ಕರೋನಾ ವೈರಸ್ ಭೀತಿ ಬೆನ್ನಲ್ಲೇ ಎಚ್1ಎನ್1 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲ ಕಂಪನಿಗಳು ತೀವ್ರ ಆತಂಕಕ್ಕೆ ಗುರಿಯಾಗಿವೆ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಸ್ಯಾಪ್ ಇಂಡಿಯಾ ಕಂಪನಿಯು ತನ್ನ ಇಬ್ಬರು ಸಿಬ್ಬಂದಿಗೆ ಎಚ್1ಎನ್1 ಸೋಂಕು ದೃಢಪಟ್ಟಿದೆ ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಫೆ.28ರವರೆಗೆ ತನ್ನ ಕಂಪನಿಗೇ ಬೀಗ ಜಡಿದಿದೆ.
ಬೆಂಗಳೂರು(ಫೆ.21): ಕರೋನಾ ವೈರಸ್ ಭೀತಿ ಬೆನ್ನಲ್ಲೇ ಎಚ್1ಎನ್1 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲ ಕಂಪನಿಗಳು ತೀವ್ರ ಆತಂಕಕ್ಕೆ ಗುರಿಯಾಗಿವೆ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಸ್ಯಾಪ್ ಇಂಡಿಯಾ ಕಂಪನಿಯು ತನ್ನ ಇಬ್ಬರು ಸಿಬ್ಬಂದಿಗೆ ಎಚ್1ಎನ್1 ಸೋಂಕು ದೃಢಪಟ್ಟಿದೆ ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಫೆ.28ರವರೆಗೆ ತನ್ನ ಕಂಪನಿಗೇ ಬೀಗ ಜಡಿದಿದೆ.
ನಗರದ ಬೆಳ್ಳಂದೂರು ಬಳಿಯ ಇಕೋ ವಲ್ಡ್‌ರ್ ಕಟ್ಟಡದ 6 ಮತ್ತು 10ನೇ ಮಹಡಿಯಲ್ಲಿರುವ ಸ್ಯಾಪ್ ಇಂಡಿಯಾ ಕಂಪನಿಯು, ತನ್ನ ಕಂಪನಿಯ ನೌಕರರಿಗೆ ಫೆ.20ರಿಂದ ಫೆ.28ರವರೆಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಿದೆ.
ಪಾಕ್ ಜಿಂದಾಬಾದ್ ಎಂದವಳು ನನ್ನ ಮಗಳೇ ಅಲ್ಲ ಎಂದ ಅಮೂಲ್ಯ ತಂದೆ
ಇದರ ಬೆನ್ನಲ್ಲೇ ಬೆಳ್ಳಂದೂರು ಸುತ್ತಮುತ್ತಲಿನ ಇತರೆ ಕಂಪನಿಗಳೂ ಆತಂಕಕ್ಕೆ ಒಳಗಾಗಿದ್ದು, ಸಾಲ್ವೀಜಿ ಕಂಪನಿ ಸೇರಿದಂತೆ ಹಲವು ಕಂಪನಿಗಳು ಇಕೋ ವಲ್ಡ್‌ರ್ ಕಟ್ಟಡದಲ್ಲಿರುವ ಕಚೇರಿ ಸಿಬ್ಬಂದಿ ಜತೆ ಒಡನಾಟ ಇಟ್ಟುಕೊಳ್ಳಬೇಡಿ ಎಂದು ಸಲಹೆ ನೀಡಿವೆ.
ಕಂಪನಿಗಳ ಕ್ರಮಕ್ಕೆ ಆರೋಗ್ಯ ಇಲಾಖೆ ಅಚ್ಚರಿ ವ್ಯಕ್ತಪಡಿಸಿದ್ದು, ಎಚ್1ಎನ್1 ಸೋಂಕಿಗೆ ಇಂತಹ ಗಂಭೀರ ಕ್ರಮಗಳು ಏಕೆ ಕೈಗೊಳ್ಳಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಕಡಿಮೆ ಎಚ್1ಎನ್1 ಪ್ರಕರಣಗಳು ವರದಿಯಾಗಿವೆ. ಚಿಕಿತ್ಸೆಯಿಂದ ನಿಯಂತ್ರಿಸಬಹುದಾದ ಕಾಯಿಲೆಯಾಗಿದ್ದು, ಅಪರೂಪದ ಪ್ರಕರಣಗಳಲ್ಲಿ ಮಾತ್ರ ಜೀವಾಪಾಯ ಇರುತ್ತದೆ. ಹೀಗಾಗಿ ಕಂಪನಿಗೆ ಬೀಗ ಜಡಿಯುವ ಕ್ರಮಗಳು ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಉಪ ನಿರ್ದೇಶಕ ಡಾ.ಪ್ರಕಾಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು ಪೊಲೀಸರಿಂದ ಜುಂಬಾ ಡ್ಯಾನ್ಸ್, ಹೊಸ ಪ್ರಯತ್ನ ವೈರಲ್!
