ತುಂಗಭದ್ರಾ ತುಂಬಿದ್ರೆ ಸಾಕು ಈ ಗ್ರಾಮದ ಜನ ಜೀವ ಕೈಯಲ್ಲಿ ಹಿಡಿದು ಓಡಾಡ್ತಾರೆ!

By Suvarna News  |  First Published Jun 26, 2022, 5:50 PM IST

* ತುಂಗಭದ್ರಾ ತುಂಬಿದ್ರೆ ಆ ಗ್ರಾಮಕ್ಕೆ ಜಲ ದಿಗ್ಬಂಧನ
* ತುಂಗಭದ್ರಾ ತುಂಬಿದ್ರೆ ಸಾಕು ಈ ಗ್ರಾಮದ ಜನ ಜೀವ ಹಿಡಿದು ಕೈಯಲ್ಲಿ ಓಡಾಡ್ತಾರೆ!
* ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಗುಮ್ಮಗೋಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ


ವರದಿ: ಗಿರೀಶ್ ಕಮ್ಮಾರ ಏಷ್ಯಾನೆಟ್ ಸುವರ್ಣ ನ್ಯೂಸ್..

ಗದಗ, (ಜೂನ್.26):
ಅದು ಮುಳುಗಡೆ ಗ್ರಾಮ.. ತುಂಗಭದ್ರಾ ತುಂಬಿದ್ರೆ ಆ ಗ್ರಾಮಕ್ಕೆ ಜಲ ದಿಗ್ಬಂಧನ ಉಂಟಾಗುತ್ತೆ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಿಹೋಗುತ್ತೆ.. ಮಳೆ ಕಡಿಮೆಯಾಗಿದ್ರು ಸದ್ಯ ಆ ರಸ್ತೆ ಕಿರಿದಾಗಿ ಹಾಳಾಗಿದ್ದು, ಗ್ರಾಮಸ್ಥರು ಕೈಯಲ್ಲಿ ಜೀವ ಹಿಡಿದು ಸಂಚರಿಸುವ ಪರಿಸ್ಥಿತಿ ಎದುರಾಗಿದೆ..

ಕಿರಿದಾದ ರಸ್ತೆ.. ಸ್ವಲ್ಪ ಯಾಮಾರಿದ್ರೂ ಕಥೆ ಮುಗಿದಂತೆ.. ಹಳ್ಳ ದಾಟಿ ಊರು ಸೇರ್ಬೇಕಂದ್ರೆ ಕಿತ್ತೋದ ಸೇತುವೆ ಮೇಲೆ ಸರ್ಕಸ್ ಮಾಡ್ತಾನೇ ಸಾಗ್ಬೇಕು..!

Latest Videos

undefined

ಹೌದು...ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಗುಮ್ಮಗೋಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದು.. ತುಂಗಭದ್ರೆ ಉಕ್ಕಿಹರಿದಾಗ ಹಮ್ಮಿಗಿ ಬ್ಯಾರೇಜ್ ಗೇಟ್ ಹಾಕಿದ್ರೆ ಸಾಕು, ಗುಮ್ಮಗೋಳ ಗ್ರಾಮ ಜಲಾವೃತವಾಗುತ್ತೆ.. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಟ್ ಆಗುತ್ತೆ. ನೀರಿನ ಹೊಡೆತಕ್ಕೆ ಸಿಲುಕಿರುವ ರಸ್ತೆ ಸದ್ಯ ಬಹುತೇಕ ಹಾಳಾಗಿದೆ. ಹೀಗಾಗಿ ಮುಂಡರಗಿ ತಾಲೂಕು ಕೇಂದ್ರದಿಂದ ಬರ್ತಿದ್ದ ಬಸ್ ಸದ್ಯ ಬರ್ತಿಲ್ಲ. ಹೀಗಾಗಿ ಶಾಲೆ, ಕಾಲೇಜಿಗೆ ಹೋಗುವ ಮಕ್ಕಳು ನಡೆದೇ ಹೋಗ್ಬೇಕಾದ ಪರಿಸ್ಥಿತಿ ಎದುರಾಗಿದೆ.

