'ಎರಡು ವರ್ಷ GT ದೇವೇಗೌಡ ಜೆಡಿಎಸ್‌ನಲ್ಲಿ ಇರುತ್ತಾರೆ'

Kannadaprabha News   | Asianet News
Published : Feb 24, 2021, 10:43 AM ISTUpdated : Feb 24, 2021, 11:47 AM IST
'ಎರಡು ವರ್ಷ GT ದೇವೇಗೌಡ ಜೆಡಿಎಸ್‌ನಲ್ಲಿ ಇರುತ್ತಾರೆ'

ಸಾರಾಂಶ

ಮುಂದಿನ ಎರಡು ವರ್ಷಗಳ ಕಾಲ ಈ ನಾಯಕ ಜೆಡಿಎಸ್‌ನಲ್ಲಿಯೇ ಇರುತ್ತಾರೆ. ಹೀಗೆಂದು ಮಾಜಿ ಸಿಎಂ ಎಚ್‌ಡಿಕೆ ಹೇಳಿದ್ದಾರೆ. ಅಲ್ಲದೇ ಆ ನಂತರವೂ ಇಲ್ಲಿಯೇ ಇರಬಹುದು ಎಂದರು. 

ಮೈಸೂರು (ಫೆ.24) : ಶಾಸಕ ಜಿ.ಟಿ. ದೇವೇಗೌಡರು ಮುಂದಿನ ಎರಡು ವರ್ಷ ಜೆಡಿಎಸ್‌ನಲ್ಲಿಯೇ ಇರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಅದರ ನಂತರವು ಅವರ ಮನಪರಿವರ್ತನೆಯಾಗಿ ಜೆಡಿಎಸ್‌ನಲ್ಲೇ ಇರಬಹುದು. 

ನಾಳಿನ ನಗರ ಪಾಲಿಕೆ ಚುನಾವಣೆಯಲ್ಲಿ ಅವರು ಬಂದು ಮತ ಹಾಕುತ್ತಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಹಿಂದುತ್ವದ ಬಗ್ಗೆ ಮಾತನಾಡುವವರ ಹೃದಯದಲ್ಲಿ ಹಿಂದುತ್ವ ಇದ್ಯಾ? ಕುಮಾರಸ್ವಾಮಿ ಪ್ರಶ್ನೆ .

ಜೆಡಿಎಸ್‌ ಪಕ್ಷದ ಪರವಾಗಿಯೇ ಮತ ಹಾಕುವ ವಿಶ್ವಾಸವಿದೆ. ಸದ್ಯಕ್ಕೆ ಅವರು ಜೆಡಿಎಸ್‌ ಬಿಟ್ಟಿದ್ದೀನಿ ಅಂತ ಎಲ್ಲಿಯೂ ಹೇಳಿಲ್ಲ. ಮುಂದಿನ ಎರಡು ವರ್ಷ ಇಲ್ಲೆ ಇರ್ತಾರೆ ಅದರ ನಂತರವು ಇಲ್ಲೇ ಇರಬಹುದು ಎಂದರು.

ಶೀಘ್ರದಲ್ಲೇ ಮೈಸೂರು ಮೇಯರ್ ಚುನಾವಣೆ ನಡೆಯಲಿದ್ದು ಈ ಚುನಾವಣೆಯ ಮೈತ್ರಿಯ ಮಾತುಕತೆ ಇನ್ನೂ ನಡೆಯುತ್ತಿದೆ. ಆದರೆ ಜೆಡಿಎಸ್ ಬೆಂಬಲ ಯಾರಿಗೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ.
 

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