'ನಾನ್ ಹೇಳಿದ್ದು ವಿವಾದ ಆಗುತ್ತೆ, ಹಾಗಾಗಿ ಮಾತಾಡಲ್ಲ ಎಂದ ಸಚಿವ'..!

Kannadaprabha News   | Asianet News
Published : Jan 17, 2020, 08:55 AM IST
'ನಾನ್ ಹೇಳಿದ್ದು ವಿವಾದ ಆಗುತ್ತೆ, ಹಾಗಾಗಿ ಮಾತಾಡಲ್ಲ ಎಂದ ಸಚಿವ'..!

ಸಾರಾಂಶ

ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟು ಟೀಕೆಗೆ ಗುರಿಯಾಗುತ್ತಲೇ ಇರುವ ಸಚಿವ ಎಚ್. ನಾಗೇಶ್‌ ಕೋಲಾರದಲ್ಲಿ ಮಾತನಾಡಿದ್ದಾರೆ. ಈ ಸಂದರ್ಭ, ನಾನು ಮಾತನಾಡಿದ್ದು, ವಿವಾದವಾಗತ್ತದೆ ಎಂದು ಹೇಳೋ ಮೂಲಕ ಸಚಿವರು ಪ್ರತಿಕ್ರಿಯೆಗಳನ್ನು ನೀಡದೇ ನುಣಚಿಕೊಂಡಿದ್ದಾರೆ.

ಕೋಲಾರ(ಜ.17): ನಾನು ಹೇಳಿದ್ದು ವಿವಾದವಾಗುತ್ತದೆ ಅದರಿಂದಾಗಿ ನಾನು ಹೆಚ್ಚಿಗೆ ಮಾತನಾಡುವುದಿಲ್ಲ, ಯಾವ ಭರವಸೆಗಳನ್ನೂ ನೀಡುವುದಿಲ್ಲ. ಹೇಳಿಕೆಗಳನ್ನು ಕೊಟ್ಟು ಸಿಕ್ಕಿಕೊಳ್ಳುವುದು ಬೇಡ ಎಂದು ಸಚಿವ ಎಚ್‌.ನಾಗೇಶ್‌ ತಿಳಿಸಿದ್ದಾರೆ.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೋಲಾರ ಜಿಲ್ಲೆ ರಾಷ್ಟ್ರಕ್ಕೆ ಚಿನ್ನ ಕೊಟ್ಟಜಿಲ್ಲೆ ಇದರಿಂದಾಗಿ ಈ ಜಿಲ್ಲೆಗೆ ಹೆಸರು ಬಂದಿತ್ತು, ನಮ್ಮ ಜಿಲ್ಲೆಗೆ ಹೆಸರು ಬರಬೇಕಾದರೆ ನಾವು ಇಲ್ಲಿಂದ ಏನಾದರು ಕೊಡಲೇ ಬೇಕು ಇದರಿಂದಾಗಿ ಗಣಿಯಿಂದ ಹೊರತೆಗೆದಿರುವ ಮಣ್ಣಿನಲ್ಲೂ ಚಿನ್ನದ ಅಂಶ ಇದೆ ಎಂದು ಹೇಳಲಾಗುತ್ತಿದೆ ಈ ಮಣ್ಣಿನಲ್ಲಿ ಚಿನ್ನ ಇದೆಯೋ ಇಲ್ಲವೋ ಎನ್ನುವುದರ ಪರಿಶೀಲನೆ ನಡೆಯಬೇಕು ಎಂದಿದ್ದಾರೆ.

'ಟಿಕೆಟ್‌ ಸಿಕ್ಕಿದ್ರೆ BJPಯಿಂದ, ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ'..!

ಹಾಗಂತ ಸರ್ಕಾರ ಈ ಕೆಲಸ ಮಾಡುತ್ತದೆ ಚಿನ್ನದ ಗಣಿಯನ್ನು ಪುನರ್‌ ಪ್ರಾರಂಭಿಸಲಾಗುತ್ತದೆ ಎನ್ನುವುದಿಲ್ಲ. ಯಾಕೆಂದರೆ ನಾನು ಇಂತಹ ಹೇಳಿಕೆ ಕೊಟ್ಟರೆ ನನ್ನನ್ನು ಮೇಲಿನವರು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ನಾನು ಏನನ್ನೂ ಹೇಳುವುದಿಲ್ಲ. ಅದರ ತಂಟೆಯೇ ನನಗೆ ಬೇಕಿಲ್ಲ ನಾನು ಸಚಿವನಾಗಿದ್ದರೂ ನನಗೆ ಇಂತಹ ಅಧಿಕಾರ ಇಲ್ಲ ಎಂದಿದ್ದಾರೆ.

ಇಲಾಖೆ ಬಗ್ಗೆ ಪ್ರಶ್ನಿಸಿದ್ರೆ ಗರಂ ಆದ್ರು ಅಬಕಾರಿ ಸಚಿವ ನಾಗೇಶ್

ಈ ಹಿಂದೆ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡೋ ಯೋಜನೆ ಇದೆ ಎಂದು ಹೇಳಿಕೆ ನೀಡಿದ್ದ ಸಚಿವರು ಟೀಕೆಗೆ ಗುರಿಯಾಗಿದ್ದರು. ನಂತರದಲ್ಲಿ ಯಾವುದರ ಬಗ್ಗೆ ಪ್ರತಿಕ್ರಿಯೆ ಕೇಳಿದರೂ ಪ್ರತಿಕ್ರಿಯೆ ನೀಡಲು ನಿರಾಕರಿಸುವ ಸಚಿವರು ಫುಲ್ ಗರಂ ಆಗ್ತಾರೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