ಕಳೆದ ವರ್ಷ ಮದಲೂರು ಕೆರೆಗೆ ನೀರು ಹರಿಸಿದ ಪರಿಣಾಮ ಈ ವರ್ಷ ಶಿರಾ ಕ್ಷೇತ್ರದಲ್ಲಿ ಮಳೆಯ ಅಭಾವ ಇದ್ದರೂ ಸಹ ತಾಲೂಕಿನಲ್ಲಿ ಅಂತರ್ಜಲ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ದೂರಾಗಿದೆ. ಈ ವರ್ಷವೂ ಸಹ ಮದಲೂರು ಕೆರೆಗೆ ನೀರು ಹರಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಹೇಳಿದರು.
ಶಿರಾ : ಕಳೆದ ವರ್ಷ ಮದಲೂರು ಕೆರೆಗೆ ನೀರು ಹರಿಸಿದ ಪರಿಣಾಮ ಈ ವರ್ಷ ಶಿರಾ ಕ್ಷೇತ್ರದಲ್ಲಿ ಮಳೆಯ ಅಭಾವ ಇದ್ದರೂ ಸಹ ತಾಲೂಕಿನಲ್ಲಿ ಅಂತರ್ಜಲ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ದೂರಾಗಿದೆ. ಈ ವರ್ಷವೂ ಸಹ ಮದಲೂರು ಕೆರೆಗೆ ನೀರು ಹರಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಹೇಳಿದರು.
ಶನಿವಾರ ತಾಲೂಕಿನ ಲಕ್ಷ್ಮೇಸಾಗರ ಗ್ರಾಪಂ ವ್ಯಾಪ್ತಿಯ ದೇವರಹಳ್ಳಿ ಗ್ರಾಮದ ಶ್ರೀ ಲಕ್ಷ್ಮೇ ಕ್ಕೆ 2021-22 ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ನೀಡಲಾಗಿದ್ದ 2 ಲಕ್ಷ ರುಪಾಯಿ ಚೆಕ್ ವಿತರಣೆ ಮಾಡಿ ಮಾತನಾಡಿದರು. ದೇವಸ್ಥಾನಗಳ ಅಭಿವೃದ್ಧಿಗೆ ನೀಡುವಂತಹ ಅನುದಾನದ ಜೊತೆಗೆ ಗ್ರಾಮಸ್ಥರು ಹಾಗೂ ಉಳ್ಳವರು ಕೈಜೋಡಿಸಿ ಉತ್ತಮ ದೇವಸ್ಥಾನಗಳನ್ನು ನಿರ್ಮಿಸಬೇಕಿದೆ. ದೇವಾಲಯ ಸುಂದರ ರೂಪದೊಂದಿಗೆ ಭಕ್ತಿಯಿಂದ ಕೂಡಿದ್ದರೆ ದೇವರು ಸಾಕ್ಷಾತ್ಕರಿಸುತ್ತಾನೆ. ಇದರಿಂದ ದೇವರ ಕೃಪಾಶೀರ್ವಾದ ಜನ ಸಾಮಾನ್ಯರ ಮೇಲೆ ಇರಲಿದ್ದು, ಜನರ ನೆಮ್ಮದಿ ಬದುಕಿಗೆ ಭದ್ರ ಬುನಾದಿಯಾಗಲಿದೆ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಎರಡೂವರೆ ವರ್ಷದ ಅವಧಿಯಲ್ಲಿ ತಾಲೂಕಿನ ಎಲ್ಲಾ ಸಮುದಾಯದ ದೇಗುಲಗಳಿಗೆ ಸುಮಾರು 10 ಕೋಟಿ ರುಪಾಯಿ ಅನುದಾನ ನೀಡಿ ಜೀರ್ಣೋದ್ಧಾರ ಪಡಿಸಿರುವುದು ಸಾರ್ಥಕತೆ ಎನಿಸುತ್ತದೆ ಎಂದರು.
undefined
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಡಿ.ಎಚ್.ಗೌಡ, ಶಿವರಾಜ್, ಮನೋಜ್, ಪ್ರಸನ್ ಕುಮಾರ್, ರಾಜೇಗೌಡ, ರಾಮೇಗೌಡ, ಹನುಮಂತರಾಜು, ಶಿವಣ್ಣ, ಗೋವಿಂದರಾಜು, ಕರಿಯಪ್ಪ, ಕೆ.ಹನುಮಂತಪ್ಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
12ಶಿರಾ1: ಶಿರಾ ತಾಲೂಕು ದೇವರಹಳ್ಳಿ ಗ್ರಾಮದ ಶ್ರೀ ಲಕ್ಷ್ಮೇ ದೇವಸ್ಥಾನಕ್ಕೆ 2021-22ನೇ ಸಾಲಿನ ಶಾಸಕರ ಸ್ಥಳೀಯ ಅಭಿವೃದ್ಧಿ ಅನುದಾನದಲ್ಲಿ ನೀಡಿದ್ದ 2 ಲಕ್ಷ ರು.ಗಳ ಚೆಕ್‌ನ್ನು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ದೇವಸ್ಥಾನ ಸಮಿತಿಯವರಿಗೆ ಹಸ್ತಾಂತರಿಸಿದರು.