ಫೆ.20ರಂದು ತನ್ನ ಸಿಬ್ಬಂದಿಗೆ ಮೆಮೊ ನೀಡಿರುವ ಸ್ಯಾಪ್ ಇಂಡಿಯಾ, ಎಚ್1ಎನ್1 ಪ್ರಕರಣ ಹೆಚ್ಚುತ್ತಿರುವ ಕುರಿತು ಸೂಕ್ಷ್ಮವಾಗಿ ಪರಿಗಣಿಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ನೌಕರರು ಮನೆಯಲ್ಲಿಯೇ ಕೆಲಸ ಮಾಡಿ. ಈಗಾಗಲೇ ಇಕೋ ವಲ್ಡ್‌ರ್ ಕಟ್ಟಡದ 6 ಮತ್ತು 10ನೇ ಮಹಡಿಯಲ್ಲಿ ಧೂಮೀಕರಣ ಮಾಡಲಾಗಿದ್ದು, ಸಂಪೂರ್ಣ ನೈರ್ಮಲ್ಯಗೊಳಿಸಲಾಗಿದೆ. ಈ ವಿಚಾರವಾಗಿ ನೌಕರರು saphಛಿa್ಝಠಿh್ಛಟ್ಟ್ಝಜ್ಛಿಛಿಃಜ್ಝಟಚಿa್ಝ.್ಚಟ್ಟp.sapನಲ್ಲಿ ಅಭಿಪ್ರಾಯ ಹಾಗೂ ಮಾಹಿತಿ ಹಂಚಿಕೊಳ್ಳಿ ಎಂದು ಸೂಚಿಸಿದೆ.
ನೌಕರರ ಆರೋಗ್ಯ ನಮ್ಮ ಮೊದಲ ಆದ್ಯತೆಯಾಗಿದ್ದು, ನೌಕರರಲ್ಲಿ ಯಾರಿಗಾದರೂ ಅಥವಾ ಕುಟುಂಬದ ಯಾವುದೇ ಸದಸ್ಯರಿಗೆ ಶೀತ, ಕೆಮ್ಮು ಸಹಿತ ಜ್ವರ ಕಾಣಿಸಿಕೊಂಡರೆ ನಿರ್ಲಕ್ಷಿಸದೆ ಕೂಡಲೇ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಕಂಪನಿಯಿಂದ ನೌಕರರಿಗೆ ಸಲಹೆ ನೀಡಲಾಗಿದೆ.
6 ದಿನಗಳಲ್ಲಿ 35 ಪ್ರಕರಣ ವರದಿ:
ರಾಜ್ಯದಲ್ಲಿ ಎಚ್1 ಎನ್1 ವ್ಯಾಪಕವಾಗಿ ಹರಡುತ್ತಿದ್ದು, ಈವರೆಗೂ 1,648 ಶಂಕಿತರ ರಕ್ತದ ಮಾದರಿ ಪರೀಕ್ಷಿಸಲಾಗಿದ್ದು, 175 ಮಂದಿಯಲ್ಲಿ ಎಚ್1ಎನ್1 ಸೋಂಕು ದೃಢಪಟ್ಟಿದೆ. ಕೇವಲ 6 ದಿನಗಳಲ್ಲಿ 35 ಮಂದಿಗೆ ಸೋಂಕು ತಗುಲಿದೆ. ಬೆಂಗಳೂರು ನಗರದಲ್ಲೇ ಅತೀ ಹೆಚ್ಚು 88 ಪ್ರಕರಣ ವರದಿಯಾಗಿದೆ.
