* ಜಾತ್ರೆ ,ರಥೋತ್ಸವ, ಸುಗ್ಗಿ ಹಬ್ಬದಲ್ಲೂ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ
* ವ್ಯಾಪಾರ ಮಾಡಲು ಅವಕಾಶವಿಲ್ಲ
* ಮಲೆನಾಡಿನ ಪ್ರತಿ ಹಬ್ಬಕ್ಕೂ ಹಬ್ಬಿದ ನಿರ್ಬಂಧದ ಕಿಚ್ಚು
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು(ಮಾ.30): ಮಲೆನಾಡ ಭಾಗವಾದ ಚಿಕ್ಕಮಗಳೂರಿನಲ್ಲಿ(Chikkamagaluru) ಹಿಜಾಬ್ (Hijab)ವಿವಾದದ ಕಿಚ್ಚು ತಣ್ಣಗಾಗುವ ಲಕ್ಷಣಗಳು ಗೋಚರವಾಗುತ್ತಿಲ್ಲ, ಹಿಜಾಬ್ ವಿವಾದದಿಂದ ಉಂಟಾದ ವ್ಯಾಪಾರ ಸಂಘರ್ಷದ ಕಿಚ್ಚು ಮಲೆನಾಡಿನಲ್ಲಿ(Malenadu) ವ್ಯಾಪಕವಾಗಿ ಪ್ರತಿಧ್ವನಿಸುತ್ತಿದೆ. ಮಲೆನಾಡಿನಲ್ಲಿ ನಡೆಯುವ ಪ್ರತಿ ಹಬ್ಬಕ್ಕೂ ಮುಸ್ಲಿಂ ವ್ಯಾಪಾರಸ್ಥರಿಗೆ(Muslim Traders) ನಿರ್ಬಂಧದ ಕೂಗು ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಈಗ ಹಲಾಲ್ ಬ್ಯಾನ್ ಅಭಿಯಾನವೂ ಸೇರಿಕೊಂಡಿದೆ.
ಮಲೆನಾಡಿನ ಪ್ರತಿ ಹಬ್ಬಕ್ಕೂ ಹಬ್ಬಿದ ನಿರ್ಬಂಧದ ಕಿಚ್ಚು
ಬೇಸಿಗೆಕಾಲದಲ್ಲಿ ಚಿಕ್ಕಮಗಳೂರಿನ ಪ್ರತಿಗ್ರಾಮದಲ್ಲಿ ಕೂಡ ಸುಗ್ಗಿ ಹಬ್ಬದ ಸಂಭ್ರಮ. ಒಂದಲ್ಲ ಒಂದು ಗ್ರಾಮದಲ್ಲಿ ರಥೋತ್ಸವ, ಜಾತ್ರೆ, ಕೋಲ, ಸುಗ್ಗಿ ಹಬ್ಬಗಳ ಸಂಭ್ರಮ ಎಲ್ಲೆ ಮೀರಿರುತ್ತದೆ. ಈ ಬಾರಿ ಮಲೆನಾಡಿನಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧದ ಕೂಗು ತಟ್ಟಿದೆ. ಹಿಜಾಬ್ ಬಗ್ಗೆ ಕೋರ್ಟ್ ನ ತೀರ್ಪು ವಿರೋಧಿಸಿ ನಡೆಸಿದ ಮುಸ್ಲಿಂ ವರ್ತಕರ ಬಂದ್‌ನ ಪರಿಣಾಮ ವ್ಯಾಪಾರದ ಸಂಘರ್ಷ ಮಲೆನಾಡಿನಲ್ಲಿ ಮುಂದುವರೆಯುತ್ತಲೇ ಇದೆ. ಒಂದಲ್ಲ ಒಂದು ತಾಲೂಕುಗಳಲ್ಲಿ ನಡೆಯುವಂತಹ ಹಬ್ಬ ಜಾತ್ರೆ ಮಹೋತ್ಸವ ಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧದ ಕೂಗು ಬಲವಾಗಿ ಕೇಳಿ ಬರುತ್ತಿದೆ.
