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.

ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ 1.70 ಕೋಟಿ ಆದಾಯ: ಹಿಂದಿನ ದಾಖಲೆ ಉಡೀಸ್

ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದ ವೇಳೆ 10 ಜನ ಟಿಕೆಟ್‌ ಪಡೆಯುವ ವ್ಯವಸ್ಥೆಯನ್ನು ತಿಂಗಳಲ್ಲಿ ಜಾರಿಗೊಳಿಸಲಿದ್ದೇವೆ. ಇದರಿಂದ ಪ್ರಯಾಣಿಕರು ವಿಶೇಷವಾಗಿ ಕುಟುಂಬ ಸಮೇತ ಪ್ರಯಾಣಿಸುವಾಗ ಪದೇ ಪದೇ ಸ್ಕ್ಯಾನ್‌ ಮಾಡುವುದು ತಪ್ಪಿ ಸಮಯ ಉಳಿಯಲಿದೆ.
-ಅಂಜುಮ್‌ ಪರ್ವೇಜ್‌, ಎಂಡಿ, ಬಿಎಂಆರ್‌ಸಿಎಲ್‌

click me!