ಇತರೆ ಕಂಪನಿಗಳಿಂದ ಎಚ್ಚರಿಕೆ:
ಸ್ಯಾಪ್ ಇಂಡಿಯಾ ತನ್ನೆಲ್ಲಾ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಿದೆ. ಇದರ ಬೆನ್ನಲ್ಲಿ ಬೆಳ್ಳಂದೂರಿನಲ್ಲಿರುವ ಸಾಲ್ವೀಜಿ ಎಂಬ ಮತ್ತೊಂದು ಕಂಪನಿಯ ಆಡಳಿತ ಮಂಡಳಿ ತಮ್ಮ ಕಂಪನಿಯ ಸಿಬ್ಬಂದಿಗೆ ಈ-ಮೇಲ್ ಮೂಲಕ ಎಚ್1ಎನ್1 ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಯಾವುದೇ ಕಾರಣಕ್ಕೂ ಎಕೋವಲ್ಡ್‌ರ್‍ನಲ್ಲಿರುವ ಸ್ಯಾಪ್ ಇಂಡಿಯಾ ಕಂಪನಿಯ ಸಿಬ್ಬಂದಿಯನ್ನು ಭೇಟಿ ಮಾಡಬೇಡಿ. ಕಳೆದ ಎರಡು ದಿನಗಳ ಹಿಂದೆ ಸ್ಯಾಪ್ ಇಂಡಿಯಾ ಸಿಬ್ಬಂದಿಯನ್ನು ಭೇಟಿ ಮಾಡಿದ್ದರೆ ಕೂಡಲೇ ಆಡಳಿತ ಮಂಡಳಿಯ ಗಮನಕ್ಕೆ ತರುವಂತೆ ಸೂಚಿಸಿದೆ. ಅವರೊಂದಿಗೆ ಒಟ್ಟಿಗೆ ಒಂದೇ ವಾಹನದಲ್ಲಿ ಚಲಿಸಬೇಡಿ. ಜತೆಗೆ ನಿಮ್ಮ ಕುಟುಂಬದ ಸದಸ್ಯರಲ್ಲಿ ಏನಾದರೂ ಎಚ್1ಎನ್1 ಲಕ್ಷಣ ಕಂಡು ಬಂದರೆ ಕೂಡಲೇ ವೈದ್ಯರ ಸಲಹೆ ಚಿಕಿತ್ಸೆ ಪಡೆದುಕೊಳ್ಳಿ ಎಂದು ಹೇಳಿದೆ.
ಬಿಬಿಎಂಪಿಯಿಂದ ಅಗತ್ಯ ಕ್ರಮ:
ಬಿಬಿಎಂಪಿಯ ಸಾರ್ವಜನಿಕ ಆರೋಗ್ಯಾಧಿಕಾರಿ ವಿಜೇಂದ್ರ ಮಾತನಾಡಿ, ನಗರದಲ್ಲಿ ಸಾಮಾನ್ಯವಾಗಿ ಪ್ರತಿ ತಿಂಗಳಿಗೆ 8ರಿಂದ 10 ಪ್ರಕರಣಗಳು ಎಚ್1ಎನ್1 ಕುರಿತು ದಾಖಲಾಗುತ್ತವೆ. ಪ್ರಕರಣ ದಾಖಲಾದ ಪ್ರದೇಶದಲ್ಲಿ ರೋಗ ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಬಿಬಿಎಂಪಿ ಕೈಗೊಳ್ಳುತ್ತಿದೆ. ಹೀಗಾಗಿ ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದರು.
ಎಚ್1ಎನ್1 ಹೊಸ ಸೋಂಕು ಅಲ್ಲ ಹಲವಾರು ವರ್ಷದಿಂದ ಇದೆ. ಎಚ್1ಎನ್1 ನ ಲಕ್ಷಣಗಳು ಕರೋನಾ ವೈರಸ್ ಹೋಲಿಕೆ ಆಗುವ ಹಿನ್ನೆಲೆಯಲ್ಲಿ ಕಂಪನಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಂತೆ ಕಾಣುತ್ತಿದೆ. ಎಚ್1ಎನ್1 ರೋಗ ನಿಯಂತ್ರಣಕ್ಕೆ ಹಾಗೂ ಚಿಕಿತ್ಸೆ ಬೇಕಾದ ಔಷಧಿ ಲಭ್ಯತೆ ಇರುವುದರಿಂದ ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಹೇಳಿದ್ದಾರೆ.H1N1 disease fear bangalore company shuts for a month