ಆನ್‌ಲೈನ್ ಪಾಠ : ಜೊತೆಗೆ ಅಶ್ಲೀಲ ಪೋಟೋ ರವಾನಿಸಿದ ಲೆಕ್ಚರರ್‌

Kannadaprabha News   | Asianet News
Published : Feb 13, 2021, 07:51 AM ISTUpdated : Feb 13, 2021, 07:59 AM IST
ಆನ್‌ಲೈನ್ ಪಾಠ : ಜೊತೆಗೆ ಅಶ್ಲೀಲ ಪೋಟೋ ರವಾನಿಸಿದ ಲೆಕ್ಚರರ್‌

ಸಾರಾಂಶ

ಕೊರೋನಾ ಬಳಿಕ ಎಲ್ಲೆಡೆ ಆನ್‌ ಲೈನ್ ತರಗತಿಗಳು ನಡೆಯುತ್ತಿದ್ದು ಇದರಿಂದ ಸಾಕಷ್ಟು ರೀತಿಯ ಅವಾಂತರಗಳೇ ಸೃಷ್ಟಿಯಾಗುತ್ತಿವೆ. ಉಪನ್ಯಾಸಕರೊಬ್ಬರು ಪಾಠದ ಜೊತೆ ಅಶ್ಲೀಲ ಫೊಟೊ ಕಳಿಸಿ ಸಿಕ್ಕಿಬಿದ್ದಿದ್ದಾರೆ. 

ಶ್ರೀರಂಗಪಟ್ಟಣ (ಫೆ.13): ಆನ್‌ಲೈನ್‌ ಪಠ್ಯದ ಜೊತೆಗೆ ಆಶ್ಲೀಲ ಫೋಟೊ ರವಾನೆ ಮಾಡಿದ ಅತಿಥಿ ಉಪನ್ಯಾಸಕರೊಬ್ಬರನ್ನು ಸೇವೆಯಿಂದ ಬಿಡುಗಡೆ ಗೊಳಿಸಿರುವ ಘಟನೆ ಕೆ.ಆರ್‌ .ಸಾಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದಿದೆ. 

ಕೆ.ಆರ್‌ .ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ಹಲವು ವರ್ಷಗಳಿಂದ ಸೇವೆಯಲ್ಲಿದ್ದ ಅತಿಥಿ ಉಪನ್ಯಾಸಕರೊಬ್ಬರು ಸೋಮವಾರ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಠ್ಯ ಕಳುಹಿಸುವ ಜೊತೆಗೆ ಆಶ್ಲೀಲ ಫೋಟೊ ಕಳುಹಿಸಿರುವುದು ವಾಟ್ಸಾಪ್‌ ಗ್ರೂಪಿನಲ್ಲಿದ್ದ ಇತರೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಂದ ಕಾಲೇಜಿನ ಪ್ರಾಂಶುಪಾಲೆ ಹಂಸವೇಣಿ ಅವರ ಗಮನಕ್ಕೆ ತಂದಿದ್ದಾರೆ. 

ಚಿಕ್ಕಮಗಳೂರು; ಮಗು ಕೈಗೆ ಕೊಟ್ಟು ಕಾಲು ಕಿತ್ತ ಎಸ್ಟೇಟ್ ಮಾಲೀಕ! ...

ನಂತರ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕರ ಜೊತೆ ಚರ್ಚಿಸಿದ ಪಾಂಶುಪಾಲೆ ಹಂಸವೇಣಿ ನಿರ್ದೇಶನದಂತೆ ಕಾಲೇಜಿನ ಹಿತದೃಷ್ಟಿಯಿಂದ ಆ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸಿರುವುದಾಗಿ ತಿಳಿಸಿದ್ದಾರೆ.

PREV
click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!