ಬಿಜೆಪಿ ಟಿಕೆಟ್‌ ಕೊಡಿಸೋದಾಗಿ ಕೋಟ್ಯಂತರ ರೂ. ಪಡೆದ ಮತ್ತೊಂದು ಹಗರಣ: ಹಾಲಶ್ರೀ ಸ್ವಾಮೀಜಿ ವಿಚಾರಣೆ

By Kannadaprabha News  |  First Published Oct 4, 2023, 9:45 PM IST

ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು ಸಂಜಯ ಚೌಡಾಳ ಎನ್ನುವವರಿಂದ ಕೋಟ್ಯಂತರ ರುಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಸಂಜಯ ಚೌಡಾಳ ಮುಂಡರಗಿ ಪೊಲೀಸ್ ಠಾಣೆಗೆ ಸೆ. 25ರಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ದೂರಿನನ್ವಯ ಮಂಗಳವಾರ ಮುಂಡರಗಿ ಪೊಲೀಸರು ಅವರನ್ನು ವಿಚಾರಣೆಗಾಗಿ ಮುಂಡರಗಿಗೆ ಕರೆ ತಂದಿದ್ದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ.


ಮುಂಡರಗಿ(ಅ.04):  ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ವಂಚನೆ ಮಾಡಿದ್ದಾರೆಂದು ಆರೋಪ ಎದುರಿಸುತ್ತಿರುವ ವಿಜಯನಗರ ಜಿಲ್ಲೆ ಹಿರೇಹಡಗಲಿಯ ಹಾಲಶಿವಯೋಗೀಶ್ವರ ಮಠದ ಅಭಿನವ ಹಾಲ ವೀರಪ್ಪಜ್ಜ ಸ್ವಾಮೀಜಿಯನ್ನು ಮಂಗಳವಾರ ಮುಂಡರಗಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜಿರುಪಡಿಸಿ ಬಳಿಕ ಪೊಲೀಸರು ವಿಚಾರಣೆ ಮಾಡಿದ್ದಾರೆ.

ಮಂಗಳವಾರ ಶ್ರೀಗಳನ್ನು ನ್ಯಾಯಾಲಯಕ್ಕೆ ಹಾಜರಪಡಿಸಿದ ನಂತರ ಪಟ್ಟಣದ ತಾಲೂಕು ಆಸ್ಪತ್ರೆಗೆ ಕರೆ ತಂದು ಅಲ್ಲಿ ಸ್ವಾಮೀಜಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ನಂತರ ಅಲ್ಲಿಂದ ಮುಂಡರಗಿ ಪೊಲೀಸ್ ಠಾಣೆಗೆ ಕರೆ ತಂದು ಮುಂಡರಗಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

Tap to resize

Latest Videos

undefined

ಚೈತ್ರಾ ಬಿಜೆಪಿ ಟಿಕೆಟ್‌ ಡೀಲ್‌ ಕೇಸ್‌: ವಂಚನೆ ದುಡ್ಡಲ್ಲಿ 26 ಲಕ್ಷ ರು. ಕಾರು ಖರೀದಿಸಿದ್ದ ಹಾಲಶ್ರೀ

ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು ಸಂಜಯ ಚೌಡಾಳ ಎನ್ನುವವರಿಂದ ಕೋಟ್ಯಂತರ ರುಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಸಂಜಯ ಚೌಡಾಳ ಮುಂಡರಗಿ ಪೊಲೀಸ್ ಠಾಣೆಗೆ ಸೆ. 25ರಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ದೂರಿನನ್ವಯ ಮಂಗಳವಾರ ಮುಂಡರಗಿ ಪೊಲೀಸರು ಅವರನ್ನು ವಿಚಾರಣೆಗಾಗಿ ಮುಂಡರಗಿಗೆ ಕರೆ ತಂದಿದ್ದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ.

ಶ್ರೀಗೆ ಹಣ ಕೊಟ್ಟವರು ಇನ್ನೂ ಇದ್ದಾರೆ?

ಇದೇ ಮಾದರಿಯಲ್ಲಿಯೇ ಹಾಲಶ್ರೀಗಳು ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಹಲವರಿಂದ ಹಣ ಪಡೆದಿದ್ದರು. ಈಗಾಗಲೇ ಕೆಲವೊಂದಿಷ್ಟು ಹಣವನ್ನು ಮರಳಿ ನೀಡಿದ್ದಾರೆ. ಇನ್ನು ಹಣ ಕೊಡುವುದು ಕೆಲವರಿಗೆ ಬಾಕಿ ಇದೆ ಎನ್ನುವ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಆದರೆ ಅದ್ಯಾವುದಕ್ಕೂ ಪುರಾವೆಗಳಿಲ್ಲ. ಆದರೆ ಪೊಲೀಸ್ ಇಲಾಖೆ ಈ ಬಗ್ಗೆ ಆಳವಾದ ತನಿಖೆಗೆ ಮುಂದಾದಲ್ಲಿ ಇನ್ನಷ್ಟು ಕಠೋರ ಸತ್ಯಗಳು ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಾಲಶ್ರೀಗಳ ವಿರುದ್ಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಸಂಜಯ ಚೌಡಾಳ ಎನ್ನುವವರು ಶ್ರೀಗಳಿಂದ ನನಗೆ ವಂಚನೆಯಾಗಿದೆ ಎಂದು ದೂರು ನೀಡಿದ್ದರು. ದೂರಿನ ಅನ್ವಯ ಅವರನ್ನು ವಿಚಾರಣೆಗಾಗಿ ಕರೆ ತರಲಾಗಿತ್ತು. ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಪಡಿಸಿದ ವೇಳೆ, ನ್ಯಾಯಾಲಯ ಅವರನ್ನು 2 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಅಗತ್ಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಗದಗ ಬಿ.ಎಸ್. ನೇಮಗೌಡ್ರ ತಿಳಿಸಿದ್ದಾರೆ.  

click me!