ಸಬ್‍ಸ್ಟೇಷನ್ 500 ಮೀಟರ್ ವ್ಯಾಪ್ತಿಯೊಳಗಿನ ಸರ್ಕಾರಿ ಜಾಗದಲ್ಲಿ ಅಥವಾ ಖಾಸಗಿ ಜಾಗವನ್ನು ಲಿಸ್ ಪಡೆದು ಆ ಸ್ಥಳದಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡಿ ರೈತರ ಪಂಪ್ ಸೆಟ್‍ಗಳಿಗೆ ವಿದ್ಯುತ್ ಒದಗಿಸಲಾಗುವುದು ಎಂದು ತಿಳಿಸಿದ ಸಚಿವ ಕೆ.ಜೆ.ಜಾರ್ಜ್
ವರದಿ- ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ(ಅ.04): ರಾಜ್ಯದ 400 ಸಬ್‍ಸ್ಟೇಷನ್ ವ್ಯಾಪ್ತಿಯಲ್ಲಿ 3 ಸಾವಿರ ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ತೀರ್ಮಾನ ಮಾಡಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ತಿಳಿಸಿದ್ದಾರೆ. ಇಂದು(ಬುಧವಾರ) ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ದಾಸೇನಹಳ್ಳಿಯಲ್ಲಿ ಸೋಲಾರ್ ಪ್ಲಾಂಟ್‍ಗಾಗಿ ಜಾಗ ವೀಕ್ಷಿಸಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್ ಅವರು, ಸಬ್‍ಸ್ಟೇಷನ್ 500 ಮೀಟರ್ ವ್ಯಾಪ್ತಿಯೊಳಗಿನ ಸರ್ಕಾರಿ ಜಾಗದಲ್ಲಿ ಅಥವಾ ಖಾಸಗಿ ಜಾಗವನ್ನು ಲಿಸ್ ಪಡೆದು ಆ ಸ್ಥಳದಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡಿ ರೈತರ ಪಂಪ್ ಸೆಟ್‍ಗಳಿಗೆ ವಿದ್ಯುತ್ ಒದಗಿಸಲಾಗುವುದು ಎಂದು ತಿಳಿಸಿದರು.
undefined
ನಮ್ಮ ರಾಜ್ಯದಲ್ಲಿ 34 ಲಕ್ಷ ನೀರಾವರಿ ಪಂಪ್ ಸೆಟ್‍ಗಳಿವೆ. 4 ಲಕ್ಷ ಪಂಪ್ ಸೆಟ್‍ಗಳು ಅಕ್ರಮ ಸಕ್ರಮಕ್ಕೆ ಅರ್ಜಿ ಬಂದಿದೆ ಇತ್ತೀಚೆಗೆ ಮಳೆ ಕಡಿಮೆಯಾಗಿದೆ ವಿದ್ಯುತ್‍ಗೆ ಬೇಡಿಕೆ ಜಾಸ್ತಿ ಆಗಿದೆ ಈ ವರ್ಷ ನಮಗೆ ಸೆಪ್ಟೆಂಬರ್‍ನಲ್ಲೇ ಪೀಕ್ ಹವರ್ ಶುರುವಾಗಿದೆ ಎಂದು ಸಚಿವರು ತಿಳಿಸಿದರು. ಥರ್ಮಲ್ ಪವರ್ ಉತ್ಪಾದನೆ ಶುರುಮಾಡಿ ಸದ್ಯ ಕೊರತೆ ಆಗದಂತೆ ಮಾಡಿದ್ದೇವೆ ಎಂದರು.
ಸ್ವಲ್ಪ ದಿನ ಗ್ಯಾರಂಟಿ ಯೋಜನೆ ನಿಲ್ಲಿಸಿ ರೈತರ ಉಳಿಸಿ: ರಾಜ್ಯ ಸರ್ಕಾರಕ್ಕೆ ರೇವಣ್ಣ ಒತ್ತಾಯ
ಅರಸೀಕೆರೆ ತಾಲ್ಲೂಕಿನಲ್ಲಿ 24,926 ಸಾವಿರ ಪಂಪ್ ಸೆಟ್‍ಗಳಿವೆ ಇದರಲ್ಲಿ 3932 ರೈತರು ಅಕ್ರಮ ಸಕ್ರಮಕ್ಕಾಗಿ ಹಣ ಕಟ್ಟಿ ಅರ್ಜಿ ಸಲ್ಲಿಸಿದ್ದು, 2180 ಪಂಪ್ ಸೆಟ್‍ಗಳನ್ನು ಸಕ್ರಮಗೊಳಿಸಲಾಗಿದೆ. 1750 ಅರ್ಜಿ ಬಾಕಿ ಇವೆ ಎಂದರು.
1661 ಪಂಪ್ ಸೆಟ್‍ಗಳು ಸಬ್‍ಸ್ಟೇಷನ್ 500 ಮೀಟರ್ ವ್ಯಾಪ್ತಿಯೊಳಗಿವೆ. ಸಮೀಪವೇ ಸೋಲಾರ್ ಪ್ಲಾಂಟ್ ಮಾಡಿ ವಿದ್ಯುತ್ ಉತ್ಪಾದನೆ ಮಾಡುತ್ತೇವೆ ಎಂದ ಸಚಿವರು ಸರ್ಕಾರಿ ಜಾಗ ಲಭ್ಯವಿಲ್ಲದ್ದಿದ್ದಲ್ಲಿ ಖಾಸಗಿಯವರು ಸ್ವ-ಇಚ್ಚೇಯಿಂದ ಜಮೀನು ನೀಡಲು ಮುಂದೆ ಬಂದರೆ ಲೀಸ್ ಪಡೆದು ಸೋಲಾರ್ ಪ್ಲಾಂಟ್ ಅಳವಡಿಸಲಾಗುವುದು ಎಂದು ತಿಳಿಸಿದರು. ಎಲ್ಲಾ ರೈತರಿಗು ವಿದ್ಯುತ್ ನೀಡಲು ಕ್ರಮವಹಿಸುತ್ತೇವೆ ಎಂದರು.
ಪಾವಗಡ ಮಾದರಿಯಲ್ಲಿ ರೈತರ ಜಮೀನು ಲೀಸ್‍ಗೆ ಪಡೆದು ಯೋಜನೆ ಜಾರಿ ಮಾಡುತ್ತೇವೆ ಹಗಲಿನಲ್ಲಿ ರೈತರಿಗೆ ಏಳು ಗಂಟೆ ವಿದ್ಯುತ್ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಈ ವೇಳೆ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಹಾಗೂ ಚೆಸ್ಕಾ ಅಧಿಕಾರಿಗಳು ಹಾಜರಿದ್ದರು.