ಗದಗ: ಸರ್ಕಾರಿ ಇಲಾಖೆಗಳಿಂದಲೇ ಭೀಷ್ಮ ​ಕೆ​ರೆ​ ಅತೀ ಹೆಚ್ಚು ಅತಿಕ್ರಮಣ

ಮಹಿಳೆಯರು, ವೃದ್ಧರು ಕೈಯಲ್ಲೇ ಜೀವ ಹಿಡ್ಕೊಂಡು ಓಡಾಡೋ ಪರಿಸ್ಥಿತಿ ಎದುರಾಗಿದೆ‌‌. ಹಮ್ಮಿಗಿ ಗ್ರಾಮದವರೆಗೆ ಐದು ಕಿಲೋ ಮೀಟರ್ ನಡ್ಕೊಂಡು ಬರ್ಬೇಕು.. ಅಲ್ಲಿಂದ ಮುಂದೆ ಮುಂಡರಗಿ ಹೋಗ್ಬೇಕಾದ್ರೆ ಬಸ್ ಸಿಕ್ಕುತ್ತೆ..  ಕಾಲೇಜು ಹೋಗುವ ಹುಡುಗರು ನಿತ್ಯ 5 ಕಿಲೋ ಮೀಟರ್ ನಡೆದೇ ಹೋಗ್ಬೇಕು.. ರೋಗಿಗಳು, ಗರ್ಭಿಣಿಯರು ಬೈಕ್ ಇಲ್ವೆ ನಡೆದೇ ಹಮ್ಮುಗೆ ಸೇರಬೇಕಾದ ಅನಿವಾರ್ಯತೆ ಇದೆ‌..

ಹಮ್ಮಿಗಿ ಬ್ರಿಡ್ಜ್ ಹಿನ್ನೀರಿನಿಂದಾಗಿ ಗ್ರಾಮ ಮುಳುಗಡೆಯಾಗ್ತಾನೇ ಬಂದಿದೆ.. 1998 ರಲ್ಲಿ ಮುಳುಗಡೆ ಗ್ರಾಮಗಳಿಗೆ ನೂತನ ಗ್ರಾಮದ ಜಾಗಯನ್ನ ಗುರುತಿಸಲಾಗಿತ್ತು.. ಜಾಲವಾಡಗಿ ಹುಡ್ಡದ ಬಳಿಯ 35 ಎಕರೆ ಜಾಗದಲ್ಲಿ‌ನೂತನ ಗ್ರಾಮ ನಿರ್ಮಾಣ ಮಾಡ್ಲಾಯ್ತು.. ಮೂಲ ಸೌಕರ್ಯ ಇಲ್ಲ ಅನ್ನೋ ಕಾರಣಕ್ಕೆ ಹೊಸ ಗ್ರಾಮಕ್ಕೆ ಗ್ರಾಮಸ್ಥರು ಕಾಲಿಟ್ಟಿಲ್ಲ.

 ಹಳೆ ಗ್ರಾಮದಲ್ಲೇ ವಾಸ್ತವ್ಯ ಮುಂದುವರೆಸಿದ್ದಾರೆ..  2016 ಹೊಸ ಸೇತುವೆ ನಿರ್ಮಾಣವಾಗಿತ್ತು.. ಎರಡು ವರ್ಷದಲ್ಲೇ ಹಾಳಾಗಿದ್ದ ಸೇತುವೆ ರಸ್ತೆಯನ್ನ 2018 ದುರಸ್ಥಿಯನ್ನೂ ಮಾಡ್ಲಾಗಿದೆ.‌ ಆದ್ರೆ, ಸದ್ಯ ಪರಿಸ್ಥಿತಿ ಮತ್ತೇ ಹದಗೆಟ್ಟಿದೆ.. ನೀರಿನ ಹೊಡೆತಕ್ಕೆ ಸೇತುವೆ ರಸ್ತೆ ಮತ್ತೊಮ್ಮೆ ಹದಗೆಟ್ಟಿದೆ.. ಗ್ರಾಮಸ್ಥರು ಶಾಸಕ ರಾಮಣ್ಣ ಲಮಣಿಯವರನ್ನ ಕೇಳಿದ್ರೆ ತಿಂಗಳಲ್ಲಿ  ಸೇತುವೆ ದುರಸ್ಥಿ ಮಾಡ್ತೀನಿ ಅಂತಾ ಹೇಳಿ ಮೂರು ತಿಂಗಳು ಕಳೀತಾ ಬಂದಿದ್ಯಂತೆ.. ಅಧಿಕಾರಿಗಳು ಹಾರಿಕೆ ಉತ್ತರ ನೀಡ್ತಿದ್ದಾರಂತೆ.. 

ರಸ್ತೆ ಸರಿ ಇಲ್ಲ ಅನ್ನೋ ಕಾರಣಕ್ಕೆ ಬಸ್ ಬರ್ತಿಲ್ಲ.. ವಾಹನ ಸಂಚಾರವೂ ದುಸ್ತರವಾಗಿದೆ.. ಅಧಿಕಾರಿಗಳು, ಜನ ಪ್ರತಿನಿಧಿಗಳು ಆದಷ್ಟು ಬೇಗ ಸಮಸ್ಯೆ ಬಗೆಹರಿಸ್ಬೇಕು.. ಸಂಕಷ್ಟದಲ್ಲಿರೋ ಜನರ ನೋವುಗೆ ಸ್ಪಂದಿಸ್ಬೇಕು..

click me!