ಚಿಕ್ಕಮಗಳೂರು: ಜಾಮೀಯಾ ಮಸೀದಿ ಆಡಳಿತ ಸಂಸ್ಥೆ- ಅಧಿಕಾರಿಗಳ ನಡುವೆ ಜಟಾಪಟಿ
ಮೂಡಿಗೆರೆ, ಕೊಪ್ಪ, ಶೃಂಗೇರಿ ಸೇರಿದಂತೆ ಚಿಕ್ಕಮಗಳೂರಿನ ಕೆಲ ಭಾಗಗಲ್ಲಿ ಈಗಾಗಲೇ ನಡೆಯುವ ಜಾತ್ರೆ, ಸುಗ್ಗಿ ಹಬ್ಬಗಳಲ್ಲಿ ಬ್ಯಾನರ್‌ಗಳನ್ನು ಹಾಕಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶವಿಲ್ಲಂದು ಸಾರಿದ್ದಾರೆ. ಇದರ ನಡುವೆ ಚಿಕ್ಕಮಗಳೂರು ತಾಲೂಕಿನ ಹುಯಿಗೆರೆ ಗ್ರಾಮದಲ್ಲಿ ನಡೆಯುತ್ತಿರುವ ನೇಮೋತ್ಸವ(ಕೋಲ)ದಲ್ಲೂ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಲಾಗಿದೆ. ಸಾವಿರಾರು ಜನರು ಸೇರುವಂತಹ ಉತ್ಸದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಪ್ರತಿವರ್ಷವೂ ಕೂಡ ಇಲ್ಲಿ ಭರ್ಜರಿ ವ್ಯಾಪಾರ ವಾಗುತ್ತಿತ್ತು ಆದರೆ ಈ ಬಾರಿ ನಿರ್ಬಂಧ ಹೇರಿರುವ ಪರಿಣಾಮ ಮುಸ್ಲಿಂ ವ್ಯಾಪಾರಸ್ಥರು ಅಂಗಡಿ ಮಳಿಗೆಗಳನ್ನು ಹಾಕಿಕೊಳ್ಳುವುದಕ್ಕೆ ಅವಕಾಶವೇ ಆಗಿಲ್ಲ, ಶ್ರೀ ಚೌಡೇಶ್ವರಿ ನೇಮೋತ್ಸವೂ ಇದೇ ತಿಂಗಳು
ಮಾರ್ಚ್ 24ರಿಂದ ಶುರುವಾಗಿದೆ. ಇಂದು ರಾತ್ರಿವರೆಗೂ ನಡೆಯಲಿರುವ ಉತ್ಸವದಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಅನ್ಯ ಧರ್ಮದ ವ್ಯಾಪಾರಸ್ಥರಿಗೆ ನಿರ್ಬಂಧವನ್ನು ಸ್ಥಳೀಯರು ಹಾಕಿರುವ ಪರಿಣಾಮ ಮುಸ್ಲಿಂ ವ್ಯಾಪಾರಸ್ಥರು ಇತ್ತ ಸುಳಿದಿಲ್ಲ. ಗ್ರಾಮದ ಮುಂಭಾಗದಲ್ಲಿ ಬ್ಯಾನರ್ ಹಾಕಿ ವ್ಯಾಪಾರಕ್ಕೆ ಬರದಂತೆ ಅನ್ಯಧರ್ಮದ ವ್ಯಾಪಾರಸ್ಥರಿಗೆ ಸೂಚನೆ ನೀಡಲಾಗಿದೆ.
ಮುಸ್ಲಿಂ ವ್ಯಾಪಾರಸ್ಥರಿಗೆ ಬ್ಯಾನ್ ಆಯ್ತು, ಈಗ ಹಲಾಲ್ ಬ್ಯಾನ್ ಅಭಿಯಾನ
ಚಿಕ್ಕಮಗಳೂರಿನಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧದ(Boycott) ಮುಂದುವರಿಯುತ್ತಲೇ ಈಗ ಹಲಾಲ್ ಬ್ಯಾನ್ ಅಭಿಯಾನವು ಕೂಡ ಕಾವು ಪಡೆದುಕೊಂಡಿದೆ. ಹಲಾಲ್ ಬ್ಯಾನ್ ಅಭಿಯಾನಕ್ಕೆ(Halal Ban Campaign) ವಿಶ್ವ ಹಿಂದೂ ಪರಿಷತ್, ಬಜರಂಗದಳ ಕರೆಕೊಟ್ಟಿದೆ. ಯುಗಾದಿ ಬಳಿಕದ ಹೊಸತೊಡಕಿನಂದು