ಗುಲಬರ್ಗಾ ವಿವಿ ಮಾಜಿ ಕುಲಪತಿ ಪ್ರೊ. ಮೇಲಕೇರಿ ಕೊರೋನಾದಿಂದ ನಿಧನ

By Suvarna News  |  First Published May 22, 2021, 8:40 PM IST

* ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಹಂಗಾಮಿ ಕುಲಪತಿ ನಿಧನ
*  ಮಹಾಮಾರಿ ಕೊರೋನಾ ಮಹಾಮಾರಿಗೆ ಮಾಜಿ ಹಂಗಾಮಿ ಕುಲಪತಿ ಪ್ರೊ.ಎಸ್‌.ಪಿ. ಮೇಲಕೇರಿ ಬಲಿ
* ಕಲಬುರಗಿಯ ಇಎಸ್‌ಐ ಆಸ್ಪತ್ರೆಯಲ್ಲಿ ನಿಧನ


ಕಲಬುರಗಿ, (ಮೇ.22): ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಹಂಗಾಮಿ ಕುಲಪತಿ ಪ್ರೊ.ಎಸ್‌.ಪಿ. ಮೇಲಕೇರಿ (61) ಅವರನ್ನ ಮಹಾಮಾರಿ ಕೊರೋನಾ ಬಲಿಪಡೆದಿದೆ.

ಇಂದು (ಶನಿವಾರ) ಕಲಬುರಗಿ ನಗರದ ಇಎಸ್‌ಐ ಆಸ್ಪತ್ರೆಯಲ್ಲಿ ನಿಧನರಾದ್ದಾರೆ. ತೀವ್ರ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಮೇಲಕೇರಿ ಅವರು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್‌ ಇರುವುದು ದೃಢಪಟ್ಟಿತ್ತು.

Tap to resize

Latest Videos

ಕರ್ನಾಟಕದಲ್ಲಿ ಮೊದಲ ವೈಟ್ ಫಂಗಸ್ ಪತ್ತೆ..! 

ಕುಲಪತಿಯಾಗಿದ್ದ ಪ್ರೊ.ಎಸ್‌.ಆರ್. ನಿರಂಜನ ಅವರ ಅವಧಿ ಮುಗಿದ ಬಳಿಕ ಮೇಲಕೇರಿ ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು. ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾಗಿ, ಸಮಾಜ ವಿಜ್ಞಾನ ವಿಭಾಗದ ಡೀನ್ ಆಗಿದ್ದರು.

ಸಿಂಗಪುರ, ಅಮೆರಿಕ, ಥೈಲ್ಯಾಂಡ್, ಶ್ರೀಲಂಕಾ, ಮಲೇಷ್ಯಾಕ್ಕೆ ತೆರಳಿ ಪ್ರಬಂಧ ಮಂಡಿಸಿದ್ದರು. ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಬುದ್ಧನ ವಿಚಾರಧಾರೆಗಳ ಬಗ್ಗೆ ಸಂಶೋಧನೆ ನಡೆಸಿದ್ದರು. 

click me!