ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಂದೇ ಗಾಂಜಾ ನಾಶ
ಜಪ್ತಿ ಮಾಡಿದ್ದ 73 ಕೆ.ಜಿ ಗಾಂಜಾ ಸುಟ್ಟ ಯಾದಗಿರಿ ಪೋಲಿಸರು
ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ಸುಟ್ಟು ಭಸ್ಮ
ಯಾದಗಿರಿ, (ಜೂನ್.26): ದೇಶಾದ್ಯಂತ ಮಾದಕ ದ್ರವ್ಯ ಮಾರಾಟ ಮಾಡೊದನ್ನು ತಡೆಗಟ್ಟಲು ಸರ್ಕಾರ ಹಲವಾರು ಕ್ರಮಕೈಗೊಳ್ಳುತ್ತಿದೆ. ಇದನ್ನು ಸಂಪೂರ್ಣ ನಿಷೇಧ ಮಾಡೋದಕ್ಕೆ ಪಣ ತೊಟ್ಟಿದೆ. ಹಾಗಾಗಿ ಪ್ರತಿ ವರ್ಷ ಜೂ.26 ರಂದು ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ಯಾದಗಿರಿಯಲ್ಲಿ ಇಂದು(ಭಾನುವಾರ) ಲಕ್ಷಾಂತರ ಮೌಲ್ಯದ ಗಾಂಜಾ ನಾಶ ಮಾಡಲಾಯಿತು.ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪೊಲೀಸರು ಜಪ್ತಿ ಮಾಡಿದ್ದ ಗಾಂಜಾವನ್ನು ಸುಟ್ಟು ನಾಶಪಡಿಸಲಾಯಿತು.
ಲಕ್ಷಾಂತರ ಮೌಲ್ಯದ ಮಾದಕ ವಸ್ತು ಸುಟ್ಟು ಭಸ್ಮ
ಯಾದಗಿರಿಯ ಜಿಲ್ಲೆಯ ಪೋಲಿಸರು 73 ಕೆ.ಜಿ ಯಷ್ಟು ಗಾಂಜಾವನ್ನು ಸುಟ್ಟು ನಾಶಪಡಿಸಿದರು. ಬರೊಬ್ಬರಿ ನಾಲ್ಕು ಲಕ್ಷ ರೂ. ಮೌಲ್ಯದ 73 ಕೆ.ಜಿ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದರು. ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 2015 ರಿಂದ 2021 ರವರೆಗೆ ದಾಳಿ ಮಾಡಿ ಜಪ್ತಿ ಮಾಡಲಾಗಿದ್ದ ಗಾಂಜಾವನ್ನು ಯಾದಗಿರಿ ಡಿವೈಎಸ್ಪಿ ಜೇಮ್ಸ್ ಮಿನೇಜಸ್, ತಹಶಿಲ್ದಾರ ಸುರೇಶ ಅಂಕಲಗಿ ಹಾಗೂ ಸಿಪಿಐ ಬಾಪಗೌಡ ಪಾಟೀಲ್ ನೇತೃತ್ವದಲ್ಲಿ ಗಾಂಜಾ ನಾಶ ಮಾಡಲಾಯಿತು.
undefined
Visakhapatnam: 500 ಕೋಟಿ ಮೌಲ್ಯದ 2 ಲಕ್ಷ ಕೇಜಿ ಗಾಂಜಾಕ್ಕೆ ಆಂಧ್ರ ಪೊಲೀಸರಿಂದ ಬೆಂಕಿ
ಯುವಕರು ಚಟಗಳ ದಾಸರೇಗಬೇಡಿ ಎಂದ ಎಸ್ಪಿ
ಹೆಚ್ಚಿನ ಯುವ ಜನತೆ ಶೋಕಿಗಾಗಿ ಗಾಂಜಾ, ಅಫೀಮ್, ಚರಸ್ ನಂತಹ ಕೆಟ್ಟ ಚಟಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಯುವಪಿಳಿಗೆ ಬೆಳೆಯುವ ಹೊತ್ತಿನಲ್ಲೆ ಬಾಡಿಹೋಗುತ್ತಿವೆ. ಹೀಗಾಗಿ ದೇಶಾದ್ಯಂತ ಮಾದಕ ವಸ್ತುಗಳ ಬೆಳೆಯುವುದು, ತಯಾರಿಕೆ ಹಾಗೂ ಮಾರಾಟ ಮಾಡುವುದನ್ನ ನಿಷೇಧಿಸಿದೆ. ಆದ್ರೂ ಯುವ ಜನತೆ ಮಾದಕ ವ್ಯಸನಕ್ಕೆ ತುತ್ತಾಗಿ ಜೀವನ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಚಟಗಳಿಂದ ದೂರ ಉಳಿಸಲು ಸರ್ಕಾರ ಬದ್ದವಾಗಿದೆ. ಮಾದಕ ವಸ್ತುಗಳಿಂದಾಗುವ ಅನಾಹುತಗಳು ತಿಳಿ ಹೇಳಿ ಇದರಿಂದ ದೂರ ಉಳಿದು ಮಾದಕ ವಸ್ತುಗಳು ಮಾರಾಟ ಹಾಗೂ ಬೆಳೆಯುವುದು ಕಂಡು ಬಂದಲ್ಲಿಕೂಡಲೇ ಹತ್ತಿರದ ಪೊಲೀಸರಿಗೆ ಮಾಹಿತಿ ತಿಳಿಸಿ ಪೊಲೀಸರೊಂದಿಗೆ ಸಹಕರಿಸಿ ಅಂತಾ ಯಾದಗಿರಿ ಜಿಲ್ಲಾ ಎಸ್ಪಿ,ಡಾ.ಸಿ.ಬಿ ವೇದಮೂರ್ತಿ ಮನವಿ ಮಾಡಿಕೊಂಡಿದ್ದಾರೆ.
ಕದ್ದುಮುಚ್ಚಿ ಬೆಳೆಯುತ್ತಿರುವ ಗಾಂಜಾ
ಯಾದಗಿರಿ ಜಿಲ್ಲಯ ಬಾರಿ ಮಟ್ಟದಲ್ಲಿ ಗಾಂಜಾ ಜಪ್ತಿಯಾಗಿದ್ದು, ಇದರಿಂದಾಗಿ ಗಾಂಜಾ ಎಂಬ ಮಾದಕ ವಸ್ತವನ್ನು ಅಲ್ಲಲ್ಲಿ ಕದ್ದು ಮುಚ್ಚಿ ಬೆಳೆಯಲಾಗುತ್ತಿದೇಯಾ ಎಬ ಭಾರಿ ಅನುಮಾನ ಮೂಡಿಸಿದೆ. ಪ್ರತಿ ವರ್ಷ ಅಂತರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆ ಕೇವಲ ದಿನಾಚರಣೆಯಾಗಿರದೇ ಯುವ ಜನತೆ ಎಚ್ಚೆತ್ತುಕೊಂಡು ಚಟಗಳ ದಾಸರಾಗದೇ ಬಾಳಬೇಕಿದೆ. ಮಾದಕ ವಸ್ತುಗಳ ವಿರುದ್ದ ಸರ್ಕಾರ ಎನೆಲ್ಲಾ ಕಠಿಣ ಕ್ರಮ ಕೈಗೊಂಡರು ತಮ್ಮ ಲಾಭ ಕ್ಕಾಗಿ ಅಲ್ಲಲ್ಲಿ ಕದ್ದು ಮುಚ್ಚಿ ಬೆಳೆ ಬೆಳೆಯುತ್ತಿರೋದು ವಿಪರ್ಯಾಸ.