ಮುಸ್ಲಿಂ ಬಳಿ ಮಾಂಸ ಖರೀದಿಸುವುದು ಬೇಡವೆಂದು ಕರೆ ನೀಡಿ ಹಿಂದೂಗಳು ಓಪನ್ ಮಾಡಿರುವ ಮಾಂಸದ ಅಂಗಡಿಗಳಲ್ಲಿ ಮಾಂಸ ಖರೀದಿಗೆ ಮನವಿ ಮಾಡಿದ್ದಾರೆ. ಹಲಾಲ್ ಎಂದರೆ ಅಲ್ಲಾ ಹೆಸರಿನಲ್ಲಿ ನೈವೇದ್ಯಯಾದ ಮಾಂಸವಾಗಿದ್ದು ಬೇರೆ ದೇವರಿಗೆ ಒಪ್ಪಿಸಿದ ಮಾಂಸವನ್ನ ನಾವೇಕೆ ಸ್ವೀಕರಿಸಬೇಕೆಂದು ಕರ ಪತ್ರದಲ್ಲಿ ಪ್ರಶ್ನೆ ಮಾಡಿದ್ದಾರೆ . ಸಾಮಾಜಿಕ ಜಾಲತಾಣ ಸೇರಿದಂತೆ ಇತರೆಡೆಗಳಲ್ಲಿ ಕರಪತ್ರದ ಮೂಲಕ ವಿಶ್ವ ಹಿಂದೂ ಬಜರಂಗದಳ ಜನರಲ್ಲಿ ಜಾಗೃತಿಮೂಡಿಸಲು ಮುಂದಾಗಿದೆ. ಹಲಾಲ್ ಮಾಡುವಾಗ ಪ್ರಾಣಿಯ ಕತ್ತಿನ ಭಾಗ ಸೀಳಿ ಬಿಡುತ್ತಾರೆ. ಆಗ ಪ್ರಾಣಿಯ ಮೆದುಳಿನ ಗ್ರಂಥಿಯಿಂದ ವಿಷಕಾರಿ ಅಂಶ ಬಿಡುಗಡೆಯಾಗುತ್ತೆ. ಇಂತಹ ಮಾಂಸ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರಾಗುವುದು ವೈಜ್ಞಾನಿಕವಾಗಿ ನಿರೂಪಿತವಾಗಿದ್ದು ಎಲ್ಲರೂ ಒಗ್ಗಟ್ಟಾಗಿ ಹಿಂದೂಗಳ ಬಳಿಯೇ ಮಾಂಸ ಸ್ವೀಕರಿಸೋಣ ಎಂದು ಕರೆ ನೀಡಿದ್ದಾರೆ.
ಗೋವನ್ನು ಕಡಿದು ತಿನ್ನುವವರ ಬಳಿ ವ್ಯಾಪಾರ ನಿಲ್ಲಿಸೋಣ
ಹಲಾಲ್ ಬ್ಯಾನ್ ಅಭಿಯಾನದಲ್ಲಿ ನಾವು ಪೂಜಿಸುವ ಗೋವನ್ನ(Cow) ಕಡಿದು ತಿನ್ನುವವರ ಬಳಿ ವ್ಯಾಪರ ನಿಲ್ಲಿಸೋಣ ಎಂದು ವಿಶ್ವಹಿಂದೂ ಪರಿಷತ್ ಬಜರಂಗದಳ ಕರೆ ನೀಡಿದೆ. ಸಂಘ ಪರಿಹಾರದ ಹೆಸರಿನಲ್ಲಿ ಬಿಡುಗಡೆ ಆಗಿರುವ ಕರಪತ್ರ ದಲ್ಲಿಹಿಂದೂಗಳು ಜಟ್ಕಾಕಟ್ ವಿಧಾನ ವೈಜ್ಞಾನಿಕವಾಗಿದೆ. ಹಲಾಲ್ ಮಾಂಸ ಎಂದರೇನು?. ಹಲಾಲ್ ಮಾಂಸ ಸೇವನೆಯಿಂದ ಅಗುವ ಪರಿಣಾಮದ ಬಗ್ಗೆ ಪ್ರಿಂಟ್ ಮಾಡಲಾಗಿದೆ. ಒಟ್ಟಾರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿಜಾಬ್ ವಿವಾದದಿಂದ ಉಂಟಾಗಿರುವ ವ್ಯಾಪಾರ ಸಂಘರ್ಷದ ಪರಿಣಾಮ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಇದರ ನಡುವೆ ಈಗ ಯುಗಾದಿ ಹಬ್ಬದ ಮರುದಿನ ನಡೆಯುವಂತಹ ಹಬ್ಬದ ಮೇಲೆ ಪರಿಣಾಮ ಬೀರಿದೆ. ಹಲಾಲ್ ಕಟ್ ಅಭಿಯಾನ ದಿನದಿಂದ ದಿನಕ್ಕೆ ಕಾವು ಪಡೆದು ಲಕ್ಷಣ ಗೋಚರವಾಗುತ್ತಿದೆ.