‘ನನ್ನನ್ನು ಬಿಜೆಪಿ ಜತೆ ಕಳಿಸಿದ್ದೆ ಕುಮಾರಸ್ವಾಮಿ’ ಹಳೆ ಮೈಸೂರಿನ ಪ್ರಭಾವಿ ನಾಯಕ

Published : Sep 15, 2019, 09:40 PM ISTUpdated : Sep 15, 2019, 09:45 PM IST
‘ನನ್ನನ್ನು ಬಿಜೆಪಿ ಜತೆ ಕಳಿಸಿದ್ದೆ ಕುಮಾರಸ್ವಾಮಿ’ ಹಳೆ ಮೈಸೂರಿನ ಪ್ರಭಾವಿ ನಾಯಕ

ಸಾರಾಂಶ

ಮೈಸೂರಿನಲ್ಲಿ ಜಿಟಿ ದೇವೇಗೌಡ ಬಾಂಬ್/ ದಸರಾ ಮಾಡಲು ಬಿಜೆಪಿ ಜತೆ ಹೋಗು ಎಂದು ಹೇಳಿದ್ದೆ ಕುಮಾರಸ್ವಾಮಿ/ ಅವರು ಹೇಳಿದ ಕೆಲಸವನ್ನೂ ಮುಂದೆಯೂ ಮಾಡುತ್ತೇನೆ

ಮೈಸೂರು[ಸೆ. 15]  ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೇ ನನ್ನನ್ನು ದಸರಾ ಮಾಡಲು ಬಿಜೆಪಿ ಜೊತೆ ಕಳುಹಿಸಿದ್ದಾರೆ ಎಂದು ಜಿಟಿ ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಬಿಜೆಪಿ ಜೊತೆ ತೆರಳುವಂತೆ ಕುಮಾರಸ್ವಾಮಿ ಅವರೇ ಕಳುಹಿಸಿದ್ದರು ಎಂದು ಹೇಳಿದ್ದು ರಾಜಕಾರಣದ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅವರು ನೀಡಿದ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ, ಈಗಲೂ ನಿಭಾಯಿಸುತ್ತೇನೆ ಎಂದೂ ಹೇಳಿದ್ದಾರೆ.

ಮೈತ್ರಿ ಪತನ, HDD ಕುಟುಂಬದ ಕಣ್ಣೀರಿಗೆ ಕಾರಣ ಯಾರು? ವಿಶ್ವನಾಥ್ ಬಾಯಿಂದಲೇ ಕೇಳಿ

ಜೆಡಿಎಸ್ ನಿಂದ ಜಿಟಿ ದೇವೇಗೌಡ ಸೇರಿ 20ಕ್ಕೂ ಅಧಿಕ ಶಾಸಕರು ಬೇರೆ ಬೇರೆ ಪಕ್ಷದ ಕಡೆ ಮುಖ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಜಿಟಿ ದೇವೇಗೌಡ ಈ ರೀತಿಯ ಹೇಳಿಕೆ ಕೊಟ್ಟಿರುವುದು ಯಾವ ಅರ್ಥದಲ್ಲಿ ಎಂಬ ಪ್ರಶ್ನೆಯೂ ಮೂಡಿದೆ.

PREV
click me!

Recommended Stories

ಮಣ್ಣಲ್ಲಿ ಮರೆಯಾಗಿದ್ದ ಜೈನರ ಕಾಲದ ಕಲ್ಯಾಣಿಗೆ ಮರುಜೀವ ನೀಡಿದ ಉದ್ಯೋಗ ಖಾತ್ರಿ ಯೋಜನೆ
ನಟಿ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿಯಿಂದ ಗಲಾಟೆ; ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ!