Bengaluru: GST ಕಚೇರಿಯಲ್ಲಿ ಲೋಕಾಯುಕ್ತರ ಮಹತ್ವದ ಬೇಟೆ, ಲಕ್ಷ ಲಕ್ಷ ಲಂಚ ಸ್ವೀಕರಿಸುತ್ತಿದ್ದ ಸೂಪರಿಂಟೆಂಡೆಂಟ್ ಅರೆಸ್ಟ್

Published : Sep 17, 2026, 05:05 PM IST
Bengaluru Lokayukta Traps

ಸಾರಾಂಶ

ಬೆಂಗಳೂರಿನ ಜಿ.ಎಸ್.ಟಿ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಮೋಹಿತ್ ಪ್ರತಾಪ್ ಸಿಂಗ್ 8 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಬ್ಬಿಣ ಅಂಗಡಿ ಮಾಲೀಕರಿಂದ ತೆರಿಗೆ ನೆಪದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗ ಈ ಕಾರ್ಯಾಚರಣೆ ನಡೆದಿದೆ. ಭ್ರಷ್ಟ ಅಧಿಕಾರಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.

ಬೆಂಗಳೂರು: ₹50 ಲಕ್ಷ ಲಂಚದ ಹಣ ಪಡೆಯುತ್ತಿದ್ದ ವೇಳೆ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಲೋಕಾಯುಕ್ತ ದಾಳಿಗೆ ಬಿದ್ದ ಘಟನೆ ಮಾಸುವ ಮುನ್ನವೇ ಕರ್ನಾಟಕ ಲೋಕಾಯುಕ್ತ ಪೊಲೀಸರು ಮತ್ತೊಂದು ಮಹತ್ವದ ದಾಳಿಯನ್ನು ಕೈಗೊಂಡಿದೆ. ಬೆಂಗಳೂರಿನ ಜಿ.ಎಸ್.ಟಿ ಕಚೇರಿಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದು, ಜಿ.ಎಸ್.ಟಿ ಸೂಪರಿಂಟೆಂಡೆಂಟ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಕೊಟ್ಟ ಬ್ಯುಸಿನೆಸ್‌ಮ್ಯಾನ್

ಬರೋಬ್ಬರಿ ₹8 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಜಿ.ಎಸ್.ಟಿ ಸೂಪರಿಂಟೆಂಡೆಂಟ್ ಮೋಹಿತ್ ಪ್ರತಾಪ್ ಸಿಂಗ್ ರೆಡ್‌ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಕಬ್ಬಿಣ ಅಂಗಡಿ ಮಾಲೀಕರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಂಬಂಧ ದೂರು ಬಂದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಜಿಯೋ ಟ್ರೇಡರ್ಸ್ ಮಾಲೀಕ ಜಮೀರ್ ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೊದಲು 20 ಲಕ್ ರೂಪಾಯಿಗೆ ಬೇಡಿಕೆ ಇಟ್ಟ ಅಧಿಕಾರಿ ಕೊನೆಗೆ 8 ಲಕ್ಷ ರೂಪಾಯಿ ಡೀಲ್ ಕುದುರಿಸಿದ್ದನಂತೆ. ಈ ಸಂಬಂಧ ಅಂಗಡಿ ಮಾಲೀಕ ಸುಭಾಷ್ ಎಸ್ ದೂರು ನೀಡಿದ್ದು, ಈ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ₹8 ಲಕ್ಷ ಹಣ ಸ್ವೀಕರಿಸುವ ವೇಳೆ ನೇರವಾಗಿ ಟ್ರ್ಯಾಪ್ ಮಾಡಿದ್ದಾರೆ.

ಜಿಎಸ್‌ಟಿ ಅಧಿಕಾರಿಯನ್ನ ವಶಕ್ಕೆ ಪಡೆದ ಲೋಕಾಯುಕ್ತ

ಎಸ್‌ಪಿ ಶಿವಕುಮಾರ್, ಡಿವೈಎಸ್‌ಪಿ ಭರತ್ ರೆಡ್ಡಿ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಿ ಜಿ.ಎಸ್.ಟಿ ಸೂಪರಿಂಟೆಂಡೆಂಟ್ ಅವರನ್ನು ಟ್ರ್ಯಾಪ್ ಮಾಡಿದ್ದಾರೆ. ಜಿ.ಎಸ್.ಟಿ ಸೂಪರಿಂಟೆಂಡೆಂಟ್ ಮೋಹಿತ್ ಪ್ರತಾಪ್ ಸಿಂಗ್‌ರನ್ನು ವಶಕ್ಕೆ ಪಡೆದುಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಲಂಚದ ಹಣ ಮತ್ತು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

20 ಲಕ್ಷಕ್ಕೆ ಬೇಡಿಕೆ, 8 ಲಕ್ಷಕ್ಕೆ ಡೀಲ್ ಫೈನಲ್

ಈ ಸಂಬಂಧ ಮಾತನಾಡಿರುವ ಕಬ್ಬಿಣ ಅಂಗಡಿ ಮಾಲೀಕ ಸುಭಾಷ್, 4 ವರ್ಷಗಳಿಂದ ಕಬ್ಬಿಣದ ವ್ಯವಹಾರ ಮಾಡುತ್ತಿದ್ದೇವೆ. ಒಂದು ಕೆಜಿಗೆ ನಮಗೆ ಕೇವಲ 50 ಪೈಸೆ ಲಾಭ ಸಿಗುತ್ತದೆ. ಜಿಎಸ್‌ಟಿ ಹಾಗೂ ಸೆಂಟ್ರಲ್ ಜಿಎಸ್‌ಟಿ ನಿಯಮಿತವಾಗಿ ಪಾವತಿ ಮಾಡಿದ್ದೇವೆ. ವ್ಯವಹಾರದ ಎಲ್ಲಾ ಬಿಲ್‌ಗಳು ಮತ್ತು ದಾಖಲೆಗಳು ನಮ್ಮ ಬಳಿ ಇವೆ. ಇದುವರೆಗೂ ಸುಮಾರು ₹3.5 ಕೋಟಿ ಮೌಲ್ಯದ ವ್ಯವಹಾರ ಮಾಡಿದ್ದೇವೆ. ಅಲ್ಲದೇ ₹3.5 ಕೋಟಿ ವ್ಯವಹಾರಕ್ಕೂ ಸರ್ಕಾರಕ್ಕೆ ತೆರಿಗೆ ಪಾವತಿಸಿದ್ದೇವೆ. ಆದರೂ ತೆರಿಗೆ ಕಟ್ಟಿಲ್ಲ ಎಂದು ಆರೋಪಿಸಿ ಅಧಿಕಾರಿಗಳಿಂದ ₹50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ₹8 ಲಕ್ಷಕ್ಕೆ ಲಂಚದ ಡೀಲ್ ಕುದುರಿಸಿದ್ದರು.

ಆದರೆ, ಅಧಿಕಾರಿಗಳೊಂದಿಗೆ ನಡೆದ ಮಾತುಕತೆಯನ್ನೆಲ್ಲ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದೆ. ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ₹8 ಲಕ್ಷ ಲಂಚ ಸ್ವೀಕರಿಸುವ ವೇಳೆ ಜಿಎಸ್‌ಟಿ ಅಧಿಕಾರಿ ಮೋಹಿತ್ ಪ್ರತಾಪ್ ಸಿಂಗ್ ಲೋಕಾಯುಕ್ತ ಬಲೆಗೆ ಕೆಡವಿದ್ದಾರೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ನನಗೆ ಆದ ಪರಿಸ್ಥಿತಿ ಬೇರೆ ಯಾವುದೇ ವ್ಯಾಪಾರಿಗೂ ಬರಬಾರದು ಎಂದು ಸುಭಾಷ್ ಮನವಿ ಮಾಡಿದ್ದಾರೆ.

PREV
Read more Articles on
click me!

Recommended Stories

ನೆಲಮಂಗಲದ ಮಂಡಿಗೆರೆಯಲ್ಲಿ ಕ್ರಿ.ಶ.1050ರ ಚೋಳ ಸಾಮ್ರಾಜ್ಯದ ರಾಜಾಧಿರಾಜನ ಶಾಸನ ಪತ್ತೆ!
ಇಂದಿರೆಯ ಸ್ಥಳದಲ್ಲಿ ಇನ್ನು ನಂದಿನಿಗೂ ಜಾಗ, ಬೆಂಗಳೂರಿನ 79 ಇಂದಿರಾ ಕ್ಯಾಂಟೀನ್‌ನಲ್ಲಿ ನಂದಿನಿ ಬೂತ್‌!