ಅಭಿನವ ಹಾಲವೀರಪ್ಪಜ್ಜ ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಉದ್ಯಮಿ ಗೋವಿಂದ್ ಬಾಬು ಅವರ ಕಡೆಯಿಂದ ₹1.50 ಕೋಟಿ ಹಣವನ್ನು ಪಡೆದಿರುವ ವಂಚನೆ ಕೇಸ್‌ನಲ್ಲಿರುವ ಶ್ರೀಗಳು ಬಂಧನದ ಭೀತಿಯಲ್ಲಿದ್ದಾರೆ.
ಹೂವಿನಹಡಗಲಿ(ಸೆ.14): ಬಿಜೆಪಿ ಎಂಎಲ್‌ಎ ಟಿಕೆಟ್ ಕೊಡಿಸಲು ಹಣ ಪಡೆದ ಪ್ರಕರಣದಲ್ಲಿ ಆರೋಪಿಯಾಗಿರುವ ತಾಲೂಕಿನ ಹಿರೇಹಡಗಲಿ ಗ್ರಾಮದ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ(ಹಾಲಶ್ರೀ) ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ಅಭಿನವ ಹಾಲವೀರಪ್ಪಜ್ಜ ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಉದ್ಯಮಿ ಗೋವಿಂದ್ ಬಾಬು ಅವರ ಕಡೆಯಿಂದ ₹1.50 ಕೋಟಿ ಹಣವನ್ನು ಪಡೆದಿರುವ ವಂಚನೆ ಕೇಸ್‌ನಲ್ಲಿರುವ ಶ್ರೀಗಳು ಬಂಧನದ ಭೀತಿಯಲ್ಲಿದ್ದಾರೆ.
ಈ ವಂಚನೆ ಪ್ರಕರಣದಲ್ಲಿ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಮೂರನೇ (ಎ 3) ಆರೋಪಿಯಾಗಿದ್ದು, ಬಂಧನ ಭೀತಿಯಿಂದ ಬೆಳಗಿನಿಂದಲೇ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮಠದಿಂದ ಬೆಳಗ್ಗೆ ಹೊರಗೆ ಹೋದವರು ಮರಳಿ ಮಠಕ್ಕೆ ಬಂದಿಲ್ಲ. ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
undefined
ಬಿಜೆಪಿ ಟಿಕೆಟ್ ಡೀಲ್: ಚೈತ್ರಾ-ಪೂಜಾರಿ ಸ್ಫೋಟಕ ಅಡಿಯೋ ಬಹಿರಂಗ..!
ಹಿಂದೂ ಸಂಘಟನೆಯ ನಾಯಕಿ ಚೈತ್ರಾ ಕುಂದಾಪುರ ಅವರ ಬಂಧನದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು, ಹಾಲಸ್ವಾಮಿ ಅವರೂ ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಎಂದು ತಿಳಿದು ಬಂದಿದೆ.